ರಾಯಚೂರು ಅ. 08 (ಕರ್ನಾಟಕ ವಾರ್ತೆ): ನಗರದ ವಾಸವಿನಗರ ರಸ್ತೆಯಲ್ಲಿರುವ ಕನ್ನಡ ಸಂಘದ ಕಚೇರಿ ಎದುರುಗಡೆ ನೂತನ 'ಆಧಾರ್ ಸೇವಾ ಕೇಂದ್ರ' (UIAI) ಪ್ರಾರಂಭವಾಗುತ್ತಿದ್ದು, (ಅ. 09, ಶುಕ್ರವಾರ) ಬೆಳಿಗ್ಗೆ 11-00 ಗಂಟೆಗೆ ಚಾಲನೆ ಸಿಗಲಿದೆ.

ಈ ನೂತನ ಸೇವಾ ಕೇಂದ್ರವನ್ನು ರಾಯಚೂರು ಜಿಲ್ಲಾಧಿಕಾರಿಗಳಾದ ಶ್ರೀಮತಿ ಪೂವಿತಾ ಎಸ್. ಅವರು ಅಧಿಕೃತವಾಗಿ ಉದ್ಘಾಟಿಸಲಿದ್ದಾರೆ.

ನಗರ ಹಾಗೂ ಸುತ್ತಮುತ್ತಲಿನ ಸಾರ್ವಜನಿಕರಿಗೆ ಆಧಾರ್ ನೋಂದಣಿ, ತಿದ್ದುಪಡಿ ಹಾಗೂ ಇತರೆ ಆಧಾರ್ ಸಂಬAಧಿತ ಸೇವೆಗಳು ಸುಲಭವಾಗಿ ದೊರೆಯುವಂತಾಗಲು ಈ ಕೇಂದ್ರವನ್ನು ಆರಂಭಿಸಲಾಗುತ್ತಿದೆ. ಸಾರ್ವಜನಿಕರು ಈ ಕೇಂದ್ರದ ಸೌಲಭ್ಯವನ್ನು ಪಡೆದುಕೊಳ್ಳಬೇಕಾಗಿ ಆಧಾರ್ ಕೇಂದ್ರದ ವ್ಯವಸ್ಥಾಪಕರಾದ ಗಿರೀಶ್ ಕೆ. ಜೆ. ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.