ರಾಯಚೂರು ಅ. 09 (ಕರ್ನಾಟಕ ವಾರ್ತೆ): ಚೇಗುಂಟ ಮತ್ತು ಸೈದಾಪೂರ ರೈಲ್ವೇ ನಿಲ್ದಾಣಗಳ ಮದ್ಯೆ ರೈಲ್ವೇ ಕೀ.ಮೀ ನಂ 601/5-3 ನೇದ್ದರಲ್ಲಿ ಯಾವುದೋ ಚಲಿಸುವ ರೈಲು ಗಾಡಿಯಿಂದ ಸುಮಾರು 40 ವರ್ಷ ದ ಅಪರಿಚಿತ ಗಂಡಸ್ಸು ಆಯಾತಪ್ಪಿ ಬಿದ್ದು ಆಕಸ್ಮಿಕವಾಗಿ ಮೃತಪಟ್ಟಿದ್ದು, ರಾಯಚೂರು ರೈಲ್ವೇ ಪೊಲೀಸ್‌‍ ಠಾಣೆಯಲ್ಲಿ ಯು.ಡಿ.ಆರ್‌‍ 63/2026 ಕಲಂ 194 ಬಿ.ಎನ್.ಎಸ್.ಎಸ್‌‍ ರಿತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಮೃತದೇಹ ದೊರೆತ ಘಟನಾ ಸ್ಥಳಗಳಲ್ಲಿ ಮೃತನ ವಾರಸುದಾರರು ಯಾರು ಪತ್ತೆಯಾಗಿರುವುದಿಲ್ಲ. ಆದ್ದರಿಂದ ಮೃತದೇಹವನ್ನು ರಾಯಚೂರು ರಿಮ್ಸ್‌‍ ಆಸ್ಪತ್ರೆಯಲ್ಲಿ ವಾರುಸುದಾರ ಪತ್ತೆ ಹಾಗೂ ಪಿ.ಎಂ.ಇ. ಸಲುವಾಗಿ ರಿಮ್ಸ್‌‍ ಆಸ್ಪತ್ರೆಯ ಶೀತಲ ಶವಗಾರದಲ್ಲಿ ಇಡಲಾಗಿದೆ. ಅಪರಿಚಿತ ಗಂಡಸ್ಸು ವಯಸ್ಸು ಸುಮಾರು 40 ವರ್ಷ, ಎತ್ತರ ಸುಮಾರು 5.2 ಅಡಿ, ದಪ್ಪ ಮುಖ, ಸಣ್ಣ ಮೂಗು, ಕಪ್ಪು ಕಣ್ಣುಗಳು, ತಲೆಯಲ್ಲಿ ಎರಡು ಇಂಚು ಕಪ್ಪು ಮತ್ತು ಬಿಳಿ ಕೂದಲು, ಸಣ್ಣ ಗಡ್ಡ ಮೀಸೆ, ದಪ್ಪ ಶರೀರ, ಉಬ್ಬಿದ ಹೊಟ್ಟೆ, ಗಡ್ಡ ಮೀಸೆ ಮತ್ತು ತಲೆಯ ಕೂದಲಿಗೆ ಹೇರ್‌‍ ಡೈ ಹಾಕಿಸಿರುತ್ತಾನೆ.

ಒಂದು ಬಿಳಿ ಮತ್ತು ಹಳದಿ ಬಣ್ಣ ಮಿಶ್ರಿತ ತುಂಬ ತೋಳಿನ ಶರ್ಟ್, ಒಂದು ನೀಲಿ ಬಣ್ಣದ ನೈಟ್‌‍ ಪ್ಯಾಂಟ್, ಬಿಳಿ ಮತ್ತು ಬ್ರೌನ್‌‍ ಮಿಶ್ರಿತ ಚೆಕ್ಸ ಟಾವೆಲ್‌‍ ಹೊರತು ಮೈಮೇಲೆ ಯಾವುದೇ ಬಟ್ಟೆಗಳು ಕಂಡುಬAದಿರುವುದಿಲ್ಲ.

ಈ ಮೃತನ ವಾರಸುದಾರರು ಪತ್ತೆಯಾದಲ್ಲಿ ಅಥವಾ ಸದರಿ ಮೃತನ ಹೋಲಿಕೆಯ ಪುರುಷ ಕಾಣೆಯಾದ ಪ್ರಕರಣ ದಾಖಲಾಗಿದ್ದಲ್ಲಿ ರಾಯಚೂರು ರೈಲ್ವೇ ಪೊಲೀಸ್‌‍ ಠಾಣೆಯ ದೂ.ನಂ: 08532-231716 ಅಥವಾ ಮೊ.ನಂ: 9480802111 ಅಥವಾ ರೈಲ್ವೆ ಪೊಲೀಸ್‌‍ ಕಂಟ್ರೋಲ್‌‍ ರೂಂ: 080-22871291ಗೆ ಸಂಪರ್ಕ ಮಾಡಬಹುದಾಗಿದೆ ಎಂದು ರೈಲ್ವೆ ಪೊಲೀಸ್‌‍ ಠಾಣೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.