ರಾಯಚೂರು ಸೆ. 30: ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯಲ್ಲಿನ ಉಳಿಕೆ ಮೂಲ ವೃಂದ ಭೂಮಾಪಕರ ಹುದ್ದೆಗಳ ಹಾಗೂ ಕಂದಾಯ ಇಲಾಖೆಯಲ್ಲಿನ ಖಾಲಿ ಇರುವ ಉಳಿಕೆ ಮೂಲ ವೃಂದದ ಗ್ರಾಮ ಆಡಳಿತಾಧಿಕಾರಿಗಳ ಹುದ್ದೆಗಳ ನೇರ ನೇಮಕಾತಿ ಪರೀಕ್ಷೆ ಅಕ್ಟೋಬರ್ 02 ಹಾಗೂ ಅಕ್ಟೋಬರ್ 04ರಂದು ನಡೆಯುವ ಪರೀಕ್ಷಾ ಸುರಕ್ಷಿತವಾಗಿ ನಡೆಯಲು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023ರ ಕಲಂ.163 ರನ್ವಯ ಎಲ್ಲ ಪರೀಕ್ಷೆ ಕೇಂದ್ರಗಳ ಸುತ್ತಮುತ್ತಲು 200 ಮೀಟರ್ ಸುತ್ತುವರೆದ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ಪೂವಿತಾ ಎಸ್ ಅವರು ಆದೇಶ ಹೊರಡಿಸಿದ್ದಾರೆ.
ಅಕ್ಟೋಬರ್ 02ರಂದು ರಾಯಚೂರು ನಗರದ-07 ಪರೀಕ್ಷೆ ಕೇಂದ್ರಗಳು ಹಾಗೂ ಅಕ್ಟೋಬರ್ 04ರಂದು ನಡೆಯುವ ರಾಯಚೂರು-18, ದೇವದರ್ಗ-03, ಲಿಂಗಸೂಗೂರು-04, ಮಾನವಿ-07, ಸಿಂಧನೂರು-17 ಹಾಗೂ ಸಿರವಾರ-02 ಸೇರಿದಂತೆ ಒಟ್ಟು 51 ಪರೀಕ್ಷೆ ಕೇಂದ್ರಗಳ ಸುತ್ತಮುತ್ತಲು 200 ಮೀಟರ್ ಸುತ್ತುವರೆದ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿ, ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಸದರಿ ಪರೀಕ್ಷೆ ಕೇಂದ್ರದ ಸುತ್ತಮುತ್ತಲಿನ ಎಲ್ಲಾ ಝರಾಕ್ಸ್ ಅಂಗಡಿಗಳು, ಕಂಪ್ಯೂಟರ್ ಅಂಗಡಿಗಳನ್ನು ಹಾಗೂ ಸೈಬರ್ ಕೆಫೆಗಳನ್ನು ಪರೀಕ್ಷೆ ಸಮಯದಲ್ಲಿ ಕಡ್ಡಾಯವಾಗಿ ಮುಚ್ಚುವಂತೆ ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.



