ರಾಯಚೂರು ಸೆ.: ರಾಯಚೂರು ಜಿಲ್ಲೆಯ ದೇವದರ್ಗ ಆರಕ್ಷಕ ವೃತ್ತ ನಿರೀಕ್ಷಕರ ಕಚೇರಿ ವ್ಯಾಪ್ತಿಯ ಮದರಕಲ್ ಗ್ರಾಮದ ತಿಪ್ಪಮ್ಮ ಗಂಡ ಗೋಪಾಲ (35) ಎಂಬ ಮಹಿಳೆಯು 2024ರ ಸೆಪ್ಟಂಬರ್ 13ರ ಮಧ್ಯಾಹ್ನ 12ಗಂಟೆಯ ಸುಮಾರಿಗೆ ಹೊಲಕ್ಕೆ ನಂತರ ಬರುವುದಾಗಿ ಹೇಳಿ ಕಾಣೆಯಾಗಿದ್ದು, ಈ ಕುರಿತು ಗಬ್ಬೂರು ಠಾಣಾ ಗುನ್ನೆ ನಂ-126/2024 ಕಲಂ ಮಹಿಳೆ ಕಾಣೆ ಪ್ರಕಾರ ಪ್ರಕರಣ ದಾಖಲು ಮಾಡಿ ತನಿಖೆ ಕೈಕೊಳ್ಳಲಾಗಿದೆ.
ಅಂದು ಎಂದಿನಂತೆ ತನ್ನ ತಂದೆ ತಾಯಿಯೊಂದಿಗೆ ಹೊಲಕ್ಕೆ ಹೋಗುವಾಗ ಕಾಣೆಯಾದ ಮಹಿಳೆಯು ತಾನು ನಂತರ ಬರುವುದಾಗಿ ಹೇಳಿದ್ದು, ಸಂಜೆಯಾದರೂ ಹೊಲಕ್ಕೆ ಬಂದಿರುವುದಿಲ್ಲ. ಸಂಜೆ ತಂದೆ-ತಾಯಿ ಮನೆಗೆ ಬಂದು ನೋಡಿದಾಗ ಮನೆಯಲ್ಲಿಯೂ ಕಾಣದ ಕಾರಣ ಊರಲ್ಲಿ ಹುಡುಕಾಡಿ, ಸಂಬಂಧಿಕರೊAದಿಗೆ ವಿಚಾರಿಸಿದ್ದು, ಅದೇ ದಿನ 12ಗಂಟೆ ಸುಮಾರಿಗೆ ಗೂಗಲ್ ಗ್ರಾಮದ ಕಡೆಗೆ ಬಸ್ ಹತ್ತಿ ಹೋಗಿರುವ ಕುರಿತು ಬಂದ. ನಂತರ ಸಂಬಂಧಿ ಸೇರಿ ಗಾಣಗಾಪುರ (ಗುಲ್ರ್ಗ), ಕಲ್ಲೂರು, ಎಡವಳ್ಳಿ (ಆಂದ್ರ ಪ್ರದೇಶ) ಮುಂತಾದ ಕಡೆಗಳಲ್ಲಿ ಹುಡುಕಾಡಿ ವಿಚಾರಿಸಿದ್ದು ಎಲ್ಲಿಯೂ ಪತ್ತೆಯಾಗಿರುವುದಿಲ್ಲ.
ಕಾಣೆಯಾದ ಮಹಿಳೆಯ ಮೈಮೇಲೆ ನರಸಪ್ಪ ದೇವರು ಬರುವುದರಿಂದ ಆಗಾಗ ಭಕ್ತರು ಈಕೆಯನ್ನು ಬೇರೆ ಬೇರೆ ಊರುಗಳಿಗೆ ದೇವರು ಕೇಳಲು ಕರೆದುಕೊಂಡು ಹೋಗುತ್ತಿರುತ್ತಾರೆ.
ಚಹರೆಪಟ್ಟಿ: 5.6 ಅಡಿ ಎತ್ತರ, ಸದೃಢ ದೇಹ, ಗೋದಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾಳೆ. ಮನೆಯಿಂದ ಹೋಗುವಾಗ ಹಳದಿ ಬಣ್ಣದ ಸೀರೆ, ಹಸಿರು ರವಿಕೆ ಧರಿಸಿ ಹೋಗಿರುತ್ತಾಳೆ.
ಈ ಮಹಿಳೆಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಕೂಡಲೇ ಗಬ್ಬೂರು ಠಾಣೆ ಮೊಬೈಲ್ ಸಂಖ್ಯೆ: 9480803860 ಅಥವಾ ದೇವದರ್ಗ ಸಿಪಿಐ ಮೊಬೈಲ್ ಸಂಖ್ಯೆ: 9480803835ಗೆ ಸಂರ್ಕ ಮಾಡಬಹುದಾಗಿದೆ ಎಂದು ದೇವದರ್ಗ ಗ್ರಾಮೀಣ ವೃತ್ತದ ಆರಕ್ಷಕ ವೃತ್ತ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



