ರಾಯಚೂರು: ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಹಿನ್ನೆಲೆಯಲ್ಲಿ ನಗರದ ಸ್ಟೇಷನ್ ರಸ್ತೆಯಲ್ಲಿರುವ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಮತಗಟ್ಟೆ ಸಂಖ್ಯೆ 140ರ ಸಮೀಪ ನಗರ ಶಾಸಕ ಡಾ. ಶಿವರಾಜ ಪಾಟೀಲ್ ಅವರು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಮತದಾರರನ್ನು ಭೇಟಿಯಾಗಿ ತಮ್ಮ ಅಭ್ಯರ್ಥಿಗೆ ಬೆಂಬಲ ನೀಡುವಂತೆ ಮನವಿ ಮಾಡಿದರು.

ಚುನಾವಣಾ ಪ್ರಕ್ರಿಯೆಯ ಸಂದರ್ಭದಲ್ಲಿ ಮತಗಟ್ಟೆ ಉಸ್ತುವಾರಿ ರವೀಂದ್ರ ಜಲ್ದಾರ್ ಹಾಗೂ ಬಿಜೆಪಿ ನಗರ ಘಟಕದ ಅಧ್ಯಕ್ಷ ಉಟ್ಕೂರು ರಾಘವೇಂದ್ರ ಅವರೊಂದಿಗೆ ಆಗಮಿಸಿದ ಶಾಸಕರು, ಮತದಾರರೊಂದಿಗೆ ಸಮಾಲೋಚನೆ ನಡೆಸಿ ಪಕ್ಷದ ಅಭ್ಯರ್ಥಿ ಪರ ಮತಯಾಚಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಭೀಮಣ್ಣ ಮಂಚಲ, ವಿ. ನಾಗರಾಜ, ಪ್ರದೀಪ ಸನಾಬಾಲ್, ಜೆ.ಎಂ. ಮೌನೇಶ, ಎಸ್. ರಾಮು ನಾಯಕ, ಮುತ್ತುರಾಜ, ಮಲ್ಲಿಕಾರ್ಜುನ ಗಣೇಕಲ್, ಶಿವಲಕ್ಷ್ಮಿ, ಮುಕ್ತಿಯರ, ಮೋಹನ ಅಗರವಾಲ್, ರವಿಕುಮಾರ, ಕೃಷ್ಣಮೂರ್ತಿ, ವೀರೇಶ್ ಭೋವಿ ಸೇರಿದಂತೆ ಪಕ್ಷದ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.