ರಾಯಚೂರು ಅ. 12 (ಕರ್ನಾಟಕ ವಾರ್ತೆ): ಆರೋಗ್ಯಕರ ದೇಹದಲ್ಲಿ ಆರೋಗ್ಯಕರ ಮನಸ್ಸು ಕ್ರೀಡೆ ಎನ್ನುವುದು ಕೇವಲ ಗೆಲುವು ಮತ್ತು ಸೋಲಿನ ವಿಚಾರವಲ್ಲ ಕ್ರೀಡೆ ನಮ್ಮ ದೈಹಿಕ ಆರೋಗ್ಯ, ಮಾನಸಿಕ ಸದೃಢತೆ, ಶಿಸ್ತು ಸಮಯಪಾಲನೆ, ಆತ್ಮವಿಶ್ವಾಸ ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸುವ ಅತ್ಯುತ್ತಮ ಸಾದನವಾಗಿದೆ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಜಿ.ಹರೀಶ್ ಅವರು ಹೇಳಿದರು.

ಅಕ್ಟೋಬರ್ 08ರ ಗುರುವಾರ ದಂದು ರಾಯಚೂರು ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ಗೃಹ ರಕ್ಷಕರ ವಾರ್ಷಿಕ ವೃತ್ತಿಪರ ಹಾಗೂ ಕ್ರೀಡಾಕೂಟ-2026ರ ಜಿಲ್ಲಾ ಮಟ್ಟದ ಕ್ರೀಡಾಕೂಟ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮೈದಾನದಲ್ಲಿ ನಾವು ಗೆಲ್ಲುವುದಕ್ಕಿಂತ ಮೊದಲು, ನಮ್ಮ ಸೋಮರಿತನವನ್ನು ಗೆಲ್ಲಬೇಕು. ಪ್ರತಿದಿನದ ಅಭ್ಯಾಸ, ಪರಿಶ್ರಮ ಮತ್ತು ಶಿಸ್ತಿನಿಂದ ಮಾತ್ರ ಉತ್ತಮ ಕ್ರೀಡಾಪಟುವಾಗಲು ಸಾಧ್ಯ. ಕ್ರೀಡೆ ನಮಗೆ ತಂಡದ ಮನೋಭವವನ್ನು ಕಲಿಸುತ್ತದೆ. ಒಬ್ಬರ ಯಶಸ್ಸಿಗೆ ಮತ್ತೊಬ್ಬರ ಸಹಕಾರ ನೀಡುವುದು, ಎದುರಾಳಿಯನ್ನು ಗೌರವಿಸುವುದು ಮತ್ತು ಗೆಲುವನ್ನು ವಿನಯದಿಂದ ಸ್ವೀಕರಿಸುವುದು- ಇವೆಲ್ಲವೂ ಕ್ರೀಡೆಯಿಂದ ನಾವು ಕಲಿಯುವ ಜೀವನದ ಅಮೂಲ್ಯ ಪಾಠಗಳಾಗಿವೆ ಎಂದರು.

ಗೆಲುವು ಸಾದಿಸುವುದು ಮುಖ್ಯವಾದರು, ಪ್ರಾಮಾಣಿಕವಾಗಿ ಮತ್ತು ಕ್ರೀಡಾಸ್ಪೂರ್ತಿಯಿಂದ ಸ್ಪರ್ದಿಸುವುದು ಇನ್ನೂ ಮುಖ್ಯ. ನಮ್ಮ ಯುವಜನತೆ ಶಿಕ್ಷಣದ ಜೋತೆಗೆ ಕ್ರೀಡೆಗೂ ಸಮಾನ ಮಹತ್ವ ನೀಡಬೇಕು ಆರೋಗ್ಯಕರ ದೇಹದಲ್ಲಿ ಆರೋಗ್ಯಕರ ಮನಸ್ಸು ಎಂಬ ಮಾತನ್ನು ಜೀವನದಲ್ಲಿ ಅಳವಡಿಸಿಕೊಂಡು ಪ್ರತಿಯೊಬ್ಬರು ಕ್ರೀಡೆಯಲ್ಲಿ ಭಾಗವಹಿಸಬೇಕು ಎಂದರು. ಈ ಕ್ರೀಡಾ ಸಮಾರಂಭವು ಎಲ್ಲಾ ಕ್ರೀಡಾಪಟುಗಳ ಪ್ರತಿಭೆಯನ್ನು ಹೊರತರುವುದರ ಜೊತೆಗೆ ಅವರಲ್ಲಿ ಶಿಸ್ತು ಆತ್ಮವಿಶ್ವಾಸ ಮತ್ತು ಸ್ನೇಹಭಾವವನ್ನು ಬೆಳೆಸಲಿ ಎಂದರು.

ಸದೃಢ ದೇಹ ಮತ್ತು ಸದೃಢ ಮನಸ್ಸುಯುಳ್ಳ ಗೃಹರಕ್ಷಕರಾದ ನೀವುಗಳು ಸದಾ ಆರೋಗ್ಯದಿಂದಿರಲು ಗೃಹರಕ್ಷಕರು ನಿರಂತರವಾಗಿ ಸದೃಢವಾಗಿರಲು ಈ ಕ್ರೀಡಾಕೂಟಗಳು ತುಂಬ ಅವಶ್ಯಕವಾಗಿದೆ. ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಿ ಜೀವ ಉಳಿಸಿ, ದೇಹದ ವಿವಿಧ ಅಂಗಗಳನ್ನು ದಾನ ಮಾಡುವುದು ಶ್ರೇ಼ಷ್ಠವಾದ ಕಾರ್ಯವಾಗಿದ್ದು, ಅಲ್ಲದೆ ಮಾನವರಾದ ನಾವುಗಳು ಇತರೆ ಮಾನವರಿಗೆ ದಾನ ಮಾಡುವುದು ಆದ್ಯ ಕರ್ತವ್ಯವಾಗಿದೆ. ಅ ನಿಟ್ಟಿನಲ್ಲಿ ಗೃಹರಕ್ಷಕರು ಪ್ರತಿಯೊಂದು ಕ್ರೀಢೆಗಳಲ್ಲಿ ಭಾಗವಹಿಸಿ ಉತ್ತಮವಾದ ಆರೋಗ್ಯವನ್ನು ಪಡೆದು ಸಮಾಜ ಸೇವೆಯನ್ನು ಮಾಡಿರಿ ಎಂದು ಹೇಳಿದರು.

ಈ ವೇಳೆ ಜಿಲ್ಲಾ ಗೃಹರಕ್ಷಕದಳ ಸಮಾದೇಷ್ಟರಾದ ದೀಪಾ ಗೋಡೆಪಾಡ್ ಎಸ್.ಎ ಅವರು ವಿಜೇತರಾದ ಗೃಹರಕ್ಷಕರಿಗೆ ಬಹುಮಾನಗಳನ್ನು ವಿತರಿಸಿ, ಮಾತನಾಡಿ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಉತ್ತಮವಾದ ಜೀವನವನ್ನು ಕಟ್ಟಿಕೊಳ್ಳಲು ಉತ್ತಮವಾದ ಅಲೋಚನೆ, ಶ್ರಮದಿಂದ ಮಾತ್ರ ಸಾಧ್ಯ. ಜಿಲ್ಲಾ ಮಟ್ಟದಲ್ಲಿ ವಿವಿಧ ಕ್ರೀಡೆಗಳಲ್ಲಿ ವಿಜೇತರಾದವರು ಮುಂದಿನ ಸ್ಫರ್ಧೆಗಳಲ್ಲಿ ಭಾಗವಹಿಸಿ, ಜಿಲ್ಲೆಗೆ ಕೀರ್ತಿ ತರಲು ಗೃಹಕ್ಷಕರಿಗೆ ಶುಭ ಹಾರೈಸಿದರು. ವಿವಿಧ ಕ್ರೀಡೆ ಆಯೋಜನೆ: ರಾಯಚೂರು ನಗರದ ಜಿಲ್ಲಾ ಪೊಲಿಸ್ ಪರೇಡ್ ಮೈದಾನದಲ್ಲಿ ನಡೆದ ಕ್ರೀಡಾಕೂಟದಲ್ಲಿ ಪುರುಷ ಮತ್ತು ಮಹಿಳಾ ವಿಭಾಗಗಳಿಗೆ ಸ್ಕಾ÷್ವಡ್ರಿಲ್, ಪ್ರಥಮ ಚಿಕತ್ಸೆ, ವಾಲಿಬಾಲ್, ಕಬಡ್ಡಿ, ರೈಫಲ್ ಡ್ರೀಲ್, ಹೈ-ಜಂಪ್, ಲಾಂಗ್ ಜಂಪ್, ಗುಂಡು ಎಸೆತ, ಹಗ್ಗ ಜಗ್ಗಾಟ, 100 ಮೀಟರ್ ಓಟ್, 800 ಮೀಟರ್ ಓಟ್, ಹಾಗೂ 4*100 ಮೀಟರ್ ರಿಲೆ ಹಾಗೂ ಇನ್ನಿತರ ಕ್ರೀಡೆಗಳ ನಡೆಸಲಾಯಿತು. ಇಲಾಖೆಯ ಸಿಬ್ಬಂದಿಗಳು ಆಸಕ್ತಿಯಿಂದ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಸಹಾಯಕ ಭೋದಕರು ಬಸವರಾಜ ಶಿದ್ರಾಹುತಾರ್, ಗೃಹರಕ್ಷಕ ಅಧಿಕಾರಿಗಳಾದ, ನಿಂಬನಗೌಡ, ತಿಮ್ಮನಗೌಡ, ವರದರಾಜ.ಕೆ, ಚನ್ನಪ್ಪಗೌಡ, ವೀರಭದ್ರಪ್ಪ, ಮಲ್ಲಪ್ಪ, ಎನ್.ಸಿ.ಓ ಬಸವಂತ ಸಿಂಗ್, ಶ್ರೀ ಎನ್.ತಿಮ್ಮಪ್ಪ, ಶಿವಪ್ಪ, ಎಂ.ಚAದ್ರಶೇಖರ್, ಶಾಂತಪ್ಪ, ವಾಹನ ಚಾಲಕ ಮಂಜುನಾಥ ದೇಸಾಯಿ ಸೇರಿದಂತೆ ವಿವಿಧ ತಾಲ್ಲೂಕು ಘಟಕಗಳ ಗೃಹರಕ್ಷಕರು-ಗೃಹರಕ್ಷಕಿಯರು ಇದ್ದರು.