ತುಂಗಾ ಬಿಂಬ/ರಾಯಚೂರು: ವಿಶ್ವಕರ್ಮರ ಆದರ್ಶವನ್ನು ಅಳವಡಿಸಿಕೊಂಡು, ಮಾನವೀಯ ಮೌಲ್ಯಗಳೊಂದಿಗೆ ಬದುಕಿದರೆ ಮಾತ್ರ ಜಯಂತಿಗಳ ಆಚರಣೆಗೆ ಅರ್ಥ ಬರುತ್ತದೆ ಎಂದು ಉಪನ್ಯಾಸಕರಾದ ಡಾ. ವಿಶ್ವನಾಥ ಎಸ್. ಪತ್ತಾರ ಗುಡಿಹಾಳ ಅವರು ಹೇಳಿದರು. ಸೆಪ್ಟಂಬರ್‌‍ 17ರ ಗುರುವಾರ ದಂದು ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮAದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಯಚೂರು ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಅವರು ಮಾತನಾಡಿದರು. ಬುದ್ಧಿವಂತಿಕೆ, ದೂರದೃಷ್ಟಿ ಹಾಗೂ ಕೌಶಲಗಳನ್ನು ಹೊಂದಿರುವ ವಿಶ್ವಕರ್ಮ ಸಮಾಜದವರು ಹುಟ್ಟು ತಂತ್ರಜ್ಞರಾಗಿದ್ದಾರೆ. ನಿರಂತರ ಸಾಮಾಜಿಕ ಸೇವೆಯಲ್ಲಿ ನಿರತರಾದ ಈ ಸಮುದಾಯದವರು ಶೈಕ್ಷಣಿಕ, ಆರ್ಥಿಕ, ರಾಜಕೀಯ ಸೇರಿದಂತೆ ಎಲ್ಲ ರಂಗದಲ್ಲಿಯೂ ಸಬಲರಾಗಬೇಕು ಎಂದರು. ವಿಶ್ವಕರ್ಮ ಎನ್ನುವುದು ಕೇವಲ ಒಂದು ಸಮುದಾಯವಲ್ಲ, ಅದೊಂದು ಸೃಷ್ಟಿಶೀಲ ಸಂಸ್ಕೃತಿ ಮತ್ತು ಜ್ಞಾನ ಪರಂಪರೆ.ಸದ್ಯೋಜಾತ, ವಾಮದೇವ, ಅಘೋರ, ತತ್ಪುರುಷ ಹಾಗೂ ಈಶಾನ ಎಂಬ ಪಂಚಮುಖಗಳಿAದ ಉದ್ಭವಿಸಿದ ಸೃಷ್ಟಿಯ ಮೂಲಶಕ್ತಿ ವಿಶ್ವಕರ್ಮ. ಈ ಜಯಂತಿಯು ಕ್ಯಾಲೆಂಡರ್‌‍ ದಿನಾಂಕ ಆಧಾರಿತವಲ್ಲ, ಪಂಚಾAಗದ ಕನ್ಯಾ ಸಂಕ್ರಮಣದ ನಿಮಿತ್ತ ನಡೆಯುವ ಖಗೋಳಾಧಾರಿತ ಆಚರಣೆಯಾಗಿದೆ ಎಂದರು. ಈ ವೇಳೆ ಪತ್ರಕರ್ತ ಮಾರುತಿ ಬಡಿಗೇರ ಅವರು ಮಾತನಾಡಿ, ಸಮಾಜದ ಕುರಿತು ಹಿತಾನುಡಿಗಳನ್ನಾಡಿ, ಕಲ್ಲಿಗೆ ಮಾತು ಕಲಿಸಿ, ಸಂಗೀತ ನುಡಿಸಿದ ಶಿಲ್ಪಿಗಳ ಪರಂಪರೆ ನಮ್ಮದು. ಬೇಲೂರು, ಹಳೆಬೀಡಿನಂತಹ ಕಲೆಯ ಬಲೆಗಳನ್ನು ಸೃಷ್ಟಿಸಿದ ಇತಿಹಾಸದ ಮೂಲಾಧಾರಗಳನ್ನು ನಾವು ರಕ್ಷಿಸಿಕೊಳ್ಳಬೇಕಾಗಿದೆ. ಜಯಂತಿಗಳನ್ನು ಕೇವಲ ಸಾಂಕೇತಿಕವಾಗಿ ಆಚರಿಸದೆ ನಮ್ಮ ಹಕ್ಕುಗಳಿಗಾಗಿ ಜಾಗೃತರಾಗಬೇಕಿದೆ ಎಂದರು. ಈ ವೇಳೆ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಜಿಲ್ಲಾಧ್ಯಕ್ಷರಾದ ಉದಯಕುಮಾರ್‌‍ ಪತ್ತಾರ ಅವರು ಮಾತನಾಡಿ, ರಾಯಚೂರು ಜಿಲ್ಲೆಯು ಸಂಘಟನೆಯ ಶಕ್ತಿಗೆ ಹೆಸರುವಾಸಿಯಾಗಿದೆ. ಈ ಹಿಂದೆ ಎಸ್.ಟಿ. ಮೀಸಲಾತಿಗಾಗಿ ನಡೆದ 100 ಕಿ.ಮೀ. ಪಾದಯಾತ್ರೆ, ಬೃಹತ್‌‍ ಸಮಾವೇಶಗಳು ಹಾಗೂ ಪಂಜಿನ ಮೆರವಣಿಗೆಗಳು ನಮ್ಮ ಒಗ್ಗಟ್ಟಿಗೆ ಸಾಕ್ಷಿಯಾಗಿದೆ ಎಂದರು. ಮುಂಬರುವ ದಿನಗಳಲ್ಲಿ ಜಯಂತಿಗಳಿಗೆ ಮುಂಚಿತವಾಗಿಯೇ ವ್ಯವಸ್ಥಿತ ಯೋಜನೆ ರೂಪಿಸಲಾಗುವುದು. ನವೆಂಬರ್‌‍ ತಿಂಗಳಲ್ಲಿ ನಮ್ಮ ವಿಶ್ವಕರ್ಮ ಸಮಾಜವನ್ನು ಬಲಗೊಳಿಸಲು 7 ಸಚಿವರನ್ನು ಆಹ್ವಾನಿಸಿ ಬೃಹತ್‌‍ ಜನಜಾಗೃತಿ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ. ಸಮಾಜದ ಸಬಲೀಕರಣಕ್ಕಾಗಿ ಪ್ರತಿಯೊಬ್ಬರೂ ತನು, ಮನ, ಧನದ ಸಹಕಾರ ನೀಡಬೇಕು ಎಂದರು. ಇದೇ ಸಂದರ್ಭದಲ್ಲಿ ದೇವದುರ್ಗದ ಶ್ರೀಮದ್‌‍ ಆನೆಗುಂದಿ ಮೂಲ ಸಂಸ್ಥಾನ ಸರಸ್ವತಿ ಪೀಠಿದ ಪರಮಪೂಜ್ಯ ಶ್ರೀ ಶ್ರೀ ಮೌನೇಶ್ವರ ಮಹಾಸ್ವಾಮಿಗಳು, ಶಿವಜವಳಗೇರಾ ಶ್ರೀಮದ್‌‍ ಆನೆಗುಂದಿ ಮಹಾಸಂಸ್ಥಾನ ವಿಶ್ವಕರ್ಮ ಏಕದಂಡಿಗಿ ಮಠದ ಪರಮಪೂಜ್ಯ ಶ್ರೀಶ್ರೀ ಸೂರ್ಯ ನಾರಾಯಣ ಮಹಾಸ್ವಾಮಿಗಳು, ಮಹಾನಗರ ಪಾಲಿಕೆಯ ವ್ಯವಸ್ಥಾಪಕರಾದ ರಾಜು, ಉಪ ತಹಶಿಲ್ದಾರ್‌‍ ಪರಶುರಾಮ, ಅಂಬಾರಾಯ ಕೆ. ನಂಜುAಡಾಚಾರಿ ಗಾಣಧಾಳ, ಬ್ರಹ್ಮಣ್ಯಗೌಡ ನಿಕೇತನ, ಡಿ.ವೆಂಕಟೇಶ ಡಾ.ಮನೋಹರ ವೈ. ಪತ್ತಾರ, ಬ್ರಹ್ಮಯ್ಯ ಪತ್ತಾರ ಕಲ್ಲೂರು, ಕೆ.ಶೇಷ ಲಕ್ಷ್ಮೀಪತಿ ಯರಗೇರಾ, ಎಂ.ಕೆ. ಹರಿನಾಥ್‌‍ ಕೆ. ಸರಸ್ವತಿ, ಮಂಜುನಾಥ್‌‍ ವಿಶ್ವಕರ್ಮ, ಈರಣ್ಣ ವಡಿಗೇರ, ಇತರರು ಇದ್ದರು. ಕೆ.ರಾಮು ಗಾಣಧಾಳ ಅವರು ಸ್ವಾಗತ ಮಾಡಿದರು. ರೇಖಾ ಪಾಟೀಲ್‌‍ ಅವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಮೆರವಣಿಗೆ: ವಿಶ್ವಕರ್ಮ ಜಯಂತಿ ಅಂಗವಾಗಿ ರಾಯಚೂರು ನಗರದ ಆಕಾಶವಾಣಿ ಹತ್ತಿರದ ವಿಶ್ವಕರ್ಮ ವೃತ್ತಕ್ಕೆ ಪೂಜೆ ಸಲ್ಲಿಸಿ, ನೇತಾಜಿ ವೃತ್ತ, ತೀನ್‌‍ ಕಂದಿಲ್, ಅಂಬೇಡ್ಕರ್‌‍ ವೃತ್ತದ ಮಾರ್ಗವಾಗಿ ರಂಗಮAದಿರದ ವರೆಗೆ ವಿಶ್ವಕರ್ಮರ ಭಾವಚಿತ್ರದೊಂದಿಗೆ ಮೆರವಣಿಗೆ ಮಾಡಲಾಯಿತು. ರಾಯಚೂರು ತಹಶೀಲ್ದಾರ್‌‍ ಸುರೇಶ ವರ್ಮಾ ಸೇರಿದಂತೆ ವಿವಿಧ ಗಣ್ಯರು ಮೆರವಣಿಗೆಗೆ ಚಾಲನೆ ನೀಡಿದರು.