ರಾಯಚೂರು ಸೆ. 29 (ಕರ್ನಾಟಕ ವಾರ್ತೆ): ರಾಯಚೂರು ನಗರದಲ್ಲಿ ಅಕ್ಟೋಬರ್ 20ರ ಬೆಳಿಗ್ಗೆ 12.30ಕ್ಕೆ ನಾಡ ಹಬ್ಬ ದಸರಾ ಆಚರಣೆ ಹಿನ್ನೆಲೆಯಲ್ಲಿ ಇಂದು ಮಹಾನಗರ ಪಾಲಿಕೆಯ ಜೋನಲ್ 01ರ ಕಚೇರಿಯ ಸಭಾಂಗಣದಲ್ಲಿ ಪಾಲಿಕೆಯ ಆಯುಕ್ತರ ಅಧ್ಯಕ್ಷತೆ ಪೂರ್ವಭಾವಿ ಸಭೆ ಯಶಸ್ವಿಯಾಗಿ ಜರುಗಿತು.

ಈ ವೇಳೆ ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೊಹೊಪಾತ್ರ ಅವರು ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಕರ್ನಾಟಕ ವಿಧಾನ ಪರಿಷತ್ತಿಗೆ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಈ ಚುನಾವಣಾ ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ರಾಯಚೂರು ನಗರದಲ್ಲಿ ಅರ್ಥಪೂರ್ಣ ಹಾಗೂ ಸಡಗರದಿಂದ ದಸರಾ ಆಚರಣೆಗೆ ಅಗತ್ಯ ಸಿದ್ದತೆ ಮಾಡಿಕೊಳ್ಳುವಂತೆ ಸಂಬAಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ದಸರಾ ಹಬ್ಬದ ಅಂಗವಾಗಿ ಅಕ್ಟೋಬರ್ 20ರ ಬೆಳಿಗ್ಗೆ 12:30 ಗಂಟೆಗೆ ರಾಯಚೂರು ಮಹಾನಗರ ಪಾಲಿಕೆ ಜೋನಲ್ 01ರ ಕಚೇರಿಯಿಂದ ಮೆರವಣಿಗೆಯನ್ನು ಪ್ರಾರಂಭ ಮಾಡಿ,ಸಾಯಂಕಾಲ 6ಗಂಟೆಗೆ ಬನ್ನಿ ಮಂಟಪ ತಲುಪುವುದು. ಇದಕ್ಕಾಗಿ ನಾಡದೇವಿ ಮಾತೆಯ ಭಾವಚಿತ್ರ ಮೆರವಣಿಗೆಗೆ ಅಗತ್ಯ ಸಿದ್ದತೆ ಮಾಡಿಕೊಳ್ಳುವಂತೆ ಸಂಬAಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಬನ್ನಿ ಮಂಟಪದಲ್ಲಿ ದೀಪಾಲಂಕಾರ, ಶ್ಯಾಮಿಯಾನ್, ಚೆರ್ ಮತ್ತು ಕಚೇರಿಯಲ್ಲಿ ಶಾಮಿಯಾನ, ಚೇರ್, ದೀಪಾಲಂಕಾರ ಹಾಗೂ ಮೆರವಣಿಗೆಯಲ್ಲಿ ಸೌಂಡ್ ಸಿಸ್ಟಮ್ ವ್ಯವಸ್ಥೆಯನ್ನು ಕೈಗೊಳ್ಳಬೇಕು. ದಸರಾ ಮೆರವಣಿಗೆಯಲ್ಲಿ ಸರ್ಕಾರಿ ಅಥವಾ ಖಾಸಗಿ ಶಾಲೆಗಳಿಂದ ಸಂಬAಧಪಟ್ಟ ಶಿಕ್ಷಕರ ವತಿಯಿಂದ ತಂಡವನ್ನು ರಚಿಸಿ ಸುಮಾರು 15 ಗುಂಪುಗಳನ್ನು (ತಂಡ) ರಚಿಸಲು ಸೂಕ್ತ ನಿರ್ದೇಶನವನ್ನು ಆಯಾ ಶಾಲೆಯ ಮುಖ್ಯಸ್ಥರಿಗೆ ನೀಡಬೇಕು. ಈ ದಸರಾ ಮೆರವಣಿಗೆಯಲ್ಲಿ ಸಾಂಸ್ಕೃತಿ ಕಲಾಪ್ರದರ್ಶನ ಮಾಡಬೇಕೆಂದರು.

ದಸರಾ ಆಚರಣೆಗೆ ರಾಯಚೂರು ಸಾರ್ವಜನಿಕರು ಸೂಕ್ತ ಸಲಹೆಗಳನ್ನು ನೀಡುವ ಮೂಲಕ ಜೊತೆಗೆ ತಾವೂ ಕೂಡ ಕೈಜೋಡಿಸಿ ಹೇಗೆ ಸಹಾಯ ಮಾಡಬಹುದು ಎಂಬುದನ್ನು ತಿಳಿಸಬೇಕು. ಬರಗಾಲದ ಪರಿಸ್ಥಿತಿ ಮತ್ತು ನಗರ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ವಿವಿಧ ಸಮಸ್ಯೆಗಳನ್ನು ಗುರುತಿಸಿ ಅವುಗಳಿಗೆ ಪರಿಹಾರ ನೀಡಲಾಗುವುದು. ಅಲ್ಲದೆ ಮೂಲಭೂತ ಸೌಕರ್ಯಗಳಿಗೆ ಪಾಲಿಕೆಯ ಅನುದಾನ ಲಭ್ಯತೆಗೆ ತಕ್ಕಂತೆ ಕೆಲಸಗಳಿಗೆ ಪ್ಲಾನ್ ಮಾಡಬೇಕಾಗುತ್ತದೆ ಎಂದರು.

ಸದರಿ ದಿನಾಂಕದAದು ಮಹಾನಗರ ಪಾಲಿಕೆಯ ಸಿಬ್ಬಂದಿ ವರ್ಗದವರು, ಶಾಲೆಯ ಶಿಕ್ಷಕರು, ಶಾಲೆಯ ಮಕ್ಕಳು ಈ ಮೆರವಣಿಗೆಯಲ್ಲಿ ಭಾಗವಹಿಸಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸ್ಥಳೀಯ ಕಲಾತಂಡಗಳಿAದ ಕನಿಷ್ಠ 15 ಕಲಾ ತಂಡವನ್ನು ಆಹ್ವಾನಿಸಿ ಮೆರವಣಿಗೆಯಲ್ಲಿ ಪ್ರದರ್ಶನ ನೀಡಬೇಕು. ನಗರದ ಪ್ರಮುಖ ವೃತ್ತಗಳಲ್ಲಿ ದೀಪ ಅಲಂಕಾರ ಮತ್ತು ವಿವಿಧ ಅಲಂಕಾರ ಮಾಡಬೇಕು. ಸದರಿ ಮೆರವಣಿಗೆಯಲ್ಲಿ ರಥ ಮತ್ತು ರಥಕ್ಕೆ ಅಲಂಕಾರ ವ್ಯವಸ್ಥೆ ಮಾಡಿ, ಸ್ವ-ಸಹಾಯ ಗುಂಪುಗಳಿAದ 200 ಮಹಿಳೆಯರ 2 ತಂಡಗಳು ಕುಂಭಮೇಳ ಜರುಗಿಸಲು ಅಗತ್ಯ ಕ್ರಮ ವಹಿಸಬೇಕೆಂದು ಸಂಬAಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಇದೇ ಸಂದರ್ಭದಲ್ಲಿ ರಾಯಚೂರು ಮಹಾನಗರ ಪಾಲಿಕೆಯ ಆಡಳಿತ ವಿಭಾಗದ ಉಪ ಆಯುಕ್ತರಾದ ಶರಣಪ್ಪ, ಮುರಾಳಿಧರ್, ಪಾಲಿಕೆಯ ಅಭಿವೃದ್ಧಿ ವಿಭಾಗದ ಉಪ ಆಯುಕ್ತ ಭರತ್ ಸೇರಿದಂತೆ ಮುಖಂಡರಾದ ಕೆ.ಶಾಂತಪ್ಪ, ಜಯಣ್ಣ, ಕನ್ನಡ ಪರ ಸಂಘಟನೆಯ ಮುಖಂಡರಾದ ಶರಣಪ್ಪ, ಶಿವುಕುಮಾರ್, ವಾಣಿಜ್ಯೋದಮ ಸಂಘದ ಅಧ್ಯಕ್ಷರಾದ ಕಮಲ್ ಕಿಶೋರ್, ಕಲ್ಯಾಣ ಸಮಿತಿಯ ಜಯಂತ್ ರಾವ್ ಪತ್ತಂಗೆ, ಶಿಲ್ಪ ಮೆಡಿಕಲ್ ಲಕ್ಷಿö್ಮÃಕಾಂತ್, ಸಾಹಿತ್ಯಿಗಳಾದ ವೆಂಕಟೇಶ ಬೆವಿನಂಚಿ, ಆಂಜಿನೇಯ, ಈರಣ್ಣ ಸೇರಿದಂತೆ ಇತರರು ಇದ್ದರು. ಕೃಷ್ಣ ಕಟ್ಟಿಮನಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.