ರಾಯಚೂರು ಅ.. 5.(ಕರ್ನಾಟಕ ವಾರ್ತೆ):- ಜಿಲ್ಲೆಯ ವಿಕಲಚೇತನರ ಆರ್ಥಿಕ ಹಾಗೂ ಸಾಮಾಜಿಕ ಸಬಲೀಕರಣಕ್ಕಾಗಿ 2026-27ನೇ ಸಾಲಿನ ವಿವಿಧ ಸರ್ಕಾರಿ ಯೋಜನೆಗಳಡಿ ಸೌಲಭ್ಯ ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಬೆಂಗಳೂರಿನ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ನಿರ್ದೇಶನಾಲಯದ ಸೂಚನೆ ಮೇರೆಗೆ ರಾಯಚೂರು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ಈ ಕೆಳಗಿನ ಪ್ರಮುಖ ಫಲಾನುಭವಿ ಆಧಾರಿತ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದೆ.

ಆರೈಕೆದಾರರ ಪ್ರೋತ್ಸಾಹ ಧನ ಯೋಜನೆ: ಸೆರೆಬ್ರಲ್ ಪಾಲ್ಸಿ, ಮಸ್ಕುಲರ್ ಡಿಸ್ಟ್ರೋಫಿ, ಪಾರ್ಕಿನ್ಸನ್ಸ್, ಮಲ್ಟಿಪಲ್ ಸ್ಕ್ಲೆರೋಸಿಸ್, ಬೌದ್ಧಿಕ ವಿಕಲತೆ (ಮೆಂಟಲ್ ರಿಟಾರ್ಡೇಶನ್), ಆಟಿಸಂ ಹಾಗೂ ಬಹವಿಧ ಅಂಗವಿಕಲತೆ (ಶ್ರವಣ ಮತ್ತು ದೃಷ್ಟಿದೋಷ) ಹೊಂದಿರುವ ವಿಕಲಚೇತನ ವ್ಯಕ್ತಿಗಳನ್ನು ಆರೈಕೆ ಮಾಡುವವರಿಗೆ ಈ ಯೋಜನೆಯಡಿ ಪ್ರೋತ್ಸಾಹ ಧನ ನೀಡಲಾಗುತ್ತದೆ.

ಶುಲ್ಕ ಮರುಪಾವತಿ ಯೋಜನೆ: ಎಸ್‌ಎಸ್‌ಎಲ್‌ಸಿ ನಂತರ ಉನ್ನತ ಶಿಕ್ಷಣ, ವೃತ್ತಿ ಶಿಕ್ಷಣ, ತಾಂತ್ರಿಕ ಶಿಕ್ಷಣ, ಸ್ನಾತಕೋತ್ತರ ಹಾಗೂ ಔದ್ಯೋಗಿಕ ಶಿಕ್ಷಣದಲ್ಲಿ ವ್ಯಾಸಂಗ ಮಾಡುತ್ತಿರುವ ವಿಕಲಚೇತನ ವಿದ್ಯಾರ್ಥಿಗಳು ಶುಲ್ಕ ಮರುಪಾವತಿಗೆ ಅರ್ಜಿ ಸಲ್ಲಿಸಬಹುದು.

ನಿರಾಮಯ ಯೋಜನೆ: ಬುದ್ಧಿಮಾಂದ್ಯತೆ, ಸೆರೆಬ್ರಲ್ ಪಾಲ್ಸಿ, ಆಟಿಸಂ ಹಾಗೂ ಬಹುವಿಧ ಅಂಗವಿಕಲತೆ ಹೊಂದಿರುವ ವ್ಯಕ್ತಿಗಳ ಆರೋಗ್ಯ ಸುಧಾರಣೆ ಮತ್ತು ರಕ್ಷಣೆಗಾಗಿ ನಿರಾಮಯ ಯೋಜನೆಯಡಿ ಸೌಲಭ್ಯ ದೊರೆಯಲಿದೆ.

ಅರ್ಜಿಗಳನ್ನು ಅಗತ್ಯ ದಾಖಲೆಗಳೊಂದಿಗೆ ಅಕ್ಟೋಬರ್ 30 2026 ರೊಳಗಾಗಿ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ರಾಯಚೂರು ಕಚೇರಿ ಸಮಯದಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ, ರಾಜಮಾತಾ ದೇವಸ್ಥಾನದ ಹತ್ತಿರ, ಆಫೀಸರ್ಸ್ ಕಾಲೋನಿ, ಆಶಾಪೂರು ರೋಡ್‌ನಲ್ಲಿರುವ ಕಛೇರಿಗೆ ನೇರವಾಗಿ ಅರ್ಜಿಗಳನ್ನು ಸಲ್ಲಿಸಬಹುದು.

ತಾಲ್ಲೂಕುವಾರು ಸಂಪರ್ಕಿಸಬೇಕಾಗದ ಮಾಹಿತಿಯು ಯೋಜನೆಗಳಿಗೆ ಸಂಬAಧಿಸಿದ ಮಾರ್ಗದರ್ಶನಕ್ಕಾಗಿ ಇಲಾಖೆಯ ಸಹಾಯವಾಣಿ ಅಥವಾ ಆಯಾ ತಾಲೂಕಿನ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರಾದ, ಶ್ರೀ ಅಮರೇಶ ಯಾದವ್ (9972237508) ಮಾನವಿ-ಸಿರವಾರ: ಶ್ರೀ ರಾಘವೇಂದ್ರ (ಪ್ರಭಾರಿ) (9740203769) ದೇವದುರ್ಗ: ಶ್ರೀ ಲೋಕಪ್ಪ ನೂರು ನಾಯ್ಕೆ (9945207693) ಸಿಂಧನೂರು: ಶ್ರೀ ಬಸವರಾಜ ಸಾಸಲಮರಿ (9900298217) ಲಿಂಗಸಗೂರು-ಮಸ್ಕಿ: ಶ್ರೀ ನಾಗರಾಜ (9901668380).

ಜಿಲ್ಲೆಯ ಅರ್ಹ ವಿಕಲಚೇತನರು ನಿಗದಿತ ದಿನಾಂಕದೊಳಗಾಗಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ ಈ ಯೋಜನೆಗಳ ಪ್ರಯೋಜನ ಪಡೆದುಕೊಳ್ಳುವಂತೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.