ದೇವದುರ್ಗ: ರೈತರ ಹಿತಾಸಕ್ತಿ, ಅಭಿವೃದ್ಧಿ ಹಾಗೂ ಸ್ವಾಭಿಮಾನಿ ರೈತರ ಹಕ್ಕುಗಳ ರಕ್ಷಣೆಗಾಗಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆಯ ಬಾಗೂರ ಗ್ರಾಮ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ದೇವದುರ್ಗ: ತಹಶೀಲ್ದಾರ್ ಕಚೇರಿಯಲ್ಲಿ ಗಣೇಶ ಚತುರ್ಥಿ ಅಂಗವಾಗಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ, ಧ್ವನಿವರ್ಧಕ ಬಳಸಿ ಸಿಬ್ಬಂದಿ ಸಂಭ್ರಮಾಚರಣೆ ನಡೆಸಿದ್ದಾರೆ ಎಂದು ಆರೋಪಿಸಿರುವ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ದೇವದುರ್ಗ ತಾಲೂಕು ಘಟಕ, ಈ ಕುರಿತು ಸಮಗ್ರ ತನಿಖೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ…
ದೇವದುರ್ಗ, ಸೆ.27: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ ಶೋಧ ಕಾರ್ಯಾಚರಣೆಯನ್ನು ಖಂಡಿಸಿ ಸೆ.29ರಂದು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಂವಿಧಾನ ಸಂರಕ್ಷಣಾ ಸಮಿತಿ ಮುಖಂಡರಾದ ರಂಗಪ್ಪ ಗೋಸಲ್ ಹಾಗೂ ವಿಶ್ವನಾಥ ಬಲ್ಲಿದವ್…
ದೇವದುರ್ಗ, ಸೆ.27: ಪ್ರತಿಯೊಬ್ಬರೂ ಮೊದಲು ಉತ್ತಮ ಮನುಷ್ಯರಾಗಬೇಕು. ಬಳಿಕ ಮಾನವೀಯ ಹಾಗೂ ನೈತಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜಕ್ಕೆ ಮಾದರಿಯಾಗಬೇಕು ಎಂದು ಶಾಸಕಿ ಕರೆಮ್ಮ ಜಿ. ನಾಯಕ ಕರೆ ನೀಡಿದರು.
ದೇವದುರ್ಗ : ಶಿಕ್ಷಣ, ಕ್ರೀಡೆ, ಸ್ಕೌಟ್ಸ್ ಮತ್ತು ಗೈಡ್ಸ್, ಸಾಮಾಜಿಕ ಸೇವೆ ಹಾಗೂ ಕನ್ನಡ ನಾಡು-ನುಡಿಯ ಸೇವೆಯಲ್ಲಿ ಹಲವು ವರ್ಷಗಳಿಂದ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಶ್ರೀ ಬಸವೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ದೇವದುರ್ಗದ ದೈಹಿಕ ಶಿಕ್ಷಣ ಶಿಕ್ಷಕರಾದ ದಾವಲಸಾಬ್ ಬಂಡಿ ಅವರು 2026ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ…
ದೇವದುರ್ಗ: ದೇವದುರ್ಗ ತಾಲೂಕು ಮಾದಿಗರ ಮಹಾಸಭಾದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಸವರಾಜ ಅಕ್ಕರಕಿ ಹಾಗೂ ಪ್ರಧಾನ ಕಾರ್ಯದರ್ಶಿ ರಮೇಶ ರಾಮನಾಳ ಅವರನ್ನು ಮಾದಿಗ ನೌಕರರ ಸಂಘದ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು.
ಜಾಲಹಳ್ಳಿ, ಸೆ.26: ಮುಂಗಾರು ಮಳೆಯ ಕೊರತೆಯಿಂದ ಜಿಲ್ಲೆಯಾದ್ಯಂತ ಬರ ಪರಿಸ್ಥಿತಿ ಉಂಟಾಗಿದ್ದು, ರಾಯಚೂರು ಜಿಲ್ಲೆಯನ್ನು ಭೀಕರ ಬರಗಾಲ ಪ್ರದೇಶವೆಂದು ಘೋಷಿಸಬೇಕು ಹಾಗೂ ಬೆಳೆ ನಷ್ಟ ಅನುಭವಿಸಿದ ರೈತರಿಗೆ ಪರಿಹಾರವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ…
ದೇವದುರ್ಗ: ತಾಲೂಕಿನ ಜಾಲಹಳ್ಳಿ ಪಟ್ಟಣದಲ್ಲಿ ಎಪಿಎಂಸಿ ಪರವಾನಗಿ ಅಥವಾ ಸಂಬಂಧಿಸಿದ ಇಲಾಖೆಯ ಸೂಕ್ತ ಅನುಮತಿಯಿಲ್ಲದೆ ಹತ್ತಿ ಖರೀದಿ ಕೇಂದ್ರ ನಡೆಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಕುರಿತು ಕೂಡಲೇ ತನಿಖೆ ನಡೆಸಿ ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ತಾಲೂಕು…
ದೇವದುರ್ಗ: ದೇವದುರ್ಗ ತಾಲೂಕ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘವು 2025-26ನೇ ಸಾಲಿನಲ್ಲಿ ₹4,84,408.36 ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಶರಣಗೌಡ ಪಿ. ಮದರಕಲ್ ತಿಳಿಸಿದರು.
ದೇವದುರ್ಗ: ಮನುಷ್ಯನ ಆರೋಗ್ಯಕರ ಹಾಗೂ ಸದೃಢ ದೇಹಕ್ಕೆ ಪೌಷ್ಟಿಕಾಂಶಯುತ ಆಹಾರ ಅತ್ಯಗತ್ಯವಾಗಿದ್ದು, ಈ ಕುರಿತು ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಪೋಷಣ್ ಮಾಸಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಹೇಶ ನಾಯಕ ಹೇಳಿದರು.
ದೇವದುರ್ಗ: ದಾಸ ಸಾಹಿತ್ಯವು ಹರಿ ಚಿಂತನೆಯ ಸಾಹಿತ್ಯವಾಗಿದ್ದು, ಮಾನವನ ಹುಟ್ಟು-ಸಾವು, ಜೀವಾತ್ಮ-ಪರಮಾತ್ಮ ಹಾಗೂ ಬದುಕಿನ ನಶ್ವರತೆಯ ಕುರಿತು ಸಂದೇಶ ನೀಡುವುದರ ಜೊತೆಗೆ ಧಾರ್ಮಿಕ ಚಿಂತನೆ ಮತ್ತು ಭಗವಂತನ ಸಾಕ್ಷಾತ್ಕಾರದ ಮಾರ್ಗವನ್ನು ತೋರಿಸುತ್ತದೆ ಎಂದು ಉಪನ್ಯಾಸಕ ಸಿದ್ದಪ್ಪ ಕಂಬಳಿ ಹೇಳಿದರು.
ದೇವದುರ್ಗ: ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದ 48ನೇ ವಾರ್ಷಿಕ ಮಹಾಸಭೆ ಬುಧವಾರ ಸಂಘದ ಕಚೇರಿಯಲ್ಲಿ ನಡೆಯಿತು. ಸದಸ್ಯರ ಸೂಚನೆಯಂತೆ ಶಿವಪ್ಪ ಬಲ್ಲಿದ್ದವ ಅವರನ್ನು ಸಭಾಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ದೇವದುರ್ಗ: ಗಣೇಶನ ವಿಗ್ರಹದ ಪ್ರತಿಯೊಂದು ಅಂಗವೂ ಮನುಷ್ಯನ ಬದುಕಿಗೆ ವಿಶಿಷ್ಟ ಸಂದೇಶ ಹಾಗೂ ನೈತಿಕ ಮೌಲ್ಯವನ್ನು ಸಾರುತ್ತದೆ. ಶರಣರ ವಚನಗಳು, ಪುರಾಣಗಳು ಹಾಗೂ ಸಂತರ ವಿಚಾರಗಳನ್ನು ಅಧ್ಯಯನ ಮಾಡಿ ಉತ್ತಮ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಅಭಿಷೇಕ್ ಬಳೆ ಮಸರಕಲ್ ಹೇಳಿದರು.
ದೇವದುರ್ಗ: ತಾಲೂಕಿನ ಜಾಲಹಳ್ಳಿ ಪಟ್ಟಣದ ಜೆ.ಜೆ. ಕಲ್ಯಾಣ ಮಂಟಪದ ಸಮೀಪದ ರಾಜ್ಯ ಹೆದ್ದಾರಿಯಲ್ಲಿ ಬುಧವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ದೇವದುರ್ಗ: ಬಿಸಿಲು, ಮಳೆ ಲೆಕ್ಕಿಸದೆ ಹಗಲು-ರಾತ್ರಿ ಶ್ರಮಿಸಿ ಬೆಳೆದ ಹತ್ತಿಯನ್ನು ಮಾರುಕಟ್ಟೆಗೆ ತರುವ ರೈತರಿಗೆ ಖರೀದಿ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ನಷ್ಟ ಅಥವಾ ಅನ್ಯಾಯವಾಗದಂತೆ ಖರೀದಿದಾರರು ಸರ್ಕಾರ ನಿಗದಿಪಡಿಸಿರುವ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಅಧ್ಯಕ್ಷ…
ಜಾಲಹಳ್ಳಿ, ಸೆ.21: ದೇವದುರ್ಗ ತಾಲೂಕಿನ ಜಾಲಹಳ್ಳಿಗೆ ಸೋಮವಾರ ಬೆಳಗ್ಗೆ ‘ಹುಲಿ ಬೀರ’ ಚಿತ್ರದ ಬಿಡುಗಡೆ ಪ್ರಚಾರಕ್ಕಾಗಿ ಉತ್ತರ ಕರ್ನಾಟಕದ ಯುವ ನಟ, ರೂರಲ್ ಸ್ಟಾರ್ ಅಂಜನ್ ಆಗಮಿಸಿದರು.
ಜಾಲಹಳ್ಳಿ: ದೇವದುರ್ಗ ತಾಲೂಕಿನ ಬಸವ ಪ್ರೌಢಶಾಲೆಯಲ್ಲಿ ವಿಜ್ಞಾನ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ದೇವರಾಜ ಭೈರಪ್ಪ ಅವರಿಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು.