ರಾಯಚೂರು ಅ. 03 (ಕರ್ನಾಟಕ ವಾರ್ತೆ): ರಾಯಚೂರು ಜಿಲ್ಲೆ ಲಿಂಗಸೂಗೂರು ತಾಲೂಕಿನ 33/11 ಕೆ.ವಿ ಮೆದಿಕಿನಾಳ ವಿದ್ಯುತ್ ವಿತರಣಾ ಉಪ ಕೇಂದ್ರ ದಿಂದ ತಲೆಖಾನ್ ಗ್ರಾಮದಲ್ಲಿ ಎಮ್/ಎಸ್- ಆರ್.ಬಿ.ಎಸ್.ಎಸ್.ಎನ್. ಫೆರಸ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ಹೊಸಪೇಟೆ ಇವರು ನಿರ್ಮಾಣ ಮಾಡಿರುವ 11ಎಮ್ಡ್ಲೂ ಸೌರ ವಿದ್ಯುತ್ ಸ್ಥಾವರವರೆಗೆ ನೂತನವಾಗಿ ನಿರ್ಮಿಸಿರುವ 33 ಕೇ.ವಿ ವಿದ್ಯುತ್ ಸರಬರಾಜು ಮಾರ್ಗದ ಕಾಮಗಾರಿಯು ಸಂಪೂರ್ಣವಾಗಿ ಮುಕ್ತಾಯವಾಗಿದ್ದು, 2026ರ ಅಕ್ಟೋಬರ್-08 ಅಥವಾ ತದ ನಂತರ ಯಾವ ದಿನದಲ್ಲಾದರೂ ಚೇತನಗೊಳಿಸಲಾಗುತ್ತದೆ.
ಈ ಮಾರ್ಗದ ಕಂಬಗಳಿಗೆ ದನಕರುಗಳನ್ನು ಕಟ್ಟುವುದಾಗಲೀ, ಬಟ್ಟೆಗಳನ್ನು ಒಣಗಿಸಲು ಕಂಬಕ್ಕೆ ಹಗ್ಗ ಕಟ್ಟುವುದಾಗಲೀ, ಕಂಬದ ಹತ್ತಿರ ಹೋಗುವುದಾಗಲೀ, ಮಾರ್ಗದ ಹತ್ತಿರ ಗಾಳಿಪಟ ಹಾರಾಡಿಸುವುದಾಗಲೀ ಅಥವಾ ಯಾವುದೇ ಇನ್ನೀತರ ಅಪಾಯದ ಕೆಲಸಗಳನ್ನು, ಯಾವುದೇ ಕಾರಣಕ್ಕೂ ಮಾಡದೇ ಇರಲು ಎಚ್ಚರಿಕೆ ಕ್ರಮ ವಹಿಸಲು ಸಾರ್ವಜನಿಕರಿಗೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ 33 ಕೆ.ವಿ ವಿದ್ಯುತ್ ಸರಬರಾಜು ಮಾರ್ಗವು ತಲೆಖಾನ್ ಗ್ರಾಮ, ಬಾಗಲಗುಡ್ಡ ಮತ್ತು ಮೆದಿಕಿನಾಳ ಗ್ರಾಮಗಳ ಇತರೆ ಮುಖಾಂತರ ಹಾದು ಹೋಗಿರುತ್ತದೆ ಎಂದು ಗು.ವಿ.ಸ.ಕಂ.ನಿದ ನಿರ್ಮಾಣ ಮತ್ತು ನಿರ್ವಹಣೆ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



