ತುಂಗ ಬಿಂಬನಿಮ್ಮ ಕನ್ನಡ ದಿನಪತ್ರಿಕೆ ಈಗ ವೆಬ್ ಮತ್ತು ಇ-ಪೇಪರ್‌ನಲ್ಲಿಇಂದಿನ ಇ-ಪೇಪರ್ ಓದಿ →
👁 ಒಟ್ಟು ವೀಕ್ಷಣೆಗಳು: 101,618 ಇಂದಿನ ಓದುಗರು: 897 🟢 ಈಗ ಆನ್‌ಲೈನ್: 10
LATEST NEWS

ರಾಯಚೂರು

ರಾಯಚೂರು ಮತ್ತು ಕಲ್ಯಾಣ ಕರ್ನಾಟಕದ ಪ್ರಮುಖ ಬೆಳವಣಿಗೆಗಳು.

ಕಲ್ಯಾಣ ಕರ್ನಾಟಕ › ರಾಯಚೂರು › ರಾಯಚೂರು
ಎಲ್ಲಾ ರಾಯಚೂರು ರಾಯಚೂರು ಮಾನ್ವಿ ದೇವದುರ್ಗ ಅರಕೇರಾ ಸಿರವಾರ ಲಿಂಗಸುಗೂರು ಸಿಂಧನೂರು ಮಸ್ಕಿ
ಎಲ್ಲಾ ರಾಯಚೂರು ಮಾನ್ವಿ ದೇವದುರ್ಗ ಸಿಂಧನೂರು ಲಿಂಗಸುಗೂರು ಸಿರವಾರ ಮಸ್ಕಿ ಕರ್ನಾಟಕ ರಾಜಕೀಯ ಶಿಕ್ಷಣ ಕ್ರೀಡೆ ಸಂಸ್ಕೃತಿ Crime Extra ಇತರೆ ಹೊಸಪೇಟೆ ಕಲಬುರಗಿ ಲೇಖನ ಮಂತ್ರಾಲಯ ಅರಕೇರಾ ಬೆಂಗಳೂರು ಮೈಸೂರು ಗಂಗಾವತಿ ಶಹಾಪುರ ಬಾಗಲಕೋಟೆ ಮೀರುತ್ ಹೈದರಾಬಾದ್ ನವದೆಹಲಿ ಕೊಪ್ಪಳ ಪಣಜಿ ಯಾದಗಿರಿ ಐಚಿ–ನಾಗೋಯಾ ಕುಷ್ಟಗಿ ನೆಲಮಂಗಲ

ಒಟ್ಟು 514 ಸುದ್ದಿಗಳಲ್ಲಿ 426–450 ಸುದ್ದಿಗಳು

ರಾಯಚೂರು ರಾಯಚೂರು

41ನೇ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನ ಸಿದ್ಧತೆ ಕುರಿತು ಎಂಎಲ್‌ಸಿ ವಸಂತಕುಮಾರ್ ಜೊತೆ ಚರ್ಚೆ

ರಾಯಚೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ರಾಯಚೂರಿನಲ್ಲಿ ನಡೆಯಲಿರುವ ರಾಜ್ಯಮಟ್ಟದ 41ನೇ ಪತ್ರಕರ್ತರ ಸಮ್ಮೇಳನದ ಪೂರ್ವ ಸಿದ್ಧತೆಗಳ ಕುರಿತು ವಿಧಾನ ಪರಿಷತ್ ಸದಸ್ಯ ಎ. ವಸಂತಕುಮಾರ್ ಅವರನ್ನು ಸಂಘದ ಪದಾಧಿಕಾರಿಗಳು ಭೇಟಿ ಮಾಡಿ ಚರ್ಚಿಸಿದರು.

ಮುಂದೆ ಓದಿ →
ರಾಯಚೂರು ರಾಯಚೂರು

ನೀಲಿ ಶಾಲು ಕುರಿತು ಪ್ರತಾಪ್ ಸಿಂಹ ಹೇಳಿಕೆಗೆ ಖಂಡನೆ; ದಲಿತ ಹೋರಾಟಗಾರರ ಕ್ಷಮೆಯಾಚನೆಗೆ ಆಗ್ರಹ

ರಾಯಚೂರು, ಸೆ.22: ದಲಿತ ಹೋರಾಟಗಾರರು ಧರಿಸುವ ನೀಲಿ ಶಾಲಿನ ಕುರಿತು ಮಾಜಿ ಸಂಸದ ಪ್ರತಾಪ್ ಸಿಂಹ ನೀಡಿರುವ ಹೇಳಿಕೆಯನ್ನು ಖಂಡಿಸಿರುವ ಎಂಆರ್‌ಎಚ್‌ಎಸ್ ರಾಯಚೂರು ಜಿಲ್ಲಾ ಅಧ್ಯಕ್ಷ ಹನುಮಂತಪ್ಪ ಮನ್ನಾಪುರಿ, ಅವರು ದಲಿತ ಹೋರಾಟಗಾರರ ಭಾವನೆಗಳಿಗೆ ಧಕ್ಕೆ ತಂದಿದ್ದು, ರಾಜ್ಯದ ದಲಿತ ಸಮುದಾಯದ ಬಳಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

ಮುಂದೆ ಓದಿ →
ರಾಯಚೂರು ರಾಯಚೂರು

ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ರಾಮಣ್ಣ ಹವಳೆ ಅವರಿಗೆ ಗೌರವ ಸನ್ಮಾನ

ರಾಯಚೂರು, ಸೆ.21: ರಾಯಚೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಅಕ್ಟೋಬರ್ 24 ಮತ್ತು 25ರಂದು ಹಮ್ಮಿಕೊಳ್ಳಲಾಗಿರುವ ರಾಯಚೂರು ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾದ ಹಿರಿಯ ಸಾಹಿತಿ ರಾಮಣ್ಣ ಹವಳೆ ಅವರನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು…

ಮುಂದೆ ಓದಿ →
ಮಾನ್ವಿ ರಾಯಚೂರು

ವಲಯ ಮಟ್ಟದ ಕ್ರೀಡಾಕೂಟ: ಖೋ-ಖೋ ಪಂದ್ಯದಲ್ಲಿ ಹಿರೇಕೊಟ್ನೇಕಲ್ ಶಾಲೆ ತಾಲೂಕು ಮಟ್ಟಕ್ಕೆ ಆಯ್ಕೆ

ಹಿರೇಕೊಟ್ನೇಕಲ್, ಸೆ.21: ಪ್ರಾಥಮಿಕ ಶಾಲೆಗಳ ವಲಯ ಮಟ್ಟದ ಕ್ರೀಡಾಕೂಟದ ಖೋ-ಖೋ ಪಂದ್ಯದಲ್ಲಿ ಹಿರೇಕೊಟ್ನೇಕಲ್ ಹರಿಜನವಾಡ ಪ್ರಾಥಮಿಕ ಶಾಲೆಯ ಬಾಲಕರ ತಂಡ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದೆ.

ಮುಂದೆ ಓದಿ →
ರಾಯಚೂರು ರಾಯಚೂರು

ಹದಿಹರೆಯದವರ ಆರೋಗ್ಯಕ್ಕೆ ಪೌಷ್ಟಿಕ ಆಹಾರ, ಯೋಗ-ಧ್ಯಾನ ಅಗತ್ಯ: ಬಿ. ರಾಮು

ರಾಯಚೂರು, ಸೆ.21: ಯುವಜನರು ಪೌಷ್ಟಿಕ ಆಹಾರ ಸೇವನೆ, ನಿಯಮಿತ ಯೋಗ-ಧ್ಯಾನ ಹಾಗೂ ವೈಯಕ್ತಿಕ ಮತ್ತು ಪರಿಸರ ಸ್ವಚ್ಛತೆಗೆ ಆದ್ಯತೆ ನೀಡುವ ಮೂಲಕ ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆರೋಗ್ಯ ಸಲಹೆಗಾರ ಬಿ. ರಾಮು ಹೇಳಿದರು.

ಮುಂದೆ ಓದಿ →
ರಾಯಚೂರು ರಾಯಚೂರು

ಇ-ಕೆವೈಸಿ ಸರ್ವರ್ ಸಮಸ್ಯೆ: ಗಡುವು ವಿಸ್ತರಿಸಲು ಒತ್ತಾಯ

ರಾಯಚೂರು, ಸೆ.21: ಪಡಿತರ ಚೀಟಿದಾರರ ಇ-ಕೆವೈಸಿ ಪ್ರಕ್ರಿಯೆಯಲ್ಲಿ ನಿರಂತರ ಸರ್ವರ್ ಸಮಸ್ಯೆ ಎದುರಾಗುತ್ತಿರುವುದರಿಂದ ಸಾರ್ವಜನಿಕರು ಹಾಗೂ ನ್ಯಾಯಬೆಲೆ ಅಂಗಡಿ ವಿತರಕರು ಸಂಕಷ್ಟ ಅನುಭವಿಸುತ್ತಿದ್ದಾರೆ.

ಮುಂದೆ ಓದಿ →
ರಾಯಚೂರು ರಾಯಚೂರು

1635 ಫಲಾನುಭವಿಗಳ ನಿವೇಶನ ಅರ್ಜಿಗಳನ್ನು ವಾರದೊಳಗೆ ಜಿಲ್ಲಾಡಳಿತಕ್ಕೆ ಕಳುಹಿಸಲು ಒತ್ತಾಯ

ರಾಯಚೂರು, ಸೆ.21: ದೇವರಾಜು ಅರಸು ವಿಶೇಷ ವರ್ಗ ಯೋಜನೆಯಡಿ ನಿವೇಶನ ಕೋರಿ ಸಲ್ಲಿಸಿರುವ 1,635 ಫಲಾನುಭವಿಗಳ ಅರ್ಜಿಗಳನ್ನು ತಕ್ಷಣ ಪರಿಶೀಲಿಸಿ, ಒಂದು ವಾರದೊಳಗೆ ಜಿಲ್ಲಾಡಳಿತಕ್ಕೆ ರವಾನಿಸಬೇಕು.

ಮುಂದೆ ಓದಿ →
ರಾಯಚೂರು ರಾಯಚೂರು

ಸೆ.23ರಂದು ಪ್ರಕಾಶ್ ರೈ ನೇತೃತ್ವದಲ್ಲಿ ಮತದಾರರ ಪಟ್ಟಿ ಕುರಿತು ಸಮಾಲೋಚನಾ ಸಭೆ

ರಾಯಚೂರು, ಸೆ.21: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ, ಕರಡು ಮತದಾರರ ಪಟ್ಟಿಯಲ್ಲಿನ ಬದಲಾವಣೆಗಳು ಹಾಗೂ ಅರ್ಹ ಮತದಾರರ ಹೆಸರು ಕೈಬಿಡುವ ಆತಂಕಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಸೆ.23ರಂದು ಸಂಜೆ 5 ಗಂಟೆಗೆ ನಗರದ ಟಿಪ್ಪು ಸುಲ್ತಾನ್ ಪಾರ್ಕ್‌ನಲ್ಲಿ ನಟ ಪ್ರಕಾಶ್…

ಮುಂದೆ ಓದಿ →
ರಾಯಚೂರು ರಾಯಚೂರು

ಗಡಿನಾಡಿನ ಕನ್ನಡ ಶಾಲೆಗಳ ಉಳಿವಿಗೆ ಸರ್ಕಾರದ ವಿಶೇಷ ಪ್ರೋತ್ಸಾಹ ಅಗತ್ಯ: ಅಶೋಕ್ ಜೈನ್

ರಾಯಚೂರು, ಸೆ.21: ಗಡಿಭಾಗಗಳಲ್ಲಿ ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಿ ಬೆಳೆಸುವುದರ ಜೊತೆಗೆ ಕನ್ನಡದಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಉತ್ತೇಜನ ನೀಡಲು ಸರ್ಕಾರ ವಿಶೇಷ ಯೋಜನೆಗಳನ್ನು ರೂಪಿಸಬೇಕು ಎಂದು ಕನ್ನಡ ಮಿತ್ರಕೂಟದ ಅಧ್ಯಕ್ಷ ಅಶೋಕ್ ಕುಮಾರ್ ಸಿ.ಕೆ. ಜೈನ್ ಒತ್ತಾಯಿಸಿದರು.

ಮುಂದೆ ಓದಿ →
ರಾಯಚೂರು ರಾಯಚೂರು

‘ಆರ್‌ಎಸ್‌ಎಸ್‌ ಫ್ಯಾಸಿಸಂ ವಿರುದ್ಧ ಹೋರಾಟ ತೀವ್ರಗೊಳಿಸುತ್ತೇವೆ’: ಪಿ.ಜೆ. ಜೇಮ್ಸ್

ರಾಯಚೂರಿನಲ್ಲಿ ಸಿಪಿಐ(ಎಂಎಲ್) ರೆಡ್ ಸ್ಟಾರ್ 13ನೇ ಮಹಾಧಿವೇಶನ ಸಮಾಪ್ತಿ; 19 ನಿರ್ಣಯಗಳಿಗೆ ಸರ್ವಾನುಮತದ ಒಪ್ಪಿಗೆ

ಮುಂದೆ ಓದಿ →
ರಾಯಚೂರು ರಾಯಚೂರು

ಎಕರೆಗೆ ₹50 ಸಾವಿರ ಬರ ಪರಿಹಾರಕ್ಕೆ ಆಗ್ರಹಿಸಿ ರೈತರ ಬೃಹತ್ ಪ್ರತಿಭಟನೆ

ಟ್ರ್ಯಾಕ್ಟರ್‌, ಎತ್ತಿನ ಬಂಡಿಗಳೊಂದಿಗೆ ರೈತರ ಮೆರವಣಿಗೆ; 12 ಗಂಟೆ ವಿದ್ಯುತ್‌, ಸಮರ್ಪಕ ನೀರು ಪೂರೈಕೆಗೆ ಒತ್ತಾಯ

ಮುಂದೆ ಓದಿ →
ರಾಯಚೂರು ರಾಯಚೂರು

ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಸಿಐಡಿ ತನಿಖೆಗೆ ಒಪ್ಪಿಸಲು ಡಿಎಚ್‌ಎಸ್ ಆಗ್ರಹ

ರಾಯಚೂರು: ಜಿಲ್ಲೆಯಲ್ಲಿ ನಡೆದ ದಲಿತರ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣಗಳು ಹಾಗೂ ದೇವದುರ್ಗ ತಾಲೂಕಿನ ಹದ್ದಿನಾಳ ಗ್ರಾಮದ ಭೀಮಾನಂದ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಬೇಕು, ಸಂತ್ರಸ್ತ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು ಹಾಗೂ ಸಿಂಧನೂರು ತಾಲೂಕಿನ ವೀರಾಪಪುರ ಗ್ರಾಮದ ಭೂ ಒಡೆತನ ಯೋಜನೆಯ ಫಲಾನುಭವಿಗಳ ಹೆಸರಿಗೆ…

ಮುಂದೆ ಓದಿ →
ರಾಯಚೂರು ರಾಯಚೂರು

ಮನೆ ಕಟ್ಟುವ ಕೈಗಳಂತೆ ಮನಸ್ಸನ್ನೂ ದೃಢಗೊಳಿಸಿಕೊಳ್ಳಿ: ಬಿ.ಕೆ. ಸ್ಮೀತಾ ಅಕ್ಕ

ರಾಯಚೂರು: ನಗರದ ಪ್ರಜಾಪಿತಾ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ರಾಜಯೋಗಿನಿ ಬಿ.ಕೆ. ಸ್ಮೀತಾ ಅಕ್ಕ ಹಾಗೂ ಕಾರ್ಯದರ್ಶಿ ಬಿ.ಕೆ. ಶಾರದಾ ಅಕ್ಕ ಅವರ ನೇತೃತ್ವದಲ್ಲಿ ಕಟ್ಟಡ ಕಾರ್ಮಿಕರಿಗೆ ಗೌರವ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

ಮುಂದೆ ಓದಿ →
ರಾಯಚೂರು ರಾಯಚೂರು

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಕೆ. ಶಾಂತಪ್ಪ ಅಧಿಕಾರ ಸ್ವೀಕಾರ

ರಾಯಚೂರು, ಸೆ.20: ರಾಯಚೂರು ಜಿಲ್ಲಾ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಕೆ. ಶಾಂತಪ್ಪ ಅವರು ಭಾನುವಾರ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಅಧಿಕಾರ ಸ್ವೀಕರಿಸಿ ಕಾರ್ಯಾರಂಭ ಮಾಡಿದರು. ಇತ್ತೀಚೆಗೆ ಪ್ರಕಟವಾದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಪಟ್ಟಿಯಲ್ಲಿ ರಾಯಚೂರು ಜಿಲ್ಲೆಗೆ ಕೆ. ಶಾಂತಪ್ಪ ಅವರನ್ನು ನೇಮಕ ಮಾಡಲಾಗಿತ್ತು.

ಮುಂದೆ ಓದಿ →
ರಾಯಚೂರು ರಾಯಚೂರು

ಜ್ಞಾನ, ವ್ಯಕ್ತಿತ್ವ ಮತ್ತು ಸಂಸ್ಕಾರ ರೂಪಿಸುವವರೇ ಶಿಕ್ಷಕರು: ಪ್ರೊ. ಶಿವಾನಂದ ಕೆಳಗಿನಮನಿ

ರಾಯಚೂರು, ಸೆ.20: ಅಜ್ಞಾನದ ಕತ್ತಲೆಯನ್ನು ದೂರ ಮಾಡಿ ಜ್ಞಾನದ ಬೆಳಕನ್ನು ಬೆಳಗಿಸುವವರೇ ಶಿಕ್ಷಕರು.

ಮುಂದೆ ಓದಿ →
ರಾಯಚೂರು ರಾಯಚೂರು

ಕರ್ಕಶ ಡಿಜೆ ಬಳಸಿದರೆ ವಾಹನ ಸೀಜ್: ಎಸ್‌ಪಿ ಅರುಣಾಂಶು ಗಿರಿ ಎಚ್ಚರಿಕೆ

ರಾಯಚೂರು: ಮುಂಬರುವ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕರ್ಕಶ ಧ್ವನಿಯ ಡಿಜೆ ಹಾಗೂ ನಿಯಮ ಮೀರಿ ಧ್ವನಿವರ್ಧಕಗಳನ್ನು ಬಳಸಿದರೆ ಸಂಬಂಧಿಸಿದ ಡಿಜೆ ವಾಹನಗಳನ್ನು ನಿರ್ದಾಕ್ಷಿಣ್ಯವಾಗಿ ಸೀಜ್ ಮಾಡಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಶು ಗಿರಿ ಖಡಕ್ ಎಚ್ಚರಿಕೆ ನೀಡಿದರು.

ಮುಂದೆ ಓದಿ →
ರಾಯಚೂರು ರಾಯಚೂರು

12ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ರಾಮಣ್ಣ ಹವಳೆ ಆಯ್ಕೆ

ರಾಯಚೂರು: ನಗರದ ಕನ್ನಡ ಭವನದಲ್ಲಿ ಭಾನುವಾರ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅಕ್ಟೋಬರ್ 24 ಮತ್ತು 25ರಂದು ನಡೆಯಲಿರುವ 12ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಜಿಲ್ಲೆಯ ಹಿರಿಯ ಸಾಹಿತಿ ರಾಮಣ್ಣ ಹವಳೆ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಮುಂದೆ ಓದಿ →
ರಾಯಚೂರು ರಾಯಚೂರು

ಕಾದಂಬರಿಕಾರ್ತಿ ಜಿ.ಎಂ. ರಾಜೇಶ್ವರಿಗೆ ದತ್ತಿ ಪ್ರಶಸ್ತಿ ಪ್ರದಾನ

ರಾಯಚೂರು: ನಗರದ ಕನ್ನಡ ಭವನದಲ್ಲಿ ಭಾನುವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೊಪ್ಪಳ ಜಿಲ್ಲೆಯ ಕಾರಟಗಿ ಮೂಲದ ಕಾದಂಬರಿಕಾರ್ತಿ ಜಿ.ಎಂ. ರಾಜೇಶ್ವರಿ ಅವರಿಗೆ 2026-27ನೇ ಸಾಲಿನ ದತ್ತಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಮುಂದೆ ಓದಿ →
ರಾಯಚೂರು ರಾಯಚೂರು

ಮಹಾಲಕ್ಷ್ಮಿ ಲೇಔಟ್‌ನಲ್ಲಿ ಗಣೇಶೋತ್ಸವ: ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ

ರಾಯಚೂರು: ನಗರದ ಮಹಾಲಕ್ಷ್ಮಿ ಲೇಔಟ್ ಬಡಾವಣೆಯಲ್ಲಿ ಎಂ.ಎಲ್.ಎನ್. ಯೂತ್ ಅಸೋಸಿಯೇಷನ್ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಯ ಏಳನೇ ದಿನದ ವಿಸರ್ಜನೆ ಅಂಗವಾಗಿ ಮುತ್ತೈದೆ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮವನ್ನು ಸಡಗರ-ಸಂಭ್ರಮದಿಂದ ಹಮ್ಮಿಕೊಳ್ಳಲಾಯಿತು.

ಮುಂದೆ ಓದಿ →
ರಾಯಚೂರು ರಾಯಚೂರು

ಗಣೇಶ ವಿಸರ್ಜನೆ ದುರಂತ: ಮೃತ ಬಾಲಕರ ಕುಟುಂಬಗಳಿಗೆ ಜಿಲ್ಲಾಧಿಕಾರಿ, ಎಸ್ಪಿ ಸಾಂತ್ವನ

ರಾಯಚೂರು: ನಗರದ ಐದನೇ ದಿನದ ಗಣೇಶ ವಿಸರ್ಜನೆ ಮೆರವಣಿಗೆಯ ವೇಳೆ ಸಂಭವಿಸಿದ ದುರ್ಘಟನೆಯಲ್ಲಿ ಮೃತಪಟ್ಟ ಇಬ್ಬರು ಬಾಲಕರ ಮನೆಗಳಿಗೆ ಭಾನುವಾರ ಜಿಲ್ಲಾಧಿಕಾರಿ ಪೂವಿತಾ ಎಸ್., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಸಹಾಯಕ ಆಯುಕ್ತರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಮುಂದೆ ಓದಿ →
ರಾಯಚೂರು ರಾಯಚೂರು

ಪಕ್ಷ ಸಂಘಟನೆ ಬಲಪಡಿಸಿ ಸ್ಥಳೀಯ ಸಂಸ್ಥೆ ಚುನಾವಣೆಗೆ ಸಜ್ಜಾಗೋಣ: ಎನ್.ಎಸ್. ಬೋಸರಾಜು

ರಾಯಚೂರು: ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಕೆ. ಶಾಂತಪ್ಪ ಅವರು ಸುದೀರ್ಘ ರಾಜಕೀಯ ಅನುಭವ ಹೊಂದಿದ್ದು, ಪಕ್ಷದ ಎಲ್ಲ ಹಂತದ ಮುಖಂಡರು ಹಾಗೂ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘಟನೆಯನ್ನು ಇನ್ನಷ್ಟು ಬಲಪಡಿಸಬೇಕು ಎಂದು ಮಾಜಿ ಸಚಿವ ಎನ್.ಎಸ್.

ಮುಂದೆ ಓದಿ →
ರಾಯಚೂರು ರಾಯಚೂರು

ಆಯುಷ್ ವೈದ್ಯರ ಬೇಡಿಕೆ ಈಡೇರಿಕೆಗೆ ಆಗ್ರಹ: ಸೆ.22ರಿಂದ ಅನಿರ್ದಿಷ್ಟಾವಧಿ ಮುಷ್ಕರ

ರಾಯಚೂರು: ಆಯುಷ್ ವೈದ್ಯರ ವೃತ್ತಿಪರ ಹಕ್ಕು, ಸೇವಾ ಭದ್ರತೆ ಹಾಗೂ ಆರೋಗ್ಯ ಸೇವೆಯಲ್ಲಿ ಸಮರ್ಪಕ ಅವಕಾಶ ಕಲ್ಪಿಸುವುದು ಸೇರಿದಂತೆ ಬಹುದಿನಗಳ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಆಯುಷ್ ಫೆಡರೇಷನ್ ಆಫ್ ಇಂಡಿಯಾ ಕರ್ನಾಟಕ ಘಟಕದ ನೇತೃತ್ವದಲ್ಲಿ ಸೆ.22ರಿಂದ ಅನಿರ್ದಿಷ್ಟಾವಧಿ ಮುಷ್ಕರ ಹಾಗೂ ಧರಣಿ ಸತ್ಯಾಗ್ರಹ ನಡೆಸಲು…

ಮುಂದೆ ಓದಿ →