ಮಕ್ಕಳ ಮನಸ್ಸನ್ನು ಪ್ರೀತಿ, ವಿಶ್ವಾಸದಿಂದ ಗೆದ್ದು ಅವರ ಉಜ್ವಲ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುವ ಅಂಗನವಾಡಿ ಕಾರ್ಯಕರ್ತೆಯರು ನಿಜವಾದ ಶಿಲ್ಪಿಗಳು ಎಂದು ನಾಗಡದಿನ್ನಿ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯ ಶಿಕ್ಷಕ ರವಿ ಜಾಪಾಂಡೆ ಅಭಿಪ್ರಾಯಪಟ್ಟರು.
ಅರಕೇರಾ, ಸೆ.28: ಗಾಣಧಾಳ ಗ್ರಾಮ ಪಂಚಾಯಿತಿಯನ್ನು ಅರಕೇರಾ ತಾಲ್ಲೂಕಿನಲ್ಲಿಯೇ ಮುಂದುವರಿಸುವುದರ ಜೊತೆಗೆ ಗಾಣಧಾಳ ಗ್ರಾಮವನ್ನು ಹೋಬಳಿ ಕೇಂದ್ರವನ್ನಾಗಿ ಘೋಷಿಸಿ, ನಾಡ ಕಚೇರಿ ಸ್ಥಾಪಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ಅರಕೇರಾ, ಸೆ.27: ಸತ್ಸಂಗ ಎಂದರೆ ಕೇವಲ ಎಲ್ಲರೂ ಒಂದೆಡೆ ಸೇರಿ ಕುಳಿತುಕೊಳ್ಳುವುದಲ್ಲ, ಸತ್ಯದ ಸಂಗ ಮಾಡುವುದು. ಸತ್ಯದ ಅರಿವು ಮೂಡಿದಾಗ ಮಾತ್ರ ಜೀವನದ ಅನುಭವಕ್ಕೆ ಪರಮಾರ್ಥದ ಅರ್ಥ ಸಿಗುತ್ತದೆ ಎಂದು ಪಂಜಾಬ್ ರಾಜ್ಯದ ಜಲಂಧರ ವಾಲ್ಮೀಕಿ ಆಶ್ರಮದ ಪೀಠಾಧಿಪತಿ ರಾಜಯೋಗಿ ಶಿವನಾಥ ಮಹಾರಾಜರು ಹೇಳಿದರು.