ತುಂಗ ಬಿಂಬನಿಮ್ಮ ಕನ್ನಡ ದಿನಪತ್ರಿಕೆ ಈಗ ವೆಬ್ ಮತ್ತು ಇ-ಪೇಪರ್‌ನಲ್ಲಿಇಂದಿನ ಇ-ಪೇಪರ್ ಓದಿ →
👁 ಒಟ್ಟು ವೀಕ್ಷಣೆಗಳು: 101,092 ಇಂದಿನ ಓದುಗರು: 799 🟢 ಈಗ ಆನ್‌ಲೈನ್: 8
LATEST NEWS

ರಾಯಚೂರು

ರಾಯಚೂರು ಮತ್ತು ಕಲ್ಯಾಣ ಕರ್ನಾಟಕದ ಪ್ರಮುಖ ಬೆಳವಣಿಗೆಗಳು.

ಕಲ್ಯಾಣ ಕರ್ನಾಟಕ › ರಾಯಚೂರು
ಎಲ್ಲಾ ರಾಯಚೂರು ರಾಯಚೂರು ಮಾನ್ವಿ ದೇವದುರ್ಗ ಅರಕೇರಾ ಸಿರವಾರ ಲಿಂಗಸುಗೂರು ಸಿಂಧನೂರು ಮಸ್ಕಿ
ಎಲ್ಲಾ ರಾಯಚೂರು ಮಾನ್ವಿ ದೇವದುರ್ಗ ಸಿಂಧನೂರು ಲಿಂಗಸುಗೂರು ಸಿರವಾರ ಮಸ್ಕಿ ಕರ್ನಾಟಕ ರಾಜಕೀಯ ಶಿಕ್ಷಣ ಕ್ರೀಡೆ ಸಂಸ್ಕೃತಿ Crime Extra ಇತರೆ ಹೊಸಪೇಟೆ ಕಲಬುರಗಿ ಲೇಖನ ಮಂತ್ರಾಲಯ ಅರಕೇರಾ ಬೆಂಗಳೂರು ಮೈಸೂರು ಗಂಗಾವತಿ ಶಹಾಪುರ ಬಾಗಲಕೋಟೆ ಮೀರುತ್ ಹೈದರಾಬಾದ್ ನವದೆಹಲಿ ಕೊಪ್ಪಳ ಪಣಜಿ ಯಾದಗಿರಿ ಐಚಿ–ನಾಗೋಯಾ ಕುಷ್ಟಗಿ ನೆಲಮಂಗಲ

ಒಟ್ಟು 920 ಸುದ್ದಿಗಳಲ್ಲಿ 751–775 ಸುದ್ದಿಗಳು

ಮಾನ್ವಿ ರಾಯಚೂರು ಮಾನ್ವಿ

ಪ್ರಾಥಮಿಕ ಹಂತದಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಅರಿವು ಅಗತ್ಯ: ಅರುಣಜ್ಯೋತಿ

ಮಾನ್ವಿ: ವಿದ್ಯಾರ್ಥಿಗಳು ಪ್ರಾಥಮಿಕ ಹಾಗೂ ಪ್ರೌಢಶಾಲಾ ಹಂತದಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಅರಿವು ಬೆಳೆಸಿಕೊಂಡು, ಭವಿಷ್ಯದ ಗುರಿಗೆ ಅನುಗುಣವಾಗಿ ತಯಾರಿ ಆರಂಭಿಸಬೇಕು ಎಂದು ಸಮುತ್ಕರ್ಷ ಟ್ರಸ್ಟ್‌ನ ರಾಯಚೂರು ಕೇಂದ್ರದ ಮುಖ್ಯಸ್ಥ ಅರುಣಜ್ಯೋತಿ ಹೇಳಿದರು.

ಮುಂದೆ ಓದಿ →
ರಾಯಚೂರು ರಾಯಚೂರು

ಅವೈಜ್ಞಾನಿಕ ಚರಂಡಿ ಕಾಮಗಾರಿ: ಮಳೆ ಬಂದರೆ ಮನೆಯೊಳಗೆ ನೀರು, ನಿವಾಸಿಗಳ ಪರದಾಟ

ರಾಯಚೂರು: ಮಹಾನಗರ ಪಾಲಿಕೆ ವ್ಯಾಪ್ತಿಯ ಮಕ್ತಲಪೇಟೆಯ ಕುಂಬಾರ ಓಣಿಯಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಸ್ವಲ್ಪ ಮಳೆಯಾದರೂ ಮನೆಯೊಳಗೆ ನೀರು ನುಗ್ಗುತ್ತಿದ್ದು, ನಿವಾಸಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಸಮಸ್ಯೆ ಕುರಿತು ಹಲವು ಬಾರಿ ಗಮನಕ್ಕೆ ತಂದರೂ ಪರಿಹಾರ ದೊರೆತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಮುಂದೆ ಓದಿ →
ರಾಯಚೂರು ರಾಯಚೂರು

ಶಿಕ್ಷಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಬಿಇಒಗೆ ಮನವಿ

ರಾಯಚೂರು, ಸೆ.22: ಶಿಕ್ಷಕರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ಪದಾಧಿಕಾರಿಗಳು ಮಂಗಳವಾರ ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಈರಣ್ಣ ಕೋಸಿಗಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ಮುಂದೆ ಓದಿ →
ರಾಯಚೂರು ರಾಯಚೂರು

ಜಗತ್ತಿಗೆ ಭಕ್ತಿಯ ಬೆಳಕು ತೋರಿದ ಶ್ರೀ ಜಗನ್ನಾಥದಾಸರು: ಮುರಳಿಧರ ಕುಲಕರ್ಣಿ

ರಾಯಚೂರು: ಶ್ರೇಷ್ಠ ಹರಿದಾಸರಾದ ಶ್ರೀ ಜಗನ್ನಾಥದಾಸರು ದಾಸ ಚತುಷ್ಟಯರಲ್ಲಿ ಒಬ್ಬರಾಗಿದ್ದು, ದಾಸ ಸಾಹಿತ್ಯಕ್ಕೆ ಅದ್ವಿತೀಯ ಕೊಡುಗೆ ನೀಡಿದ್ದಾರೆ ಎಂದು ಶ್ರುತಿ ಸಾಹಿತ್ಯ ಮೇಳದ ಅಧ್ಯಕ್ಷ ಮುರಳಿಧರ ಕುಲಕರ್ಣಿ ಹೇಳಿದರು.

ಮುಂದೆ ಓದಿ →
ರಾಯಚೂರು ರಾಯಚೂರು

ಗಣೇಶ ವಿಸರ್ಜನೆ ಸಿದ್ಧತೆ, ನಗರಾಭಿವೃದ್ಧಿ ಕಾಮಗಾರಿಗಳ ಪರಿಶೀಲನೆ: ಜುಬಿನ್ ಮಹಾಪಾತ್ರ

ರಾಯಚೂರು: ಶ್ರೀ ಗೌರಿ-ಗಣೇಶ ಉತ್ಸವದ ಒಂಬತ್ತನೇ ದಿನ ನಡೆಯಲಿರುವ ಗಣೇಶ ಮೂರ್ತಿ ವಿಸರ್ಜನಾ ಸಮಾರಂಭದ ಸಿದ್ಧತೆಗಳ ಜೊತೆಗೆ ನಗರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿಯನ್ನು ನಗರ ಪಾಲಿಕೆ ಆಯುಕ್ತರು ಜುಬಿನ್ ಮಹಾಪಾತ್ರ ಪರಿಶೀಲಿಸಿದರು.

ಮುಂದೆ ಓದಿ →
ಲಿಂಗಸುಗೂರು ರಾಯಚೂರು ಲಿಂಗಸುಗೂರು

ಚಿಕ್ಕ ನಗನೂರಿನಲ್ಲಿ ವಿಜೃಂಭಣೆಯ ಗಣೇಶ ಮೂರ್ತಿ ವಿಸರ್ಜನೆ

ಲಿಂಗಸುಗೂರು: ತಾಲೂಕಿನ ಚಿಕ್ಕ ನಗನೂರ ಗ್ರಾಮದಲ್ಲಿ ಶಿವಲಿಂಗೇಶ್ವರ ಯುವಕ ಮಂಡಳಿ ವತಿಯಿಂದ ಗಣೇಶೋತ್ಸವದ ಅಂಗವಾಗಿ ಗಣೇಶ ಮೂರ್ತಿ ವಿಸರ್ಜನೆ ಕಾರ್ಯಕ್ರಮವನ್ನು ಭಕ್ತಿಭಾವ, ಸಡಗರ ಹಾಗೂ ಸಂಭ್ರಮದಿಂದ ವಿಜೃಂಭಣೆಯಿಂದ ನೆರವೇರಿಸಲಾಯಿತು.

ಮುಂದೆ ಓದಿ →
ರಾಯಚೂರು ರಾಯಚೂರು

ಭೂಮಾನಂದ ಸೇರಿ ಮೂರು ಪ್ರಕರಣ ಸಿಐಡಿಗೆ ವಹಿಸಲು ದಲಿತ ಮುಖಂಡರ ಆಗ್ರಹ

ರಾಯಚೂರು, ಸೆ.22: ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಭೂಮಾನಂದ ಕೊಲೆ ಪ್ರಕರಣ ಸೇರಿದಂತೆ ದಲಿತರ ಮೇಲಿನ ಮೂರು ಗಂಭೀರ ಪ್ರಕರಣಗಳನ್ನು ಸಿಐಡಿ ತನಿಖೆಗೆ ವಹಿಸಿ, ನಿಷ್ಪಕ್ಷಪಾತ ಹಾಗೂ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ದಲಿತ ಮುಖಂಡರ ನಿಯೋಗ ಗೃಹ ಸಚಿವರನ್ನು ಒತ್ತಾಯಿಸಿದೆ.

ಮುಂದೆ ಓದಿ →
ಲಿಂಗಸುಗೂರು ರಾಯಚೂರು ಲಿಂಗಸುಗೂರು

ಹಟ್ಟಿ ಕಾ ದೊಡ್ಡಪ್ಪ ಗಣಪತಿ ಉತ್ಸವ: ಭಕ್ತರಿಗೆ 25 ಬಗೆಯ ಪ್ರಸಾದ ವಿತರಣೆ

ಹಟ್ಟಿ ಚಿನ್ನದ ಗಣಿ: ಪಟ್ಟಣದ ಹಳೆಯ ಪಂಚಾಯಿತಿ ವ್ಯಾಪ್ತಿಯ ಜಾಗೀರದಾರ ನಗರದಲ್ಲಿ ಗಣೇಶ ಚತುರ್ಥಿ ಅಂಗವಾಗಿ ಕಳೆದ 19 ವರ್ಷಗಳಿಂದ ನಿರಂತರವಾಗಿ ‘ಹಟ್ಟಿ ಕಾ ದೊಡ್ಡಪ್ಪ ಗಣಪತಿ’ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಭಕ್ತಿಭಾವದಿಂದ ನಡೆಸಿಕೊಂಡು ಬರಲಾಗುತ್ತಿದೆ.

ಮುಂದೆ ಓದಿ →
ರಾಯಚೂರು ರಾಯಚೂರು

ಮಕ್ಕಳಿಗೆ ಪೋಷಣೆ, ರಕ್ಷಣೆ ನೀಡಲು ಆಸಕ್ತರಿಂದ ಫಾಸ್ಟರ್ ಕೇರ್‌ಗೆ ಅರ್ಜಿ ಆಹ್ವಾನ

ರಾಯಚೂರು ಸೆ. 22 (ಕರ್ನಾಟಕ ವಾರ್ತೆ): ಜಿಲ್ಲಾ ಮಕ್ಕಳ ರಕ್ಷಣಾ ಘಟಕ ರಾಯಚೂರು ವತಿಯಿಂದ 0-18 ವರ್ಷದೊಳಗಿನ ಮಕ್ಕಳ ಪೋಷಣೆ ಮತ್ತು ರಕ್ಷಣೆಗಾಗಿ ಆಸಕ್ತರಿಂದ ಫಾಸ್ಟರ್ ಕೇರ್‌ಗೆ ಅರ್ಜಿ ಆಹ್ವಾನಿಸಲಾಗಿದೆ.

ಮುಂದೆ ಓದಿ →
ಮಂತ್ರಾಲಯ ರಾಯಚೂರು

ಮಂತ್ರಾಲಯ ಶ್ರೀಮಠದಲ್ಲಿ ಸುದರ್ಶನ ಹೋಮ, ತಪ್ತ ಮುದ್ರಾಧಾರಣೆ

ಮಂತ್ರಾಲಯ: ಭಾದ್ರಪದ ಶುಧ್ಧ ಏಕಾದಶಿಯ ಪವಿತ್ರ ಸಂದರ್ಭದಲ್ಲಿ ಮಂತ್ರಾಲಯದ ಶ್ರೀಮಠದಲ್ಲಿ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಶ್ರೀ ಸುದರ್ಶನ ಹೋಮ ಹಾಗೂ ತಪ್ತ ಮುದ್ರಾಧಾರಣೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಭಕ್ತಿಭಾವದಿಂದ ನೆರವೇರಿತು.

ಮುಂದೆ ಓದಿ →
ಮಾನ್ವಿ ರಾಯಚೂರು ಮಾನ್ವಿ

ಅತಿಥಿ ಉಪನ್ಯಾಸಕರ ಸಂಘಕ್ಕೆ ಡಾ. ಬಸವರಾಜ್ ಸುಂಕೇಶ್ವರ ಅಧ್ಯಕ್ಷ

ಮಾನ್ವಿ: ಪಟ್ಟಣದ ಬಾಷುಮಿಯಾ ಸಾಹುಕಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರ ಸಂಘದ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಮುಂದೆ ಓದಿ →
ಮಾನ್ವಿ ರಾಯಚೂರು ಮಾನ್ವಿ

ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿ: ಭೀಮರಾಯ ಬಿ. ರಾಮಸಮುದ್ರ

ಮಾನ್ವಿ: ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸು ಸಾಧಿಸಬೇಕಾದರೆ ಪ್ರತಿಯೊಂದು ಕ್ಷೇತ್ರದಲ್ಲೂ ಪ್ರಯತ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಕ್ರೀಡೆಯಲ್ಲಿ ಸೋಲು ಮತ್ತು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮೂಲಕ ನಿಜವಾದ ಕ್ರೀಡಾಸ್ಫೂರ್ತಿಯನ್ನು ಮೈಗೂಡಿಸಿಕೊಳ್ಳಬೇಕು ಎಂದು ತಹಶೀಲ್ದಾರ್ ಭೀಮರಾಯ ಬಿ. ರಾಮಸಮುದ್ರ ಹೇಳಿದರು.

ಮುಂದೆ ಓದಿ →
ಮಾನ್ವಿ ರಾಯಚೂರು ಮಾನ್ವಿ

ತಪ್ಪು ತಿದ್ದುವ ತಂದೆ-ತಾಯಿ, ಗುರುಗಳ ಮಾರ್ಗದರ್ಶನದಲ್ಲಿ ಸನ್ಮಾರ್ಗದಲ್ಲಿ ನಡೆಯಿರಿ: ಡಾ. ಹೈಂದವಿ

ಮಾನ್ವಿ: ಜೀವನದಲ್ಲಿ ತಪ್ಪು ಮಾಡಿದಾಗ ಅದನ್ನು ತಿದ್ದಿ ಸರಿದಾರಿಗೆ ಕರೆತರುವವರು ತಂದೆ-ತಾಯಿ ಹಾಗೂ ನಿಜವಾದ ಮಾರ್ಗದರ್ಶಕರಾದ ಗುರುಗಳು. ಅವರ ಸಲಹೆ, ಮಾರ್ಗದರ್ಶನವನ್ನು ಗೌರವಿಸಿ ಉತ್ತಮ ಮಾರ್ಗದಲ್ಲಿ ನಡೆಯಬೇಕು ಎಂದು ಶಾರದಾ ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಬಿ. ಹೈಂದವಿ ಬಿ. ಮಧುಸೂದನ ಗುಪ್ತಾಜೀ ಹೇಳಿದರು.

ಮುಂದೆ ಓದಿ →
ರಾಯಚೂರು ರಾಯಚೂರು

ಗುಸ್ಮಾ ಒಕ್ಕೂಟದ 40 ಖಾಸಗಿ ಶಾಲೆಗಳಿಗೆ ಬೋರ್‌ವೆಲ್, ಶುದ್ಧ ಕುಡಿಯುವ ನೀರಿನ ಘಟಕ: ಶಾಸಕ ದದ್ದಲ್ ಭರವಸೆ

ರಾಯಚೂರು: ಗ್ರಾಮೀಣ ಭಾಗದ ಅನುದಾನರಹಿತ ಖಾಸಗಿ ಶಾಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಗುಸ್ಮಾ ಒಕ್ಕೂಟದ ವ್ಯಾಪ್ತಿಯ 40 ಶಾಲೆಗಳಿಗೆ ಬೋರ್‌ವೆಲ್ ಹಾಗೂ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳುವುದಾಗಿ ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಭರವಸೆ ನೀಡಿದರು.

ಮುಂದೆ ಓದಿ →
ರಾಯಚೂರು ರಾಯಚೂರು

ರಾಯಚೂರಿನಲ್ಲಿ 7 ಸೀಟರ್‌ ಕಿಯಾ ಸೊರೆಂಟೊ ಅನಾವರಣ

ರಾಯಚೂರು, ಸೆ.21: ತಂತ್ರಜ್ಞಾನ, ಸುರಕ್ಷತೆ ಮತ್ತು ಆರಾಮದಾಯಕ ಚಾಲನಾ ಅನುಭವವನ್ನು ಒಂದೇ ವೇದಿಕೆಯಲ್ಲಿ ಒದಗಿಸುವ ಉದ್ದೇಶದಿಂದ ರೂಪಿಸಲಾದ ನೂತನ 7 ಸೀಟರ್‌ ಕಿಯಾ ಸೊರೆಂಟೊ ಕಾರನ್ನು ನಗರದ ಕುಮಾರ್ ಕಿಯಾ ಶೋರೂಮ್‌ನಲ್ಲಿ ಅನಾವರಣಗೊಳಿಸಲಾಯಿತು.

ಮುಂದೆ ಓದಿ →
ಸಿಂಧನೂರು ರಾಯಚೂರು ಸಿಂಧನೂರು

ವಲ್ಕಮದಿನ್ನಿಯಲ್ಲಿ ಆರೋಗ್ಯ ಜಾಗೃತಿ ಮಳಿಗೆಗೆ ಬಸನಗೌಡ ಬಾದರ್ಲಿ ಭೇಟಿ

ಸಿಂಧನೂರು: ತಾಲೂಕಿನ ವಲ್ಕಮದಿನ್ನಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ‘ಪ್ರಜಾ ಸೇವಾ ಆಂದೋಲನ’ ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಸ್ಥಾಪಿಸಲಾಗಿದ್ದ ತುರ್ತು ಚಿಕಿತ್ಸಾ ಕೇಂದ್ರ ಹಾಗೂ ಮಾಹಿತಿ, ಶಿಕ್ಷಣ ಮತ್ತು ಸಂವಹನ (ಐಇಸಿ) ಜಾಗೃತಿ ಮಳಿಗೆಗೆ ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಭೇಟಿ ನೀಡಿ…

ಮುಂದೆ ಓದಿ →
ಲಿಂಗಸುಗೂರು ರಾಯಚೂರು ಲಿಂಗಸುಗೂರು

NH-748Aಗೆ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರಕ್ಕೆ ಆಗ್ರಹ: ಅನಿರ್ದಿಷ್ಟಾವಧಿ ಧರಣಿ ಆರಂಭ

ಹಟ್ಟಿ ಚಿನ್ನದ ಗಣಿ, ಸೆ.22: ಗುರುಗುಂಟ ಹೋಬಳಿ ವ್ಯಾಪ್ತಿಯ ಚಿಕ್ಕಹೆಸರೂರು ಗ್ರಾಮದ ಸರ್ವೇ ನಂ.41 ಹಾಗೂ ಅದರ ಉಪವಿಭಾಗಗಳ ಜಮೀನುಗಳನ್ನು NH-748A ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಂಡಿದ್ದರೂ, ಸಂಬಂಧಪಟ್ಟ ಭೂ ಮಾಲೀಕರಿಗೆ ಇದುವರೆಗೆ ಕಾನೂನುಬದ್ಧ ಪರಿಹಾರ ನೀಡಿಲ್ಲ ಎಂದು ಆರೋಪಿಸಿ ದಲಿತ ಸಂರಕ್ಷ ಸಮಿತಿ…

ಮುಂದೆ ಓದಿ →
ರಾಯಚೂರು ರಾಯಚೂರು

ಗಣೇಶ ವಿಸರ್ಜನೆ ದುರಂತ: ಸಂತ್ರಸ್ತ ಕುಟುಂಬಗಳಿಗೆ ಪರಿಹಾರ, ಪುನರ್ವಸತಿಗೆ ಆಗ್ರಹ

ರಾಯಚೂರು: ನಗರದ ವಾರ್ಡ್ ನಂ.13ರ ಜಹೀರಾಬಾದ್ ಬಡಾವಣೆಯಲ್ಲಿ ಗಣೇಶ ವಿಸರ್ಜನೆ ವೇಳೆ ಸಂಭವಿಸಿದ ಟ್ರಾಕ್ಟರ್ ಅಪಘಾತದಲ್ಲಿ ಇಬ್ಬರು ಅಪ್ರಾಪ್ತ ಮಕ್ಕಳು ಮೃತಪಟ್ಟಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಸಂತ್ರಸ್ತ ಮೂರು ಪರಿಶಿಷ್ಟ ಜಾತಿ ಕುಟುಂಬಗಳಿಗೆ ತಕ್ಷಣ ಪರಿಹಾರ ಹಾಗೂ ಪುನರ್ವಸತಿ ಕಲ್ಪಿಸಬೇಕು ಎಂದು ಭೀಮ್…

ಮುಂದೆ ಓದಿ →
ರಾಯಚೂರು ರಾಯಚೂರು

ಮನೆ ಮನೆಗೆ ತೆರಳಿ ಹೊಸ ಮತದಾರರ ನೋಂದಣಿ ಅಭಿಯಾನ

ರಾಯಚೂರು, ಸೆ.22: ಭಾರತೀಯ ಚುನಾವಣಾ ಆಯೋಗದ ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ಅರ್ಹ ಮತದಾರರ ನೋಂದಣಿ ಪ್ರಕ್ರಿಯೆಯ ಅಂಗವಾಗಿ ವೇದಾಂತ ಪದವಿ ಮಹಾವಿದ್ಯಾಲಯದ ಎನ್‌ಎಸ್‌ಎಸ್ ಘಟಕ ಮತ್ತು ಮತದಾರರ ಸಾಕ್ಷರತಾ ಕ್ಲಬ್ ವತಿಯಿಂದ ಮನೆ ಮನೆಗೆ ತೆರಳಿ ಹೊಸ ಮತದಾರರ ನೋಂದಣಿ ಕುರಿತು ಜಾಗೃತಿ ಮೂಡಿಸಲಾಯಿತು.

ಮುಂದೆ ಓದಿ →
ರಾಯಚೂರು ರಾಯಚೂರು

ಭೂಮಿ ಹಕ್ಕಿಗಾಗಿ ಅಮರಣಾಂತ ಉಪವಾಸ ಸತ್ಯಾಗ್ರಹ ಎರಡನೇ ದಿನಕ್ಕೆ

ರಾಯಚೂರು, ಸೆ.22: ಭೂಮಿ ಹಕ್ಕು, ಪಟ್ಟಾ ಜಮೀನುಗಳಿಗೆ ರಕ್ಷಣೆ ಹಾಗೂ ಸರ್ಕಾರದಿಂದ ಮಂಜೂರಾದ ಜಮೀನುಗಳ ಸರ್ವೇ ಮತ್ತು ಹದ್ದುಬಸ್ತು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ವತಿಯಿಂದ ನಗರದ ಟಿಪ್ಪು ಸುಲ್ತಾನ್ ಗಾರ್ಡನ್‌ನಲ್ಲಿ ಆರಂಭಿಸಿರುವ ಅಮರಣಾಂತ ಉಪವಾಸ ಸತ್ಯಾಗ್ರಹ…

ಮುಂದೆ ಓದಿ →
ರಾಯಚೂರು ರಾಯಚೂರು

ಆಯುಷ್ ವೈದ್ಯರ ಮೇಲಿನ ಕಿರುಕುಳಕ್ಕೆ ಕ್ರಮಕ್ಕೆ ಆಗ್ರಹ: ಅನಿರ್ದಿಷ್ಟಾವಧಿ ಧರಣಿ

ರಾಯಚೂರು, ಸೆ.22: ಆಯುಷ್ ವೈದ್ಯರನ್ನು ಗುರಿಯಾಗಿಸಿಕೊಂಡು ಕಿರುಕುಳ, ಬೆದರಿಕೆ ಹಾಗೂ ಮಾನಸಿಕ ಒತ್ತಡ ಉಂಟುಮಾಡಲಾಗುತ್ತಿದೆ ಎಂದು ಆರೋಪಿಸಿ, ಸಂಬಂಧಪಟ್ಟವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ವೈದ್ಯರಿಗೆ ಸಮರ್ಪಕ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿ ಆಯುಷ್ ಫೆಡರೇಶನ್ ಆಫ್ ಇಂಡಿಯಾ (AYUSH FEDERATION…

ಮುಂದೆ ಓದಿ →
ರಾಯಚೂರು ರಾಯಚೂರು

41ನೇ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನ ಸಿದ್ಧತೆ ಕುರಿತು ಎಂಎಲ್‌ಸಿ ವಸಂತಕುಮಾರ್ ಜೊತೆ ಚರ್ಚೆ

ರಾಯಚೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ರಾಯಚೂರಿನಲ್ಲಿ ನಡೆಯಲಿರುವ ರಾಜ್ಯಮಟ್ಟದ 41ನೇ ಪತ್ರಕರ್ತರ ಸಮ್ಮೇಳನದ ಪೂರ್ವ ಸಿದ್ಧತೆಗಳ ಕುರಿತು ವಿಧಾನ ಪರಿಷತ್ ಸದಸ್ಯ ಎ. ವಸಂತಕುಮಾರ್ ಅವರನ್ನು ಸಂಘದ ಪದಾಧಿಕಾರಿಗಳು ಭೇಟಿ ಮಾಡಿ ಚರ್ಚಿಸಿದರು.

ಮುಂದೆ ಓದಿ →
ರಾಯಚೂರು ರಾಯಚೂರು

ನೀಲಿ ಶಾಲು ಕುರಿತು ಪ್ರತಾಪ್ ಸಿಂಹ ಹೇಳಿಕೆಗೆ ಖಂಡನೆ; ದಲಿತ ಹೋರಾಟಗಾರರ ಕ್ಷಮೆಯಾಚನೆಗೆ ಆಗ್ರಹ

ರಾಯಚೂರು, ಸೆ.22: ದಲಿತ ಹೋರಾಟಗಾರರು ಧರಿಸುವ ನೀಲಿ ಶಾಲಿನ ಕುರಿತು ಮಾಜಿ ಸಂಸದ ಪ್ರತಾಪ್ ಸಿಂಹ ನೀಡಿರುವ ಹೇಳಿಕೆಯನ್ನು ಖಂಡಿಸಿರುವ ಎಂಆರ್‌ಎಚ್‌ಎಸ್ ರಾಯಚೂರು ಜಿಲ್ಲಾ ಅಧ್ಯಕ್ಷ ಹನುಮಂತಪ್ಪ ಮನ್ನಾಪುರಿ, ಅವರು ದಲಿತ ಹೋರಾಟಗಾರರ ಭಾವನೆಗಳಿಗೆ ಧಕ್ಕೆ ತಂದಿದ್ದು, ರಾಜ್ಯದ ದಲಿತ ಸಮುದಾಯದ ಬಳಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

ಮುಂದೆ ಓದಿ →