ರಾಯಚೂರು ಸೆ. 29 (ಕರ್ನಾಟಕ ವಾರ್ತೆ): ಕರ್ನಾಟಕದಲ್ಲಿ ಜನಿಸಿದ ಹೆಸರಾಂತ ಇಂಜಿನಿಯರ್ ಸರ್ ಎಂ.ವಿಶ್ವೇಶ್ವರಯ್ಯನವರ ತಂತ್ರಾAಶಗಳು ಮತ್ತು ಅಮೆರಿಕಾದಲ್ಲಿ ಜನಿಸಿದ ಹೆಸರಾಂತ ಕೃಷಿ ವಿಜ್ಞಾನಿ ಪ್ರೊಫೆಸರ್ ಮೇಸನ್ ವಾಗ್ ಅವರ ಕೃಷಿ ಆಧಾರಿತ ಆಶಯಗಳೊಂದಿಗೆ ಈ ಮಹಾವಿದ್ಯಾಲಯ ನಡೆಯುತ್ತಿರುವುದು ತುಂಬಾ ಮೆಚ್ಚುಗೆಯಾದಂತ ಮತ್ತು ಸ್ಮರಿಸುವಂತಹ ವಿಷಯವಾಗಿದೆ ಎಂದು ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ ರಾಯಚೂರಿನ ನಿರ್ದೇಶಕರಾದ ಡಾ. ಹರೀಶ್ ಕುಮಾರ್ ಸರ್ದಾನ ಅವರು ಹೇಳಿದರು.

ಸೆಪ್ಟಂಬರ್ 29ರ ಮಂಗಳವಾರ ದಂದು ನಗರದ ಕೃಷಿ ತಾಂತ್ರಿಕ ಮಹಾವಿದ್ಯಾಲಯ ರಾಯಚೂರು ಆಯೋಜಿಸಿದ ಇಂಜಿನಿಯರ್ಸ್ ದಿನ-2026ರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಅವರು ಮಾತನಾಡಿದರು.

ಇಂದಿನ ಕಾಲದ ವಿದ್ಯಾರ್ಥಿಗಳಿಗೆ ಕೇವಲ ತಾಂತ್ರಿಕತೆ ಮಾತ್ರವಲ್ಲ. ಅದರ ಹಿಂದಿನ ವಿಜ್ಞಾನವನ್ನು ಕೂಡ ತಿಳಿದುಕೊಳ್ಳಬೇಕು. ಅವಾಗ ಮಾತ್ರ ಪ್ರತಿಯೊಂದು ಸಮಸ್ಯೆಗೆ ಉತ್ತರವನ್ನು ತಂತ್ರಜ್ಞಾನ ರೂಪದಲ್ಲಿ ಹೊರ ತರಲು ಸಾಧ್ಯವಾಗುತ್ತದೆ. ಮುಂದಿನ ದಿನಗಳಲ್ಲಿ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ ರಾಯಚೂರು ಕೃಷಿ ತಾಂತ್ರಿಕ ಮಹಾವಿದ್ಯಾಲಯ ರಾಯಚೂರಿನ ಸಹಯೋಗದಲ್ಲಿ ಕೃಷಿಯಲ್ಲಿ ತಂತ್ರಜ್ಞಾನಗಳ ಬಳಕೆಯ ಬಗ್ಗೆ ಕಾರ್ಯ ಚಟುವಟಿಕೆಗಳನ್ನು ಮಾಡಲು ಇಚ್ಚಿಸುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಭಾಗವಹಿಸಿದ ಇಂಜಿನಿಯರ್ ವಿದ್ಯಾಸಾಗರ್ ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಸಮಯದಲ್ಲಿಯೇ ಜೀವನಕ್ಕೆ ಬೇಕಾಗುವ ಒಂದು ನಿರ್ದಿಷ್ಟ ಗುರಿಯನ್ನು ಇಟ್ಟುಕೊಂಡು ಆ ಗುರಿಯನ್ನು ತಲುಪುವ ನಿಟ್ಟಿನಲ್ಲಿ ವಿದ್ಯಾಭ್ಯಾಸ ಮಾಡಬೇಕು. ಹಾಗೂ ಕೃಷಿ ಇಂಜಿನಿಯರಿAಗ್ ವಿಭಾಗದಲ್ಲಿ ನಿಮ್ಮ ವಿಶೇಷತೆಯನ್ನು ಗುರುತಿಸಿಕೊಳ್ಳುವ ನಿಟ್ಟಿನಲ್ಲಿ ಅಭ್ಯಾಸ ಮಾಡಬೇಕೆಂದು ಹೇಳಿದರು. ಕಾಲೇಜಿನ ಹಳೆ ವಿದ್ಯಾರ್ಥಿಯಾದ ಇಂಜಿನಿಯರ್ ಧರೆಪ್ಪ ಸಿದ್ದಾಪುರ ಮುಧೋಳ ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ಪ್ರೈವೇಟ್ ಸಂಸ್ಥೆಗಳಲ್ಲಿ ಕೆಲಸ ಮಾಡುವುದಕ್ಕಿಂತ ನಮ್ಮ ಸ್ವಂತ ಭೂಮಿಯಲ್ಲಿ ಕೃಷಿಯನ್ನು ಮಾಡಿ ನಾವೇ ಉದ್ಯಮಿಯಾಗಿ ಬೆಳೆಯಬೇಕು. ಅಲ್ಲದೆ ತಮ್ಮ ಜೀವನದ ಅನುಭವಗಳನ್ನು ಹೇಳಿ ವಿದ್ಯಾರ್ಥಿಗಳಿಗೆ ಕೃಷಿ ಮಾಡುವ ಬಯಕೆಯನ್ನು ಹೆಚ್ಚಿಸುವ ರೀತಿಯಲ್ಲಿ ಮಾತನಾಡಿದರು.

ವಿಶೇಷ ಅತಿಥಿಗಳಾದ ಇಂಜಿನಿಯರ್ ಅಶ್ವಿನಿ ಐನಾಪುರ ಅವರು ಮಾತನಾಡಿ, ಮಹಿಳಾ ಅಭ್ಯರ್ಥಿಗಳಿಗೆ ಟ್ರ‍್ಯಾಕ್ಟರ್ ಸಂಸ್ಥೆಗಳಲ್ಲಿ ಕೆಲಸ ಮಾಡುವುದು ತುಂಬಾ ಕಷ್ಟದಾಯಕವಾಗಿರುತ್ತದೆ. ಆದರೆ ಕೆಲಸ ಮಾಡುವ ಛಲದ ಮನೋಭಾವನೆಯನ್ನು ಹೊಂದಿದರೆ ಸಮಾಜದಲ್ಲಿ ಇರುವ ಯಾವುದೇ ಕಟ್ಟಲೆಗಳು ನಮಗೆ ಅಡ್ಡಿಯಾಗುವುದಿಲ್ಲ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೃಷಿ ತಾಂತ್ರಿಕ ಮಹಾವಿದ್ಯಾಲಯದ ಡೀನ್ ಡಾ. ಕೆ.ವಿ. ಪ್ರಕಾಶ್ ಅವರು ವಹಿಸಿ ಮಾತನಾಡಿ, ಬೇರೆ ಬೇರೆ ವಿಭಾಗಗಳ ಇಂಜಿನಿಯರಿAಗ್ ಗಳಿಗಿಂತ ಕೃಷಿ ತಾಂತ್ರಿಕ ವಿಭಾಗವು ಅತ್ಯಂತ ಉನ್ನತ ಸ್ಥಾನವನ್ನು ಪಡೆಯುತ್ತದೆ ಯಾಕೆಂದರೆ ಇದು ದೇಶಕ್ಕೆ ಅನ್ನ ನೀಡುವ ಘನತೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದೆ. ಆದುದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯು ಕೃಷಿ ಇಂಜಿನಿಯರಿAಗ್ ತಂತ್ರಾAಶಗಳನ್ನು ಮೈಗೂಡಿಸಿಕೊಂಡು ವಿದ್ಯಾಭ್ಯಾಸ ಮಾಡಿ ಉತ್ತಮ ಕೃಷಿ ಇಂಜಿನಿಯರ್ ಗಳಾಗಿ ಹೊರಬೇಕೆಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾಲಯ ರಾಯಚೂರಿನ ಆಸ್ತಿ ಅಧಿಕಾರಿಗಳಾದ ರವಿ ಮೇಸಾ, ಕೃಷಿ ತಾಂತ್ರಿಕ ಮಹಾವಿದ್ಯಾಲಯದ ಎಲ್ಲಾ ವಿಭಾಗಗಳ ಮುಖ್ಯಸ್ಥರುಗಳು, ಶಿಕ್ಷಕ, ಶಿಕ್ಷಕಿಯೇತರ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಇದ್ದರು. ವಿದ್ಯಾರ್ಥಿ ನಿರ್ಮಿತ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಆಹಾರ ಮತ್ತು ತಂತ್ರಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ. ಉದಯ್ ಕುಮಾರ್ ನಿಡೋನಿ ಅವರು ಸ್ವಾಗತಿಸಿದರು. ಪ್ರಾಧ್ಯಾಪಕರಾದ ಡಾ. ಪಿ.ಎಫ್. ಮಠದ ಅವರು ವಂದಿಸಿದರು.