ರಾಯಚೂರು ಅ. 12 (ಕರ್ನಾಟಕ ವಾರ್ತೆ): ದೇಹದಲ್ಲಿ ಒಮ್ಮೆ ಹೆಚ್ಐವಿ ವೈರಸ್ ಪ್ರವೇಶ ಮಾಡಿದರೆ ಜೀವನ ಪೂರ್ತಿ ಸೋಂಕಿತರನ್ನಾಗಿಸುವ ಹೆಚ್ಐವಿಯನ್ನು ಎಲ್ಲರೂ ಸೇರಿ ನಿಯಂತ್ರಣಗೊಳಿಸಬೇಕಿದೆ. ಯುವಜನತೆಯು ಹೆಚ್ಐವಿ ಸೋಂಕಿಗೆ ಒಳಗಾಗದಂತೆ ಜಾಗೃತಿ ನೀಡುವ ಕಾರ್ಯವನ್ನು ನಾವೆಲ್ಲರೂ ಮಾಡೋಣವೆಂದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಂದಿತಾ ಎಮ್ ಎನ್ ತಿಳಿಸಿದರು.
ಅಕ್ಟೋಬರ್ 12ರ ಸೋಮವಾರ ದಂದು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪೋಲಿಸ್ ಇಲಾಖೆ, ಕ್ರೀಡಾ ಇಲಾಖೆ, ಪದವಿ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ, ಎನ್ಎಸ್ಎಸ್ ವಿಭಾಗ, ರಿಮ್ಸ್, ರೆಡ್ಕ್ರಾಸ್, ರೆಡ್ ರಿಬ್ಬನ್, ಸೈಂಟ್ಲೂಕ್, ಹೊಸ ಬೆಳಕು ಸಂಸ್ಥೆಗಳ ಸಂಯೊಗದೊAದಿಗೆ ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಮೂಲಕ ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಯುವಜನೋತ್ಸವ ರೆಡ್ ರಿಬ್ಬನ್-ಐದು ಕಿಮಿ ಮ್ಯಾರಾಥಾನ್ ಓಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಅಪರಿಚಿತರೊಂದಿಗೆ ಲೈಂಗಿಕ ಸಂಪರ್ಕ, ಉಪಯೋಗಿಸಿದ ಸಿರೆಂಜ್ ಬಳಕೆ, ಪರೀಕ್ಷೆಗೆ ಒಳಪಡಿಸದ ಅಸುರಕ್ಷಿತ ರಕ್ತ ಪಡೆಯುವಿಕೆ ಹಾಗೂ ಸೊಂಕೀತ ತಾಯಿಯಿಂದ ಮಗುವಿಗೆ ಬರುವ ಸಾಧ್ಯತೆಗಳಿದ್ದು, ಮೊದಲ ಎರಡು ಸ್ವಯಂ ತಪ್ಪಿನಿಂದ ಆಗುವುದನ್ನು ನಾವು ಎಲ್ಲರಿಗೂ ತಿಳಿಸುವ ಜೊತೆಗೆ ಹದಿಹರೆಯದವರನ್ನು ಭವಿಷ್ಯದಲ್ಲಿ ಹೆಚ್ಐವಿ ಸೋಂಕಿತರಾಗದAತೆ ಇಂದಿನಿAದಲೆ ಜಾಗೃತಿ ನೀಡಬೇಕಿದೆ ಎಂದರು. ಹೆಚ್ಐವಿ ತಡೆಗೆ ಸ್ವಯಂ ಪ್ರೆರಣೆಯಿಂದ ಕ್ಯೂಆರ್ ಕೋಡ್ ಮೂಲಕ ಪ್ರಶ್ನೋತ್ತರ ಮೂಲಕ ಸ್ವತಃ ಸ್ಥಿತಿಗತಿ ತಿಳಿದುಕೊಳ್ಳಬಹುದಾಗಿದ್ದು, ಮಾಹಿತಿಗಾಗಿ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಬೇಟಿ ನೀಡಬಹುದಾಗಿದೆ ಎಂದರು.
05 ಕಿಮೀ ಮ್ಯಾರಾಥಾನ್: ಮಹಾತ್ಮಾ ಗಾಂಧಿಜಿ ಜಿಲ್ಲಾ ಕ್ರೀಡಾಂಗಣದಿAದ ಸ್ಟೇಷನ್ ರಸ್ತೆ, ಮಂತ್ರಾಲಯ ರಸ್ತೆ, ಮೂಲಕ ಅಥಿತಿ ಹೊಟೆಲ್ ನಿಂದ ಪುನಃ, ಕ್ರೀಡಾಂಗಣದವರೆಗೆ ಮ್ಯಾರಾಥಾನ್ ಜರುಗಿತು. ಕಾಲೇಜು ವಿಧ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ವಿಜೇತ ವಿಧ್ಯಾರ್ಥಿಗಳು, ವಿಜೇತರಿಗೆ ಪ್ರಥಮ ಬಹುಮಾನ 5000, ದ್ವಿತೀಯ ಬಹುಮಾನ 3000 ಹಾಗೂ ತೃತೀಯ ಬಹುಮಾನ 2000 ನಗದು ಪುರಸ್ಕಾರ ಹಾಗೂ ಪ್ರಶಸ್ತಿ ಪತ್ರ ನೀಡಲಾಯಿತು.
ಇದೇ ಸಂದರ್ಭದಲ್ಲಿ ರಿಮ್ಸ್ ಪ್ರಭಾರಿ ಡೀನ್ ಡಾ.ಮಂಜುನಾಥ್, ಪ್ರಭಾರಿ ವೈದ್ಯಕೀಯ ಅಧಿಕ್ಷಕರು ಡಾ.ಅಮರ್ ವರ್ಮ, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಹಾಗೂ ಡ್ಯಾಪ್ಕೋ ಅಧಿಕಾರಿ ಡಾ.ಯಶೋಧಾ, ಎನ್ಎಸ್ಎಸ್ ಅಧಿಕಾರಿ ಡಾ.ಸಂತೋಷ್ ಕುಮಾರ್, ಜಿಲ್ಲಾ ರೆಡ್ ಕ್ರಾಸ್ ಸಂಚಾಲಕ ಡಾ.ದಂಡಪ್ಪ ಬಿರಾದಾರ್, ಜಿಲ್ಲಾ ಅರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಜಿಲ್ಲಾ ಡ್ಯಾಪ್ಕೋ ಮೇಲ್ವಿಚಾರಕ ಮಲ್ಲಯ್ಯ ಮಠಪತಿ, ಬಿಹೆಚ್ಇಓ ನಾಗರಾಜ್, ಹೊಸ ಬೆಳಕು ಸಂಸ್ಥೆಯ ದೇವರಾಜ್ ಸೇರಿದಂತೆ, ಪೋಲಿಸ್ ಸಿಬ್ಬಂದಿ, ದೈಹಿಕ ಶಿಕ್ಷಕರು, ಡ್ಯಾಪ್ಕೋ ಸಿಬ್ಬಂದಿಗಳು ಇದ್ದರು.



