ರಾಯಚೂರು ಅ. 14 (ಕರ್ನಾಟಕ ವಾರ್ತೆ): ರಾಯಚೂರು ನಗರದ ಬಸವೇಶ್ವರ ವೃತ್ತ ಹತ್ತಿರದ ಚರಂಡಿಯಲ್ಲಿ ಅಕ್ಟೋಬರ್ 13ರಂದು ಪತ್ತೆಯಾದ ಸಕ್ಕರೆ ಕಾಯಿಲೆ ಮತ್ತು ರಕ್ತದೋತ್ತಡಕ್ಕೆ ಬಳಸುವ ಅವಧಿ ಮೀರಿದ ಔಷಧಿಗಳನ್ನು ಎಸೆದವರ ವಿರುದ್ದ ಎಫ್ಐಆರ್ ದಾಖಲಿಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ನಂದಿತಾ ಎಮ್.ಎನ್, ಅವರು ತಿಳಿಸಿದ್ದಾರೆ.
ಆರೋಗ್ಯ ಇಲಾಖೆಯಲ್ಲಿ ಸರಬರಾಜು ಆಗುವ ಔಷಧಿಗಳು ಬಳಕೆ ಮಾಡಿ, ಅವಧಿ ಮೀರಿದಾಗ ನಿಯಮಾನುಸಾರ ಸರಕಾರದ ಮಾರ್ಗಸೂಚಿಯನ್ವಯ ವಿಲೇವಾರಿ ಮಾಡಲಾಗುತ್ತದೆ. ಪ್ರಸ್ತುತ ಈ ಪ್ರಕರಣದಲ್ಲಿ ಔಷಧಿಗಳನ್ನು ಎಸೆದಿರುವವರನ್ನು ಇ-ಔಷಧ ಪೋರ್ಟಾಲ್ ಮುಖಾಂತರ ಟ್ರ್ಯಾಕ್ ಮಾಡಿ ಸಂಭAದಿಸಿದವರನ್ನು ಪತ್ತೆ ಹಚ್ಚಿ ಅವರ ವಿರುಧ್ದ ಎಫ್ಐಆರ್ ದಾಖಲಿಸಿ ಸೂಕ್ತ ಕಾನೂನು ಕ್ರಮ ವಹಿಸಲಾಗುವುದು. ಸದರಿ ಔಷಧಿಗಳು ಗೃಹ ಆರೋಗ್ಯ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಸಮುದಾಯ ಆರೋಗ್ಯ ಅಧಿಕಾರಿಗಳ ಮುಖಾಂತರ ಮನೆ ಮನೆಗೆ ತೆರಳಿ ವಿತರಿಸುವ ಮಾತ್ರೆಗಳಾಗಿವೆ. ಕಳೆದ ಮಾರ್ಚ್, ಎಪ್ರಿಲ್ ತಿಂಗಳಿನಿAದ ನಿರಂತರವಾಗಿ ಸಭೆಗಳನ್ನು ಹಮ್ಮಿಕೊಂಡು ಸಂಬAಧಿಸಿದ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಲಾಗಿದೆ. ಹಾಗೂ ಎಲ್ಲಾ ತಾಲೂಕಗಳಲ್ಲಿ ಔಷಧಗಳ ಬಳಕೆ ಕುರಿತು ನಿರಂತರ ನಿಗಾವಹಿಸಿ ಮಾತ್ರೆಗಳನ್ನು ವಿತರಣೆ ಮಾಡಲಾಗುತ್ತಿದ್ದು, ಇ-ಔಷಧ ಪೋರ್ಟಾಲ್ ನಲ್ಲಿ ದಾಖಲಿಸಿ ವಿತರಿಸಲಾಗುತ್ತಿದೆ.
ಸದರಿ ಚರಂಡಿಯಲ್ಲಿ ಔಷಧಿಗಳು ಕಂಡುಬAದಿರುವ ಮಾಹಿತಿ ಬಂದ ತಕ್ಷಣವೇ ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮ ಅಧಿಕಾರಿ ಹಾಗೂ ತಂಡವನ್ನು ಕಳುಹಿಸಿ ಪರಿಶೀಲಿಸಲಾಗಿದ್ದು, ಪತ್ತೆಯಾದ ಔಷಧಿಗಳು ಅವಧಿ ಮೀರಿದ ಔಷಧಿಗಳಾಗಿದ್ದು, ಈಗಾಗಲೇ ಈ ಔಷಧಿಗಳನ್ನು ಸಂಗ್ರಹಿಸಿ ಇಲಾಖೆಯ ಸುಪರ್ಧಿಗೆ ತೆಗೆದುಕೊಂಡು ನಿಯಮನುಸಾರ ಕ್ರಮ ಕೈಗೊಳ್ಳಲಾಗುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಸ್ಪಷ್ಟಿಕರಣದಲ್ಲಿ ತಿಳಿಸಿದ್ದಾರೆ.



