ತುಂಗ ಬಿಂಬನಿಮ್ಮ ಕನ್ನಡ ದಿನಪತ್ರಿಕೆ ಈಗ ವೆಬ್ ಮತ್ತು ಇ-ಪೇಪರ್‌ನಲ್ಲಿಇಂದಿನ ಇ-ಪೇಪರ್ ಓದಿ →
👁 ಒಟ್ಟು ವೀಕ್ಷಣೆಗಳು: 101,824 ಇಂದಿನ ಓದುಗರು: 991 🟢 ಈಗ ಆನ್‌ಲೈನ್: 7
LATEST NEWS

ರಾಯಚೂರು

ರಾಯಚೂರು ಮತ್ತು ಕಲ್ಯಾಣ ಕರ್ನಾಟಕದ ಪ್ರಮುಖ ಬೆಳವಣಿಗೆಗಳು.

ಕಲ್ಯಾಣ ಕರ್ನಾಟಕ › ರಾಯಚೂರು
ಎಲ್ಲಾ ರಾಯಚೂರು ರಾಯಚೂರು ಮಾನ್ವಿ ದೇವದುರ್ಗ ಅರಕೇರಾ ಸಿರವಾರ ಲಿಂಗಸುಗೂರು ಸಿಂಧನೂರು ಮಸ್ಕಿ
ಎಲ್ಲಾ ರಾಯಚೂರು ಮಾನ್ವಿ ದೇವದುರ್ಗ ಸಿಂಧನೂರು ಲಿಂಗಸುಗೂರು ಸಿರವಾರ ಮಸ್ಕಿ ಕರ್ನಾಟಕ ರಾಜಕೀಯ ಶಿಕ್ಷಣ ಕ್ರೀಡೆ ಸಂಸ್ಕೃತಿ Crime Extra ಇತರೆ ಹೊಸಪೇಟೆ ಕಲಬುರಗಿ ಲೇಖನ ಮಂತ್ರಾಲಯ ಅರಕೇರಾ ಬೆಂಗಳೂರು ಮೈಸೂರು ಗಂಗಾವತಿ ಶಹಾಪುರ ಬಾಗಲಕೋಟೆ ಮೀರುತ್ ಹೈದರಾಬಾದ್ ನವದೆಹಲಿ ಕೊಪ್ಪಳ ಪಣಜಿ ಯಾದಗಿರಿ ಐಚಿ–ನಾಗೋಯಾ ಕುಷ್ಟಗಿ ನೆಲಮಂಗಲ

ಒಟ್ಟು 922 ಸುದ್ದಿಗಳಲ್ಲಿ 376–400 ಸುದ್ದಿಗಳು

ಮಾನ್ವಿ ರಾಯಚೂರು ಮಾನ್ವಿ

ಶ್ರೀಮಠದ ನೂತನ ದಾಸೋಹ ಭವನ ನಿರ್ಮಾಣಕ್ಕೆ ನ.10ರಂದು ಭೂಮಿಪೂಜೆ

ಮಾನ್ವಿ, ಅ.9: ತಾಲೂಕಿನ ಚಿಕಲಪರ್ವಿ ಶ್ರೀ ರುದ್ರಮುನೀಶ್ವರ ಮಠದ ಶ್ರೀ ಸದಾಶಿವ ಮಹಾಸ್ವಾಮಿಗಳ ನೇತೃತ್ವದಲ್ಲಿ ತಮಗೆಲ್ಲಿರೂ ಶ್ರೀಮಠದ ನೂತನ ದಾಸೋಹ ಭವನ ನಿರ್ಮಾಣಕ್ಕೆ ನವೆಂಬರ್ 10ರಂದು ಭೂಮಿಪೂಜೆ ನೆರವೇರಿಸಲು ನಿರ್ಧರಿಸಲಾಗಿದೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.

ಮುಂದೆ ಓದಿ →
ರಾಯಚೂರು ರಾಯಚೂರು

ಶಾವಂತಗೇರಾ–ಹೇಮನಾಳ ಗ್ರಾಪಂ ಚುನಾವಣೆ ನಡೆಸಲು ಆಗ್ರಹ; ಜಿಲ್ಲಾಡಳಿತಕ್ಕೆ 15 ದಿನಗಳ ಗಡುವು

ರಾಯಚೂರು: ದೇವದುರ್ಗ ತಾಲೂಕಿನ ಶಾವಂತಗೇರಾ ಮತ್ತು ಹೇಮನಾಳ ಗ್ರಾಮ ಪಂಚಾಯತಿಗಳಿಗೆ ಸುಮಾರು 11 ವರ್ಷಗಳಿಂದ ಚುನಾವಣೆ ನಡೆಯದಿರುವುದರಿಂದ ಸ್ಥಳೀಯ ಆಡಳಿತ ವ್ಯವಸ್ಥೆ ದುರ್ಬಲಗೊಂಡಿದ್ದು, ಗ್ರಾಮಗಳ ಅಭಿವೃದ್ಧಿ ಹಾಗೂ ಸಾರ್ವಜನಿಕರಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ತೊಂದರೆಯಾಗುತ್ತಿದೆ.

ಮುಂದೆ ಓದಿ →
ಲಿಂಗಸುಗೂರು ರಾಯಚೂರು ಲಿಂಗಸುಗೂರು

ಅರಣ್ಯ ಇಲಾಖೆ ಸಿಬ್ಬಂದಿಯಿಂದ ವ್ಯಕ್ತಿಗೆ ಹಲ್ಲೆ ಆರೋಪ; ಕ್ರಮಕ್ಕೆ ಕುಟುಂಬದ ಆಗ್ರಹ

ಲಿಂಗಸುಗೂರು: ಮಸ್ಕಿ ತಾಲೂಕಿನ ಯರದೊಡ್ಡಿ ಗ್ರಾಮದ ರಸ್ತೆ ಬದಿಯಲ್ಲಿ ಸಸಿ ನೆಡುವ ವಿಚಾರವಾಗಿ ಆಕ್ಷೇಪ ವ್ಯಕ್ತಪಡಿಸಿದ್ದ ನಾಯಕ ಸಮುದಾಯದ ವ್ಯಕ್ತಿಯೊಬ್ಬರನ್ನು ಲಿಂಗಸುಗೂರು ಅರಣ್ಯಾಧಿಕಾರಿಗಳ ಕಚೇರಿಗೆ ಕರೆತಂದು ಹಲ್ಲೆ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಮುಂದೆ ಓದಿ →
ಲಿಂಗಸುಗೂರು ರಾಯಚೂರು ಲಿಂಗಸುಗೂರು

ಅ.11ರಿಂದ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದ ರಜತ ಮಹೋತ್ಸವ ಹಾಗೂ ನವರಾತ್ರೋತ್ಸವ

ಲಿಂಗಸುಗೂರು: ಪಟ್ಟಣದ ಎಸ್‌ಬಿಎಚ್ ಕಾಲೋನಿಯ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ಅ.11ರಿಂದ 20ರವರೆಗೆ ರಜತ ಮಹೋತ್ಸವ ಹಾಗೂ ನವರಾತ್ರೋತ್ಸವವನ್ನು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.

ಮುಂದೆ ಓದಿ →
ರಾಯಚೂರು ರಾಯಚೂರು

ಯರಮರಸ್‌ನ ಪೂರ್ಣಿಮಾ ಢಾಬಾ ಮೇಲೆ ಅಬಕಾರಿ ದಾಳಿ; ಮದ್ಯ ವಶ, ಪ್ರಕರಣ ದಾಖಲು

ರಾಯಚೂರು: ಅಬಕಾರಿ ಇಲಾಖೆಯ ಅಧಿಕಾರಿಗಳು ನಗರದ ಯರಮರಸ್ ಪ್ರದೇಶದಲ್ಲಿರುವ ಪೂರ್ಣಿಮಾ ಢಾಬಾ ಮೇಲೆ ದಾಳಿ ನಡೆಸಿ, ಅಕ್ರಮವಾಗಿ ಸಂಗ್ರಹಿಸಿದ್ದ ಮದ್ಯವನ್ನು ವಶಪಡಿಸಿಕೊಂಡು ಒಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಮುಂದೆ ಓದಿ →
ರಾಯಚೂರು ರಾಯಚೂರು

ಅ. 12 ರಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ನೇರ ಸಂದರ್ಶನ

ರಾಯಚೂರು ಅ. 09 (ಕರ್ನಾಟಕ ವಾರ್ತೆ): ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಅಕ್ಟೋಬರ್‌‍ 12ರ ಬೆಳಿಗ್ಗೆ 10 ಗಂಟೆಯಿAದ ಮಧ್ಯಾಹ್ನ 1 ಗಂಟೆವರಗ ನೇರ ಸಂದರ್ಶನ ಆಯೋಜಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುವಂತೆ ಕೋರಲಾಗಿದೆ.

ಮುಂದೆ ಓದಿ →
ರಾಯಚೂರು ರಾಯಚೂರು

ಸಕಾಲಕ್ಕೆ ಮಾಹಿತಿ ನೀಡದ ಅಧಿಕಾರಿಗಳಿಗೆ ಮಾಹಿತಿ ಆಯೋಗದಿಂದ ದಂಡ ವಿಧಿಸಿ ಆದೇಶ

ರಾಯಚೂರು ಅ. 09 (ಕರ್ನಾಟಕ ವಾರ್ತೆ): ಸಕಾಲಕ್ಕೆ ಮಾಹಿತಿ ನೀಡಲು ಹಾಗೂ ವಿಚಾರಣೆಗೆ ಹಾಜರಾಗದೆ ನಿರ್ಲಕ್ಷ್ಯ ವಹಿಸಿದ ವಿವಿಧ ಸಾರ್ವಜನಿಕ ಪ್ರಾಧಿಕಾರದ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಕರ್ನಾಟಕ ಮಾಹಿತಿ ಆಯೋಗ ಕಲಬುರಗಿ ಪೀಠ ದಂಡ ವಿಧಿಸಿ ಆದೇಶ ಮಾಡಿದೆ.

ಮುಂದೆ ಓದಿ →
ಸಿಂಧನೂರು ರಾಯಚೂರು ಸಿಂಧನೂರು

ಫಲಿತಾಂಶ ವಿಳಂಬ ಖಂಡಿಸಿ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ

ಸಿಂಧನೂರು: ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ ಹಾಗೂ ಸರ್ಕಾರಿ ಮಾದರಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಎದುರಾಗುತ್ತಿರುವ ವಿವಿಧ ಶೈಕ್ಷಣಿಕ ಸಮಸ್ಯೆಗಳನ್ನು ಪರಿಹರಿಸುವಂತೆ ಆಗ್ರಹಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ನೇತೃತ್ವದಲ್ಲಿ ವಿದ್ಯಾರ್ಥಿಗಳು ಶುಕ್ರವಾರ ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ…

ಮುಂದೆ ಓದಿ →
ಲಿಂಗಸುಗೂರು ರಾಯಚೂರು ಲಿಂಗಸುಗೂರು

ತಂಜಿಮುಲ್ ಮುಸ್ಲಿಮೀನ್ ಕಮಿಟಿ ನೋಂದಣಿ ರದ್ದು ವಿಚಾರಣೆಗೆ ವಿಶೇಷ ಅಧಿಕಾರಿ ನೇಮಕ

ಲಿಂಗಸುಗೂರು: ತಂಜಿಮುಲ್ ಮುಸ್ಲಿಮೀನ್ ಕಮಿಟಿಯ ನೋಂದಣಿ ರದ್ದುಪಡಿಸುವಂತೆ ಸಲ್ಲಿಸಿರುವ ದೂರಿನ ವಿಚಾರಣೆಗೆ ಲಿಂಗಸುಗೂರು ಹಿರಿಯ ನಿರೀಕ್ಷಕ ಗಂಗಪ್ಪ ಅವರನ್ನು ವಿಶೇಷ ಅಧಿಕಾರಿಯಾಗಿ ರಾಯಚೂರು ಸಹಕಾರ ಸಂಘಗಳ ಉಪನಿಬಂಧಕರು ನೇಮಕ ಮಾಡಿದ್ದಾರೆ.

ಮುಂದೆ ಓದಿ →
ಲಿಂಗಸುಗೂರು ರಾಯಚೂರು ಲಿಂಗಸುಗೂರು

ಅ.11ರಿಂದ ಬನ್ನಿ ಮಹಾಂಕಾಳಿ–ಗಣೇಶ ದೇವಸ್ಥಾನದಲ್ಲಿ ನವರಾತ್ರೋತ್ಸವ

ಲಿಂಗಸುಗೂರು: ಪಟ್ಟಣದ 17ನೇ ವಾರ್ಡ್‌ನ ಲಕ್ಷ್ಮೀನಗರದಲ್ಲಿರುವ ಬನ್ನಿ ಮಹಾಂಕಾಳಿ ಹಾಗೂ ಗಣೇಶ ದೇವಸ್ಥಾನದಲ್ಲಿ ನವರಾತ್ರೋತ್ಸವ ಮತ್ತು ವಿಜಯದಶಮಿ ಹಬ್ಬದ ಅಂಗವಾಗಿ ಅ.11ರಿಂದ 19ರವರೆಗೆ ಒಂಬತ್ತು ದಿನಗಳ ಕಾಲ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಮುಂದೆ ಓದಿ →
ದೇವದುರ್ಗ ರಾಯಚೂರು ದೇವದುರ್ಗ

ಎಸ್‌ಐಆರ್ ರದ್ದತಿಗೆ ಆಗ್ರಹಿಸಿ ಡಿವೈಎಫ್‌ಐ–ಎಸ್‌ಎಫ್‌ಐ ಪ್ರತಿಭಟನೆ

ದೇವದುರ್ಗ: ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಿಂದ ಅರ್ಹ ಮತದಾರರು ಮತದಾನದ ಹಕ್ಕು ಕಳೆದುಕೊಳ್ಳುವ ಆತಂಕವಿದೆ ಎಂದು ಆರೋಪಿಸಿ, ಅದನ್ನು ರದ್ದುಗೊಳಿಸಬೇಕು ಹಾಗೂ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರನ್ನು ವಜಾಗೊಳಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಡಿವೈಎಫ್‌ಐ ಮತ್ತು…

ಮುಂದೆ ಓದಿ →
ಲಿಂಗಸುಗೂರು ರಾಯಚೂರು ಲಿಂಗಸುಗೂರು

ಹಟ್ಟಿ ರೈತರ ಜಮೀನಿನಲ್ಲಿ ಡೈಮಂಡ್ ಡ್ರಿಲಿಂಗ್ ಪರಿಶೀಲಿಸಿದ ಅಮರೇಗೌಡ ಪಾಟೀಲ್ ಬಯ್ಯಾಪುರ

ಹಟ್ಟಿ: ಹಟ್ಟಿ ಚಿನ್ನದ ಗಣಿ ಕಂಪನಿಯ ಗಣಿ ಗುತ್ತಿಗೆ ಪ್ರದೇಶದಲ್ಲಿದ್ದರೂ ಭೂಸ್ವಾಧೀನವಾಗದೆ ಉಳಿದಿರುವ ರೈತರ ಪಟ್ಟಾ ಜಮೀನುಗಳ ಸಮಸ್ಯೆ ಇತ್ಯರ್ಥಪಡಿಸುವ ನಿಟ್ಟಿನಲ್ಲಿ ಕೈಗೊಳ್ಳಲಾಗುತ್ತಿರುವ ಡೈಮಂಡ್ ಡ್ರಿಲಿಂಗ್ ಕಾರ್ಯವನ್ನು ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪುರ ವೀಕ್ಷಿಸಿದರು.

ಮುಂದೆ ಓದಿ →
ಲಿಂಗಸುಗೂರು ರಾಯಚೂರು ಲಿಂಗಸುಗೂರು

ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಗುರುಗುಂಟಾ ಕೆಬಿ ಮುಂದೆ ರೈತರ ಧರಣಿ; ಅಧಿಕಾರಿಗಳ ಭರವಸೆಗೆ ಹಿಂಪಡೆದ ಪ್ರತಿಭಟನೆ

ಹಟ್ಟಿ ಚಿನ್ನದ ಗಣಿ: ಸಮೀಪದ ಗುರುಗುಂಟಾ ಹೋಬಳಿಯ ಕೆಬಿ ಸೆಕ್ಷನ್ ಕಚೇರಿ ಮುಂದೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದ ನೇತೃತ್ವದಲ್ಲಿ ರೈತರು ರಾತ್ರಿ ಸಮಯದಲ್ಲಿ ದೊಡ್ಡಿಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡುವಂತೆ ಆಗ್ರಹಿಸಿ ಸುಮಾರು ನಾಲ್ಕು ಗಂಟೆಗಳ ಕಾಲ ಧರಣಿ ನಡೆಸಿದರು.

ಮುಂದೆ ಓದಿ →
ಮಾನ್ವಿ ರಾಯಚೂರು ಮಾನ್ವಿ

ರೈತರ ಜೋಳದ ಬಾಕಿ ₹109 ಕೋಟಿ ಡಿಬಿಟಿ ಮೂಲಕ ಪಾವತಿ: ತಹಶೀಲ್ದಾರ್ ಭೀಮರಾಯ

ಮಾನ್ವಿ: ತಾಲೂಕಿನ ಹಿಂಗಾರು ಹಂಗಾಮಿನಲ್ಲಿ ಸರ್ಕಾರದ ಖರೀದಿ ಕೇಂದ್ರಗಳ ಮೂಲಕ ಜೋಳ ಮಾರಾಟ ಮಾಡಿರುವ ರೈತರಿಗೆ ಬಾಕಿ ಉಳಿದಿರುವ ₹109 ಕೋಟಿ ಹಣವನ್ನು ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ರೈತರ ಬ್ಯಾಂಕ್ ಖಾತೆಗಳಿಗೆ ಪಾವತಿಸಲಾಗುತ್ತಿದೆ ಎಂದು ತಹಶೀಲ್ದಾರ್ ಭೀಮರಾಯ ಬಿ. ರಾಮಸಮುದ್ರ ತಿಳಿಸಿದರು.

ಮುಂದೆ ಓದಿ →
ರಾಯಚೂರು ರಾಯಚೂರು

ಕರ್ನಾಟಕ ಮಾದಿಗ ಮಹಾಸಭಾ ರಾಯಚೂರು ನಗರ ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

ರಾಯಚೂರು, ಅ.9: ಕರ್ನಾಟಕ ಮಾದಿಗ (ಮಾದರ) ಮಹಾಸಭಾದ ರಾಯಚೂರು ನಗರ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಸಭೆಯ ಸರ್ವಾನುಮತದ ನಿರ್ಣಯದ ಮೂಲಕ ಆಯ್ಕೆ ಮಾಡಲಾಗಿದ್ದು, ಕೆ.ಪಿ. ಅನಿಲ್ ಕುಮಾರ್ ಅವರನ್ನು ನಗರ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ಮುಂದೆ ಓದಿ →
ರಾಯಚೂರು ರಾಯಚೂರು

ಮಕ್ಕಳ ಜನನದ ನಡುವೆ ಅಂತರ ಕಾಯ್ದುಕೊಳ್ಳಲು ಗರ್ಭನಿರೋಧಕ ಇಂಪ್ಲಾಂಟ್ ಪರಿಣಾಮಕಾರಿ: ಡಾ. ಚಂದ್ರಿಕಾ ಬಿ.ಆರ್.

ರಾಯಚೂರು, ಅ.8: ತಾಯಿ ಮತ್ತು ಮಗುವಿನ ಆರೋಗ್ಯ ರಕ್ಷಣೆಗಾಗಿ ಮಕ್ಕಳ ಜನನದ ನಡುವೆ ಸೂಕ್ತ ಅಂತರ ಕಾಯ್ದುಕೊಳ್ಳುವುದು ಅತ್ಯಂತ ಅಗತ್ಯವಾಗಿದ್ದು, ಕುಟುಂಬ ಕಲ್ಯಾಣ ಕಾರ್ಯಕ್ರಮದಡಿ ಹೊಸದಾಗಿ ಪರಿಚಯಿಸಲಾಗುತ್ತಿರುವ ಚರ್ಮದಡಿಯ ಗರ್ಭನಿರೋಧಕ ಇಂಪ್ಲಾಂಟ್ ವಿಧಾನವು ಮಹಿಳೆಯರಿಗೆ ಸುರಕ್ಷಿತ ಹಾಗೂ ಪರಿಣಾಮಕಾರಿ ಆಯ್ಕೆಯಾಗಿದೆ ಎಂದು ರಾಜ್ಯ…

ಮುಂದೆ ಓದಿ →
ರಾಯಚೂರು ರಾಯಚೂರು

ಎಸ್‌ಐಆರ್ ಪ್ರಕ್ರಿಯೆ ರದ್ದತಿಗೆ ಆಗ್ರಹಿಸಿ ಕಾಂಗ್ರೆಸ್ ಬೃಹತ್ ಪ್ರತಿಭಟನೆ

ರಾಯಚೂರು, ಅ.9: ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯನ್ನು ತಕ್ಷಣವೇ ರದ್ದುಪಡಿಸಬೇಕು ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ಸಮಾನ ಮನಸ್ಕ ಸಂಘಟನೆಗಳ ನೇತೃತ್ವದಲ್ಲಿ ಶುಕ್ರವಾರ ನಗರದಲ್ಲಿ ಬೃಹತ್…

ಮುಂದೆ ಓದಿ →
ರಾಯಚೂರು ರಾಯಚೂರು

ರಿಪೋರ್ಟರ್ಸ್ ಗಿಲ್ಡ್ ಬೆಳ್ಳಿ ಮಹೋತ್ಸವ ಅಂಗವಾಗಿ ರಕ್ತದಾನ ಶಿಬಿರ: ಸಮಾಜಮುಖಿ ಕಾರ್ಯಕ್ಕೆ ಗಣ್ಯರ ಮೆಚ್ಚುಗೆ

ರಾಯಚೂರು, ಅ.9: ರಾಯಚೂರು ರಿಪೋರ್ಟರ್ಸ್ ಗಿಲ್ಡ್ ತನ್ನ 25 ವರ್ಷಗಳ ಸಾರ್ಥಕ ಪಯಣದ ಬೆಳ್ಳಿ ಮಹೋತ್ಸವವನ್ನು ಕೇವಲ ಸಂಭ್ರಮಾಚರಣೆಗೆ ಸೀಮಿತಗೊಳಿಸದೆ, ಜೀವ ಉಳಿಸುವ ಮಹತ್ವದ ರಕ್ತದಾನ ಶಿಬಿರ ಆಯೋಜಿಸುವ ಮೂಲಕ ಸಮಾಜಮುಖಿ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ ಎಂದು ವಿಧಾನ ಪರಿಷತ್ ಸದಸ್ಯ ಎ.

ಮುಂದೆ ಓದಿ →
ರಾಯಚೂರು ರಾಯಚೂರು

ಮಮದಾಪುರದಲ್ಲಿ ಅ.11ರಿಂದ 21ರವರೆಗೆ ಶರನ್ನವರಾತ್ರಿ ದಸರಾ ಮಹೋತ್ಸವ: ವಿಶೇಷ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮ

ರಾಯಚೂರು, ಅ.9: ತಾಲೂಕಿನ ಮಮದಾಪುರ ಗ್ರಾಮದ ಶ್ರೀ ಗಧಾರ ಮಾರಿಕಾಂಬ ದೇವಿ ದೇವಸ್ಥಾನದಲ್ಲಿ ಅಕ್ಟೋಬರ್ 11ರಿಂದ 21ರವರೆಗೆ 13ನೇ ವರ್ಷದ ಶರನ್ನವರಾತ್ರಿ ದಸರಾ ಮಹೋತ್ಸವವನ್ನು ವಿವಿಧ ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಸರವಪ್ಪ ತಿಳಿಸಿದರು.

ಮುಂದೆ ಓದಿ →
ಮಾನ್ವಿ ರಾಯಚೂರು ಮಾನ್ವಿ

ಸ್ನೇಹಿತನ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರ ಹತ್ಯೆ

ಮಾನ್ವಿ: ಸ್ನೇಹಿತರಿಬ್ಬರ ನಡುವೆ ನಡೆದ ಘಟನೆ ಕೊಲೆಯಲ್ಲಿ ಅಂತ್ಯಗೊಂಡಿದ್ದು, ಸ್ನೇಹಿತನ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ ಮಾಡಿರುವ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಇಂದಿರಾನಗರದಲ್ಲಿ ನಡೆದಿದೆ.

ಮುಂದೆ ಓದಿ →
ಮಾನ್ವಿ ರಾಯಚೂರು ಮಾನ್ವಿ

ಯುವ ಸಂಸತ್ತು ಮೂಲಕ ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವದ ಪ್ರಾಯೋಗಿಕ ಪಾಠ

ಮಾನ್ವಿ: ಯುವಜನರಲ್ಲಿ ಪ್ರಜಾಪ್ರಭುತ್ವದ ಮಹತ್ವ, ವಿಧಾನಸಭೆಯ ಕಾರ್ಯವೈಖರಿ ಹಾಗೂ ಸಂಸದೀಯ ಪ್ರಕ್ರಿಯೆಗಳ ಕುರಿತು ಪ್ರಾಯೋಗಿಕ ಅರಿವು ಮೂಡಿಸುವುದೇ ಯುವ ಸಂಸತ್ತು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಉಪತಹಸೀಲ್ದಾರ್ ಅಬ್ದುಲ್ ವಾಹಿದ್ ಹೇಳಿದರು.

ಮುಂದೆ ಓದಿ →
ರಾಯಚೂರು ರಾಯಚೂರು

ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಅಂತರ ಮಹಾವಿದ್ಯಾಲಯ ಟೇಬಲ್ ಟೆನ್ನಿಸ್ ಪಂದ್ಯಾವಳಿ

ರಾಯಚೂರು: ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಹಾಗೂ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ವಿಜಯಪುರ ಇವರ ಸಹಯೋಗದಲ್ಲಿ 2026-27ನೇ ಸಾಲಿನ ಅಂತರ ಮಹಾವಿದ್ಯಾಲಯಗಳ ಟೇಬಲ್ ಟೆನ್ನಿಸ್ ಪಂದ್ಯಾವಳಿ ಹಾಗೂ ವಿಶ್ವವಿದ್ಯಾಲಯದ ತಂಡದ ಆಯ್ಕೆ ಪ್ರಕ್ರಿಯೆ ಅ.8ರಂದು ನಡೆಯಿತು.

ಮುಂದೆ ಓದಿ →
ರಾಯಚೂರು ರಾಯಚೂರು

ಕಣ್ಣುಗಳು ಅಮೂಲ್ಯ ಆಸ್ತಿ; ನಿಯಮಿತ ತಪಾಸಣೆ ಅಗತ್ಯ: ಅರವಿಂದ್ ಕುಮಾರ

ಗಾಣದಾಳ್: ಕುರುಡುತನ ತಡೆಗಟ್ಟಲು ವಿಟಮಿನ್–ಎ ಸಮೃದ್ಧ ಆಹಾರ ಸೇವನೆಗೆ ಆದ್ಯತೆ ನೀಡುವುದರ ಜೊತೆಗೆ ಕಾಲಕಾಲಕ್ಕೆ ನೇತ್ರ ತಪಾಸಣೆ ಮಾಡಿಸಿಕೊಂಡು ವೈದ್ಯರ ಸಲಹೆ ಪಡೆಯಬೇಕು ಎಂದು ಮಟಮಾರಿ ಆರೋಗ್ಯ ಕೇಂದ್ರದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಅರವಿಂದ್ ಕುಮಾರ ಹೇಳಿದರು.

ಮುಂದೆ ಓದಿ →