ತುಂಗ ಬಿಂಬನಿಮ್ಮ ಕನ್ನಡ ದಿನಪತ್ರಿಕೆ ಈಗ ವೆಬ್ ಮತ್ತು ಇ-ಪೇಪರ್‌ನಲ್ಲಿಇಂದಿನ ಇ-ಪೇಪರ್ ಓದಿ →
👁 ಒಟ್ಟು ವೀಕ್ಷಣೆಗಳು: 127,861 ಇಂದಿನ ಓದುಗರು: 1,176 🟢 ಈಗ ಆನ್‌ಲೈನ್: 24
LATEST NEWS

ಇತ್ತೀಚಿನ ಸುದ್ದಿಗಳು

ರಾಯಚೂರು ಮತ್ತು ಕಲ್ಯಾಣ ಕರ್ನಾಟಕದ ಪ್ರಮುಖ ಬೆಳವಣಿಗೆಗಳು.

ಕಲ್ಯಾಣ ಕರ್ನಾಟಕ ಜಿಲ್ಲೆಗಳು →
ಎಲ್ಲಾ ರಾಯಚೂರು ಮಾನ್ವಿ ದೇವದುರ್ಗ ಸಿಂಧನೂರು ಲಿಂಗಸುಗೂರು ಸಿರವಾರ ಮಸ್ಕಿ ಕರ್ನಾಟಕ ರಾಜಕೀಯ ಶಿಕ್ಷಣ ಕ್ರೀಡೆ ಸಂಸ್ಕೃತಿ Crime Extra ಇತರೆ ಮಂತ್ರಾಲಯ ಲೇಖನ ಅರಕೇರಾ ಬೆಂಗಳೂರು ಬಾಗಲಕೋಟೆ ನವದೆಹಲಿ ಹೊಸಪೇಟೆ ಕಲಬುರಗಿ ಮೈಸೂರು ಗಂಗಾವತಿ ಶಹಾಪುರ ಮೀರುತ್ ಹೈದರಾಬಾದ್ ಕೊಪ್ಪಳ ಪಣಜಿ ಯಾದಗಿರಿ ಐಚಿ–ನಾಗೋಯಾ ಕುಷ್ಟಗಿ ನೆಲಮಂಗಲ

ಒಟ್ಟು 1287 ಸುದ್ದಿಗಳಲ್ಲಿ 1201–1225 ಸುದ್ದಿಗಳು

ರಾಯಚೂರು

ರೈತರಿಗೆ 12 ಗಂಟೆ ವಿದ್ಯುತ್ ಪೂರೈಕೆಗೆ ಆಗ್ರಹ: ಸೆ.21ರಂದು ಬೃಹತ್ ಜನಾಂದೋಲನ

ರಾಯಚೂರು: ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ರೈತರು ಸಂಕಷ್ಟ ಎದುರಿಸುತ್ತಿದ್ದು, ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ವಿದ್ಯುತ್ ಪೂರೈಕೆಯೂ ಸಮರ್ಪಕವಾಗಿಲ್ಲ. ರಾಯಚೂರು ಗ್ರಾಮೀಣ ಕ್ಷೇತ್ರಕ್ಕೆ ನಿರಂತರ 12 ಗಂಟೆ ಹಾಗೂ ಜಿಲ್ಲೆಯ ಇತರ ತಾಲೂಕುಗಳಿಗೆ ಕನಿಷ್ಠ 8 ಗಂಟೆ ವಿದ್ಯುತ್ ಪೂರೈಸಬೇಕು ಎಂದು ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್ ಆಗ್ರಹಿಸಿದರು.

ಮುಂದೆ ಓದಿ →
ರಾಯಚೂರು

ಪ್ರಜಾ ಸೇವೆ: ಜನರ ಅಹವಾಲುಗಳಿಗೆ ಸ್ಥಳದಲ್ಲೇ ಸ್ಪಂದನೆ

ರಾಯಚೂರು: ಸರ್ಕಾರಿ ಕಚೇರಿಗಳಿಗೆ ಸಾರ್ವಜನಿಕರು ಪದೇಪದೇ ಅಲೆದಾಡುವ ಪರಿಸ್ಥಿತಿಯನ್ನು ತಪ್ಪಿಸಿ, ವಿವಿಧ ಇಲಾಖೆಗಳ ಸೇವೆ ಹಾಗೂ ಸಮಸ್ಯೆಗಳಿಗೆ ಒಂದೇ ವೇದಿಕೆಯಲ್ಲಿ ಪರಿಹಾರ ಒದಗಿಸುವ ಉದ್ದೇಶದಿಂದ ಗಿಲ್ಲೆಸುಗೂರು ಗ್ರಾಮದಲ್ಲಿ ತಾಲ್ಲೂಕು ಮಟ್ಟದ ಪ್ರಜಾ ಸೇವೆ ಕಾರ್ಯಕ್ರಮ ಆಯೋಜಿಸಲಾಯಿತು.

ಮುಂದೆ ಓದಿ →
ದೇವದುರ್ಗ ರಾಯಚೂರು

ಜಾಲಹಳ್ಳಿಯಲ್ಲಿ ಶಿಕ್ಷಕರ ದಿನಾಚರಣೆ: 144 ಶಿಕ್ಷಕ–ಶಿಕ್ಷಕಿಯರಿಗೆ ಪ್ರಶಸ್ತಿ ಪ್ರದಾನ

ಜಾಲಹಳ್ಳಿ: ಶಿಕ್ಷಣ ಕ್ಷೇತ್ರದಲ್ಲಿ ಖಾಸಗಿ ಶಾಲಾ ಶಿಕ್ಷಕರು ಸಲ್ಲಿಸುತ್ತಿರುವ ಸೇವೆಯನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ವಿವಿಧ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ವತಿಯಿಂದ ಜಾಲಹಳ್ಳಿಯಲ್ಲಿ ಶಿಕ್ಷಕರ ದಿನಾಚರಣೆ ಹಾಗೂ ಉತ್ತಮ ಶಿಕ್ಷಕ–ಶಿಕ್ಷಕಿಯರ ಪ್ರಶಸ್ತಿ ಪ್ರದಾನ ಸಮಾರಂಭ ಶನಿವಾರ ನಡೆಯಿತು.

ಮುಂದೆ ಓದಿ →
ಮಾನ್ವಿ ರಾಯಚೂರು

ಜೋಳದ ಬಾಕಿ ಹಣ ಕೇಳಿದ ರೈತರ ಮೇಲೆ ಪ್ರಕರಣ ಆರೋಪ: ಅಮೀನ್ ಪಾಷಾ ದಿದ್ದಿಗಿ

ಮಾನ್ವಿ: ಜೋಳ ಖರೀದಿ ಕೇಂದ್ರಗಳ ಮೂಲಕ ಮಾರಾಟ ಮಾಡಿದ ಬೆಳೆ ಹಣವನ್ನು ಪಾವತಿಸುವಂತೆ ಒತ್ತಾಯಿಸಿ ಹೋರಾಟ ನಡೆಸಿದ ರೈತರ ಮೇಲೆಯೇ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಅಮೀನ್ ಪಾಷಾ ದಿದ್ದಿಗಿ ಆರೋಪಿಸಿದರು.

ಮುಂದೆ ಓದಿ →
ಬೆಂಗಳೂರು

ಪರಿಸರ ಸಂರಕ್ಷಣೆ ಜಾಗೃತಿಯನ್ನು ಮಕ್ಕಳಲ್ಲಿ ಬಿತ್ತಬೇಕು; ಡಾ. ಹಿ.ಚಿ. ಬೋರಲಿಂಗಯ್ಯ

ಬೆಂಗಳೂರು: ಬೆಂಗಳೂರಿನ ಸರ್ .ಎಂ. ವಿಶ್ವೇಶ್ವರಯ್ಯ ಬಡಾವಣೆ, ಒಂದನೇ ಬ್ಲಾಕ್ ನಲ್ಲಿರುವ ಪ್ರೊಫೆಸರ್ ನಾರಾಯಣಘಟ್ಟ ರವರ ಕವಿತೆ ಸ್ವಗೃಹದಲ್ಲಿ ಡಾ. ಎಚ್. ತುಕಾರಾಂ ಅವರು ಬರೆದಿರುವ ಕಥಾಸಂಕಲನ "ಆ ಮಂಜು ಮೋಡಗಳ ನಡುವೆ" ಪುಸ್ತಕ ಬಿಡುಗಡೆ ಮಾಡಲಾಯಿತು.

ಮುಂದೆ ಓದಿ →
ರಾಯಚೂರು

ನೈಸ್ ಭೂಮಿ ರೈತರಿಗೆ ಮರಳಿಸಲು ಆಗ್ರಹಿಸಿ ಸಿಪಿಐಎಂ ಪ್ರತಿಭಟನೆ

ರಾಯಚೂರು: ನೈಸ್ ಯೋಜನೆಗೆ ಸಂಬಂಧಿಸಿದ ಭೂಮಿಯನ್ನು ರೈತರಿಗೆ ವಾಪಸ್ ನೀಡಬೇಕು, ಟೋಲ್ ಸಂಗ್ರಹವನ್ನು ನಿಲ್ಲಿಸಬೇಕು ಹಾಗೂ ಹೋರಾಟಗಾರರ ಬಂಧನವನ್ನು ಖಂಡಿಸಿ ಸಿಪಿಐಎಂ ರಾಯಚೂರು ತಾಲೂಕು ಸಮಿತಿ ವತಿಯಿಂದ ಸೆ.18ರಂದು ನಗರದ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ಮುಂದೆ ಓದಿ →
ರಾಯಚೂರು

ಬಾಯಿದೊಡ್ಡಿಯಲ್ಲಿ ಬಿಜೆಪಿ ಮುಖಂಡರು ಕಾಂಗ್ರೆಸ್ ಸೇರ್ಪಡೆ

ರಾಯಚೂರು: ತಾಲೂಕಿನ ಬಾಯಿದೊಡ್ಡಿ ಗ್ರಾಮದಲ್ಲಿ ಬಿಜೆಪಿಯ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಪಕ್ಷ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು ಎಂದು ಕಾರ್ಯಕ್ರಮದ ಆಯೋಜಕರು ತಿಳಿಸಿದ್ದಾರೆ. ಬಾಯಿದೊಡ್ಡಿ ಗ್ರಾಮವು ರಾಯಚೂರು ತಾಲೂಕಿನ ವ್ಯಾಪ್ತಿಗೆ ಸೇರಿದೆ.

ಮುಂದೆ ಓದಿ →
ರಾಯಚೂರು

ಅಂತರ್ ಮಹಾವಿದ್ಯಾಲಯ ಬ್ಯಾಡ್ಮಿಂಟನ್‌ನಲ್ಲಿ ಎಲ್‌ವಿಡಿ ಕಾಲೇಜು ತಂಡಗಳ ಸಾಧನೆ

ರಾಯಚೂರು: ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಅಂತರ್ ಮಹಾವಿದ್ಯಾಲಯ ಬ್ಯಾಡ್ಮಿಂಟನ್ ಪಂದ್ಯಾವಳಿಯು ಸೆ.16ರಂದು ರಾಯಚೂರಿನ ಸೇಂಟ್ ಥಾಮಸ್ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ನಡೆಯಿತು.

ಮುಂದೆ ಓದಿ →
ರಾಯಚೂರು

ಶಿಕ್ಷಕರ ಸೇವೆಗೆ ಸರಿಸಾಟಿಯಾದ ಸೇವೆ ಮತ್ತೊಂದಿಲ್ಲ: ಎನ್.ಎಸ್. ಬೋಸರಾಜು

ರಾಯಚೂರು: ಸಮಾಜದ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಶಿಕ್ಷಕರ ಸೇವೆಗೆ ಸರಿಸಾಟಿಯಾದ ಮತ್ತೊಂದು ಸೇವೆ ಇಲ್ಲ ಎಂದು ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಎನ್.ಎಸ್. ಬೋಸರಾಜು ಹೇಳಿದರು.

ಮುಂದೆ ಓದಿ →
ರಾಯಚೂರು

ಓಂ ಗ್ರೂಪ್ ಅಸೋಸಿಯೇಷನ್‌ನಿಂದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ

ರಾಯಚೂರು: ನಗರದ ಎಲ್‌ಬಿಎಸ್ ನಗರದಲ್ಲಿರುವ ಶ್ರೀ ವೀರ ಹನುಮಾನ್ ದೇವಸ್ಥಾನ, ಚಂದ್ರಬಂಡಾ ರಸ್ತೆಯಲ್ಲಿ ಶ್ರೀ ಗೌರಿ ಗಣೇಶ ಹಬ್ಬದ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಓಂ ಗ್ರೂಪ್ ಅಸೋಸಿಯೇಷನ್ ವತಿಯಿಂದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಯಿತು.

ಮುಂದೆ ಓದಿ →
ಮಾನ್ವಿ ರಾಯಚೂರು

ಮನೆ ಬಾಗಿಲಿಗೆ ಆಡಳಿತ ಸೇವೆ: ಕಪಗಲ್‌ನಲ್ಲಿ ಪ್ರಜಾಸೇವೆ ಅಂದೋಲನ

ಮಾನ್ವಿ: ಸಾರ್ವಜನಿಕರಿಗೆ ಸರ್ಕಾರದ ವಿವಿಧ ಆಡಳಿತಾತ್ಮಕ ಸೇವೆಗಳನ್ನು ಮನೆ ಬಾಗಿಲಿನಲ್ಲೇ ತಲುಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಪ್ರಜಾಸೇವೆ ಅಂದೋಲನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ತಹಶೀಲ್ದಾರ್ ಭೀಮರಾಯ ಬಿ. ರಾಮಸಮುದ್ರ ಹೇಳಿದರು.

ಮುಂದೆ ಓದಿ →
ಮಾನ್ವಿ ರಾಯಚೂರು

ಶ್ರೀ ಜಗನ್ನಾಥದಾಸರ 217ನೇ ಆರಾಧನಾ ಮಹೋತ್ಸವ: ಭಕ್ತಿಭಾವದಿಂದ ಪೂರ್ವಾರಾಧನೆ

ಮಾನ್ವಿ: ಪಟ್ಟಣದ ಶ್ರೀ ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿಗಳ ಮಠದ ಶ್ರೀ ಜಗನ್ನಾಥದಾಸರ ಸನ್ನಿಧಾನದಲ್ಲಿ ಶ್ರೀ ಜಗನ್ನಾಥದಾಸರ 217ನೇ ಆರಾಧನಾ ಮಹೋತ್ಸವದ ಅಂಗವಾಗಿ ಪೂರ್ವಾರಾಧನೆ ಕಾರ್ಯಕ್ರಮ ಭಕ್ತಿಭಾವದಿಂದ ನಡೆಯಿತು.

ಮುಂದೆ ಓದಿ →
ರಾಯಚೂರು

ಜಿಲ್ಲೆಗೆ ಮುಂಗಡ ನೀರು ನಿರ್ವಹಣಾ ಯೋಜನೆ ರೂಪಿಸಲು ಅಂಬಾಜಿ ಒತ್ತಾಯ

ರಾಯಚೂರು: ಜಿಲ್ಲೆಯಲ್ಲಿ ಪ್ರಸಕ್ತ ಮಳೆಗಾಲದಲ್ಲಿಯೇ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದೆ ರೈತರು, ಕೂಲಿ ಕಾರ್ಮಿಕರು ಹಾಗೂ ಸಾರ್ವಜನಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮುಂದೆ ಓದಿ →
ರಾಯಚೂರು

“ಯೋಗ ಮತ್ತು ವ್ಯಕ್ತಿತ್ವ ವಿಕಸನ” ಕುರಿತು ವಿಶೇಷ ಉಪನ್ಯಾಸ

ರಾಯಚೂರು: ಬಿ.ಎಡ್. ದ್ವಿತೀಯ ಸೆಮಿಸ್ಟರ್ ಪಠ್ಯಕ್ರಮದ ಅಂಗವಾಗಿ ಜಿಲ್ಲಾ ವೀರಶೈವ ಲಿಂಗಾಯತ ಸಮಾಜದ ಆಶ್ರಯದಲ್ಲಿ ಎಚ್.ಸಿ.ಎಂ.ಎಸ್.ಕೆ. ಶಿಕ್ಷಣ ಮಹಾವಿದ್ಯಾಲಯ ಹಾಗೂ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಸಹಯೋಗದಲ್ಲಿ “ಯೋಗ ಮತ್ತು ವ್ಯಕ್ತಿತ್ವ ವಿಕಸನ” ವಿಷಯ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಮುಂದೆ ಓದಿ →
ರಾಯಚೂರು

41ನೇ ರಾಜ್ಯ ಪತ್ರಕರ್ತರ ಸಮ್ಮೇಳನ: ಎಂಎಲ್‌ಸಿ ಬೋಸರಾಜ್ ಜೊತೆ ಪೂರ್ವಸಿದ್ಧತೆ ಚರ್ಚೆ

ರಾಯಚೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ರಾಯಚೂರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ 41ನೇ ಪತ್ರಕರ್ತರ ಸಮ್ಮೇಳನದ ಪೂರ್ವಸಿದ್ಧತೆಗಳ ಕುರಿತು ವಿಧಾನ ಪರಿಷತ್ ಸದಸ್ಯ ಎನ್.ಎಸ್. ಬೋಸರಾಜ್ ಅವರೊಂದಿಗೆ ಸಂಘದ ಪದಾಧಿಕಾರಿಗಳು ಹಾಗೂ ಹಿರಿಯ ಪತ್ರಕರ್ತರು ಚರ್ಚೆ ನಡೆಸಿದರು.

ಮುಂದೆ ಓದಿ →
ರಾಯಚೂರು

ಕಾದಂಬರಿಕಾರ್ತಿ ಜಿ.ಎಂ. ರಾಜೇಶ್ವರಿಗೆ ಪ್ರಶಸ್ತಿ

ರಾಯಚೂರು, ಸೆ.19: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಾಡೋಜ ಡಾ. ಬರಗೂರು ರಾಮಚಂದ್ರಪ್ಪ ಅವರ ದತ್ತಿಯಡಿ ನೀಡಲಾಗುವ ದಿ. ಶ್ರೀಮತಿ ರಾಜಲಕ್ಷ್ಮಿ ರಾಮಚಂದ್ರಪ್ಪ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಸೆ.20ರಂದು ಬೆಳಿಗ್ಗೆ 10.30ಕ್ಕೆ ನಗರದ ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

ಮುಂದೆ ಓದಿ →
ಬೆಂಗಳೂರು

ವಿಜಯರಾಘವೇಂದ್ರ ಅಭಿನಯದ ‘ರುದ್ರಾಭಿಷೇಕಂ’ ಚಿತ್ರದ ಟ್ರೇಲರ್ ಬಿಡುಗಡೆ

ಬೆಂಗಳೂರು: ಫ್ಯಾನ್ ಇಂಡಿಯಾ ಕ್ರಿಯೇಷನ್ಸ್ ವಿಜಯಪುರ ನಿರ್ಮಾಣದ, ವಿಜಯರಾಘವೇಂದ್ರ ಅಭಿನಯದ ‘ರುದ್ರಾಭಿಷೇಕಂ’ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನ ಜಿಟಿ ಮಾಲ್‌ನಲ್ಲಿ ನೆರವೇರಿತು. ಚಿತ್ರವು ಸೆ.25ರಂದು ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜಾಗಿದೆ.

ಮುಂದೆ ಓದಿ →
ಮಾನ್ವಿ ರಾಯಚೂರು

ಮಾನ್ವಿ ಪಬ್ಲಿಕ್ ಶಾಲೆಯಲ್ಲಿ ವಿಶ್ವಕರ್ಮ ಜಯಂತಿ ಆಚರಣೆ

ಮಾನ್ವಿ: ನಗರದ ಚಿಕಲಪರ್ವಿ ರಸ್ತೆಯಲ್ಲಿರುವ ಮಾನ್ವಿ ಪಬ್ಲಿಕ್ ಶಾಲೆಯಲ್ಲಿ ದೈವಶಿಲ್ಪಿ ಹಾಗೂ ನಿರ್ಮಾತೃ ವಿಶ್ವಕರ್ಮ ಜಯಂತಿಯನ್ನು ಭಕ್ತಿ ಮತ್ತು ಗೌರವದಿಂದ ಆಚರಿಸಲಾಯಿತು.

ಮುಂದೆ ಓದಿ →
ಲಿಂಗಸುಗೂರು ರಾಯಚೂರು

ಧರ್ಮನಿಷ್ಠೆ, ಶಿಸ್ತು ಜೀವನದಲ್ಲಿ ಅಳವಡಿಸಿಕೊಳ್ಳಬೇಕು: ಗಜದಂಡ ಶ್ರೀ

ಲಿಂಗಸುಗೂರು: ಪ್ರಜಾಪತಿ ದಕ್ಷನ ಸಂಹಾರಕ್ಕಾಗಿ ಶಿವನ ಅಂಶದಿಂದ ಅವತರಿಸಿದ ವೀರಭದ್ರೇಶ್ವರನು ಧರ್ಮರಕ್ಷಣೆಯ ಪ್ರತೀಕವಾಗಿದ್ದು, ಅವರ ಧರ್ಮನಿಷ್ಠೆ, ಶಿಸ್ತು ಹಾಗೂ ಸತ್ಕಾರ್ಯಗಳ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ದೇವರಭೂಪುರ ಬೃಹನ್ಮಠದ ಅಮರೇಶ್ವರ ಗುರುಗಜದಂಡ ಶಿವಾಚಾರ್ಯರು ಹೇಳಿದರು.

ಮುಂದೆ ಓದಿ →
ರಾಯಚೂರು

ಬರಗಾಲದ ಹಿನ್ನೆಲೆಯಲ್ಲಿ ಬೆಳೆ ಸಮೀಕ್ಷೆ ಸಮರ್ಪಕವಾಗಿ ನಡೆಸಿ: ಜಿಪಂ ಸಿಇಒ ಈಶ್ವರ್ ಕಾಂದೂ

ರಾಯಚೂರು: ಜಿಲ್ಲೆಯಲ್ಲಿ ತೀವ್ರ ಬರಗಾಲ ಪರಿಸ್ಥಿತಿಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಬೆಳೆ ಸಮೀಕ್ಷೆಯನ್ನು ಸಮರ್ಪಕವಾಗಿ ದಾಖಲಿಸುವ ಮೂಲಕ ಅರ್ಹ ರೈತರಿಗೆ ಪರಿಹಾರ ದೊರೆಯುವಂತೆ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ್ ಕಾಂದೂ ಸೂಚಿಸಿದರು.

ಮುಂದೆ ಓದಿ →
ದೇವದುರ್ಗ ರಾಯಚೂರು

ಯರಗುಡ್ಡದಲ್ಲಿ ಸಂಭ್ರಮದ ಗಣೇಶೋತ್ಸವ: ಮಕ್ಕಳಿಗೆ ರಸಪ್ರಶ್ನೆ, ಕ್ರೀಡಾ ಸ್ಪರ್ಧೆ

ಜಾಲಹಳ್ಳಿ: ಸಮೀಪದ ಯರಗುಡ್ಡ ಗ್ರಾಮದಲ್ಲಿ ಶ್ರೀ ಗಜಾನನ ಯುವಕರ ಮಂಡಳಿ ವತಿಯಿಂದ ಗಣೇಶೋತ್ಸವವನ್ನು ಭಕ್ತಿ, ಶ್ರದ್ಧೆ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.

ಮುಂದೆ ಓದಿ →
ರಾಯಚೂರು

ಗಾಂಜಾ ಮಾರಾಟ ಆರೋಪ: ಇಬ್ಬರ ಬಂಧನ, 1,810 ಗ್ರಾಂ ಒಣ ಗಾಂಜಾ ಜಪ್ತಿ

ರಾಯಚೂರು: ನಗರದ ಅಲ್ಲಮಪ್ರಭು ಕಾಲೋನಿಯ ಹೊರವಲಯದಲ್ಲಿ ಅಕ್ರಮವಾಗಿ ಒಣ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಮಾರ್ಕೆಟ್ ಯಾರ್ಡ್ ಠಾಣೆ ಪೊಲೀಸರು ಬಂಧಿಸಿ, ಅವರಿಂದ 1,810 ಗ್ರಾಂ ಒಣ ಗಾಂಜಾ ಜಪ್ತಿ ಮಾಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ತಿಳಿಸಿದೆ.

ಮುಂದೆ ಓದಿ →
ಸಿಂಧನೂರು ರಾಯಚೂರು

ಸೆ.23ರಂದು ಹಾನಗಲ್ ಕುಮಾರ ಸ್ವಾಮೀಜಿ 159ನೇ ಜಯಂತಿ: ವಿವಿಧ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮ

ಸಿಂಧನೂರು: ಹಾನಗಲ್ ಕುಮಾರ ಸ್ವಾಮೀಜಿ ಅವರ 159ನೇ ಜಯಂತಿ ಅಂಗವಾಗಿ ಸೆ.23ರಂದು ನಗರದಲ್ಲಿ ವಿವಿಧ ಧಾರ್ಮಿಕ, ಸಾಮಾಜಿಕ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಹಂಪನಗೌಡ ಬಾದರ್ಲಿ ಹಾಗೂ ಮಾಜಿ ಶಾಸಕ ವೆಂಕಟರಾವ್ ನಾಡಗೌಡ ತಿಳಿಸಿದರು.

ಮುಂದೆ ಓದಿ →
ರಾಯಚೂರು

ಮುನಿಯಪ್ಪ ಮುದ್ದಪ್ಪ ಪದವಿ ಮಹಾವಿದ್ಯಾಲಯದಲ್ಲಿ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ

ರಾಯಚೂರು: ನಗರದ ಮುನಿಯಪ್ಪ ಮುದ್ದಪ್ಪ ಪದವಿ ಮಹಾವಿದ್ಯಾಲಯದಲ್ಲಿ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಮುಂದೆ ಓದಿ →
ರಾಯಚೂರು

ಇಪಿಎಫ್‌ಒ ವೇತನ ಮಿತಿ ಹೆಚ್ಚಳಕ್ಕೆ ಕೇಂದ್ರ ಸಚಿವ ಸಂಪುಟದ ಅನುಮೋದನೆ

ರಾಯಚೂರು: ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಇಪಿಎಫ್‌ಒ ಅಡಿಯಲ್ಲಿ ಕಡ್ಡಾಯ ವ್ಯಾಪ್ತಿಗೆ ಒಳಪಡುವ ವೇತನ ಮಿತಿಯನ್ನು ತಿಂಗಳಿಗೆ 15,000 ರಿಂದ 25,000ಕ್ಕೆ ಹೆಚ್ಚಿಸಲು ಅನುಮೋದನೆ ನೀಡಿದೆ.

ಮುಂದೆ ಓದಿ →