ರಾಯಚೂರು: ಪತಂಜಲಿ ಯೋಗಪೀಠ ಹರಿದ್ವಾರದ ನಿರ್ದೇಶನದಂತೆ ರಾಯಚೂರು ಜಿಲ್ಲಾ ಪತಂಜಲಿ ಯೋಗ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಹಾಗೂ ಪದಗ್ರಹಣ ಸಮಾರಂಭವು ನಗರದ ಎಲ್.ವಿ.ಡಿ. ಪದವಿ ಮಹಾವಿದ್ಯಾಲಯದ ಆವರಣದಲ್ಲಿ ನಡೆಯಿತು.
ಕರ್ನಾಟಕ ರಾಜ್ಯ ಪ್ರಭಾರಿ ಭವರಲಾಲ್ ಜಿ ಅವರ ನೇತೃತ್ವದಲ್ಲಿ ನಡೆದ ಸಮಾರಂಭದಲ್ಲಿ ವಿಠೋಬ್ ರಾವ್, ಜೆ.ಡಿ. ಪಟೇಲ್, ಲಕ್ಷ್ಮಣ ಮೇದಾರ ಹಾಗೂ ಪರಮೇಶ್ವರ ಸಾಲಿಮಠ ಅವರ ಮಾರ್ಗದರ್ಶನದಲ್ಲಿ ಪತಂಜಲಿ ಯೋಗ ಸಮಿತಿಯ ವಿವಿಧ ವಿಭಾಗಗಳಿಗೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.
ರಾಯಚೂರು ಜಿಲ್ಲಾ ಪತಂಜಲಿ ಯೋಗ ಸಮಿತಿಯ ಜಿಲ್ಲಾ ಪ್ರಭಾರಿಯಾಗಿ ಕಿಶೋರ್ ಕುಮಾರ್ ಹಾಗೂ ಸಹಪ್ರಭಾರಿಯಾಗಿ ಶ್ರೀಪಾದ ಸಿಎ ಅವರನ್ನು ನೇಮಿಸಲಾಯಿತು. ಭಾರತ್ ಸ್ವಾಭಿಮಾನ ಟ್ರಸ್ಟ್ನ ಪ್ರಭಾರಿಯಾಗಿ ಋತುರಾಜ್ ಗೌಡ್, ಸಹಪ್ರಭಾರಿಯಾಗಿ ಮರಡಿ ಲಕ್ಷ್ಮೀನರಸಯ್ಯ, ಕಿಸಾನ್ ಸೇವಾ ಸಮಿತಿಯ ಪ್ರಭಾರಿಯಾಗಿ ಗುಲ್ದಾಸ್ ನಾಗರಾಜ ಹಾಗೂ ಸಹಪ್ರಭಾರಿಯಾಗಿ ಜನಾರ್ದನ್ ಅವರನ್ನು ಆಯ್ಕೆ ಮಾಡಲಾಯಿತು.
ಯುವ ಭಾರತ್ ವಿಭಾಗದ ಪ್ರಭಾರಿಯಾಗಿ ನಾಗಾರ್ಜುನ್, ಸಹಪ್ರಭಾರಿಯಾಗಿ ಬಿ.ಟಿ. ಅಂಬರೀಶ್, ಸಾಮಾಜಿಕ ಜಾಲತಾಣ ವಿಭಾಗದ ಪ್ರಭಾರಿಯಾಗಿ ರವೀಂದ್ರ ಧೋತರ್ ಬಂಡಿ ಹಾಗೂ ಸಹಪ್ರಭಾರಿಯಾಗಿ ವೀರೇಶ್ ಗುಂಜಳ್ಳಿ ಅವರಿಗೆ ಜವಾಬ್ದಾರಿ ವಹಿಸಲಾಯಿತು.
ಇದೇ ಸಂದರ್ಭದಲ್ಲಿ ಉತ್ತರ ಕರ್ನಾಟಕ ರಾಜ್ಯ ಮಹಿಳಾ ಪ್ರಭಾರಿ ಶ್ರೀದೇವಿ ಅಶೋಕ್ ಕುಮಾರ್ ಅವರ ನೇತೃತ್ವದಲ್ಲಿ ರಾಯಚೂರು ಜಿಲ್ಲಾ ಮಹಿಳಾ ಪತಂಜಲಿ ಯೋಗ ಸಮಿತಿಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಮಹಿಳಾ ಸಮಿತಿಯ ಜಿಲ್ಲಾ ಪ್ರಭಾರಿಯಾಗಿ ರಾಜೇಶ್ವರಿ ನಾಗಾರ್ಜುನ್, ಸಹಪ್ರಭಾರಿಯಾಗಿ ಕಸ್ತೂರಿ, ಸಾಮಾಜಿಕ ಜಾಲತಾಣ ವಿಭಾಗದ ಪ್ರಭಾರಿಯಾಗಿ ಶಿಲ್ಪಾ ಋತುರಾಜ್ ಹಾಗೂ ಸಂವಾದ ವಿಭಾಗದ ಪ್ರಭಾರಿಯಾಗಿ ಬಿ.ಟಿ. ಜಯಲಕ್ಷ್ಮಿ ಅವರನ್ನು ನೇಮಿಸಲಾಯಿತು.
ನೂತನ ಪದಾಧಿಕಾರಿಗಳು ಜಿಲ್ಲೆಯಾದ್ಯಂತ ಯೋಗಾಭ್ಯಾಸದ ಮಹತ್ವವನ್ನು ಸಾರ್ವಜನಿಕರಿಗೆ ತಲುಪಿಸುವುದು, ಯೋಗದ ಮೂಲಕ ಆರೋಗ್ಯ ಜಾಗೃತಿ ಮೂಡಿಸುವುದು ಹಾಗೂ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಯೋಗ ಚಟುವಟಿಕೆಗಳನ್ನು ವಿಸ್ತರಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿದ್ದಾರೆ.
ಪತಂಜಲಿ ಯೋಗ ಸಮಿತಿಯ ವಿವಿಧ ವಿಭಾಗಗಳ ನಡುವೆ ಸಮನ್ವಯ ಸಾಧಿಸಿ, ಯೋಗ ಶಿಕ್ಷಣ ಹಾಗೂ ಆರೋಗ್ಯ ಜಾಗೃತಿ ಕಾರ್ಯಕ್ರಮಗಳನ್ನು ಸಂಘಟಿತವಾಗಿ ನಡೆಸುವ ಜವಾಬ್ದಾರಿಯನ್ನು ನೂತನ ಪದಾಧಿಕಾರಿಗಳಿಗೆ ವಹಿಸಲಾಗಿದೆ.
ಪದಗ್ರಹಣ ಸಮಾರಂಭದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಪತಂಜಲಿ ಯೋಗ ಸಮಿತಿಯ ಸದಸ್ಯರು, ಮಹಿಳಾ ಪದಾಧಿಕಾರಿಗಳು ಹಾಗೂ ಹೆಚ್ಚಿನ ಸಂಖ್ಯೆಯ ಯೋಗ ಸಾಧಕರು ಭಾಗವಹಿಸಿದ್ದರು.



