ರಾಯಚೂರು: ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ನಗರದ ತಾರಾನಾಥ ಶಿಕ್ಷಣ ಸಂಸ್ಥೆಯ ಎಸ್.ಆರ್.ಪಿ.ಎಸ್. ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಉತ್ತಮ ಸಾಧನೆ ತೋರಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಬಾಲಕ ಮತ್ತು ಬಾಲಕಿಯರ ವಿಭಾಗದ ಖೋ-ಖೋ, ಬಾಲ್ ಬ್ಯಾಡ್ಮಿಂಟನ್, ಹ್ಯಾಂಡ್ಬಾಲ್, ಫುಟ್ಬಾಲ್, ಚದುರಂಗ, ಕಬಡ್ಡಿ, ಥ್ರೋಬಾಲ್ ಹಾಗೂ ಕ್ರಿಕೆಟ್ ಸೇರಿದಂತೆ ವಿವಿಧ ಗುಂಪು ಕ್ರೀಡೆಗಳಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಗಮನಾರ್ಹ ಪ್ರದರ್ಶನ ನೀಡಿ ವಿಜೇತರಾಗಿದ್ದಾರೆ.
ಅಥ್ಲೆಟಿಕ್ಸ್ ವಿಭಾಗದಲ್ಲೂ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದು, 4x400 ಮೀ. ರಿಲೇ, 4x100 ಮೀ. ರಿಲೇ, 100 ಮೀ., 200 ಮೀ., 400 ಮೀ., 800 ಮೀ., 1500 ಮೀ., 3000 ಮೀ. ನಡಿಗೆ, 6 ಕಿ.ಮೀ. ಗುಡ್ಡಗಾಡು ಓಟ, 100 ಮೀ. ಹರ್ಡಲ್ಸ್, 110 ಮೀ. ಹರ್ಡಲ್ಸ್, 400 ಮೀ. ಹರ್ಡಲ್ಸ್, ಲಾಂಗ್ ಜಂಪ್, ಹೈಜಂಪ್, ಡಿಸ್ಕಸ್ ಥ್ರೋ ಹಾಗೂ ಜಾವೆಲಿನ್ ಎಸೆತ ಸ್ಪರ್ಧೆಗಳಲ್ಲಿ ಸಾಧನೆ ಮಾಡಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ತಾರಾನಾಥ ಶಿಕ್ಷಣ ಸಂಸ್ಥೆಯ ಗೌರವಾಧ್ಯಕ್ಷ ಪಾರಸಮಲ್ ಸುಖಾಣಿ, ಅಧ್ಯಕ್ಷ ಪವನಕುಮಾರ ಸುಖಾಣಿ, ಪ್ರಧಾನ ಕಾರ್ಯದರ್ಶಿ ಅಂಬಾಪತಿ ಪಾಟೀಲ್, ಎಸ್.ಆರ್.ಪಿ.ಎಸ್. ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಶ್ರೀರಾಮ ಬೂಬ, ಕಾರ್ಯದರ್ಶಿ ಸಚಿನ್ ಇನ್ಮಾನಿ, ಸದಸ್ಯ ವಿಷ್ಣು ಚೌಧರಿ, ಪ್ರಾಚಾರ್ಯ ಡಾ. ವಿರೇಶ ಸೆರೆಗಾರ, ಉಪಪ್ರಾಚಾರ್ಯ ಹನುಮಂತ ಚವಾಣ್, ಕವಿತಾ, ಯಾಸ್ಮೀನ್ ಪಟೇಲ್, ದೈಹಿಕ ಶಿಕ್ಷಣ ನಿರ್ದೇಶಕ ಮಲ್ಲೇಶ ಹಾಗೂ ಕ್ರೀಡಾ ಸಮಿತಿ ಸದಸ್ಯರಾದ ಸಿದ್ದಲಿಂಗ, ಗಣೇಶ ನಾಯಕ, ಮಹೆಬೂಬ ವಲಿ, ಡಾ. ಅಶೋಕ ಉಮಚಗಿ, ನರಸಿಂಹ ಸೇರಿದಂತೆ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.



