ತುಂಗ ಬಿಂಬನಿಮ್ಮ ಕನ್ನಡ ದಿನಪತ್ರಿಕೆ ಈಗ ವೆಬ್ ಮತ್ತು ಇ-ಪೇಪರ್‌ನಲ್ಲಿಇಂದಿನ ಇ-ಪೇಪರ್ ಓದಿ →
👁 ಒಟ್ಟು ವೀಕ್ಷಣೆಗಳು: 101,929 ಇಂದಿನ ಓದುಗರು: 1,047 🟢 ಈಗ ಆನ್‌ಲೈನ್: 8
LATEST NEWS

ರಾಯಚೂರು

ರಾಯಚೂರು ಮತ್ತು ಕಲ್ಯಾಣ ಕರ್ನಾಟಕದ ಪ್ರಮುಖ ಬೆಳವಣಿಗೆಗಳು.

ಕಲ್ಯಾಣ ಕರ್ನಾಟಕ › ರಾಯಚೂರು
ಎಲ್ಲಾ ರಾಯಚೂರು ರಾಯಚೂರು ಮಾನ್ವಿ ದೇವದುರ್ಗ ಅರಕೇರಾ ಸಿರವಾರ ಲಿಂಗಸುಗೂರು ಸಿಂಧನೂರು ಮಸ್ಕಿ
ಎಲ್ಲಾ ರಾಯಚೂರು ಮಾನ್ವಿ ದೇವದುರ್ಗ ಸಿಂಧನೂರು ಲಿಂಗಸುಗೂರು ಸಿರವಾರ ಮಸ್ಕಿ ಕರ್ನಾಟಕ ರಾಜಕೀಯ ಶಿಕ್ಷಣ ಕ್ರೀಡೆ ಸಂಸ್ಕೃತಿ Crime Extra ಇತರೆ ಹೊಸಪೇಟೆ ಕಲಬುರಗಿ ಲೇಖನ ಮಂತ್ರಾಲಯ ಅರಕೇರಾ ಬೆಂಗಳೂರು ಮೈಸೂರು ಗಂಗಾವತಿ ಶಹಾಪುರ ಬಾಗಲಕೋಟೆ ಮೀರುತ್ ಹೈದರಾಬಾದ್ ನವದೆಹಲಿ ಕೊಪ್ಪಳ ಪಣಜಿ ಯಾದಗಿರಿ ಐಚಿ–ನಾಗೋಯಾ ಕುಷ್ಟಗಿ ನೆಲಮಂಗಲ

ಒಟ್ಟು 923 ಸುದ್ದಿಗಳಲ್ಲಿ 426–450 ಸುದ್ದಿಗಳು

ದೇವದುರ್ಗ ರಾಯಚೂರು ದೇವದುರ್ಗ

ಕಳಪೆ ಕಾಮಗಾರಿ ಪ್ರಶ್ನಿಸಿದ ಅಧಿಕಾರಿಯ ವರ್ಗಾವಣೆ ಆರೋಪ: ಆದೇಶ ಹಿಂಪಡೆಯದಿದ್ದರೆ ಪ್ರತಿಭಟನೆ ಎಚ್ಚರಿಕೆ

ದೇವದುರ್ಗ: ತಾಲೂಕಿನ ಮದರಕಲ್ ಗ್ರಾಮದ ಸರ್ಕಾರಿ ಶಾಲಾ ಕಟ್ಟಡ ಕಾಮಗಾರಿಯ ಗುಣಮಟ್ಟವನ್ನು ಪ್ರಶ್ನಿಸಿ ನಿಯಮಾನುಸಾರ ಕೆಲಸ ಮಾಡುವಂತೆ ಸೂಚಿಸಿದ್ದ ಅಧಿಕಾರಿಯನ್ನು ರಾಜಕೀಯ ಒತ್ತಡದ ಮೂಲಕ ವರ್ಗಾವಣೆ ಮಾಡಿಸಲಾಗಿದೆ ಎಂದು ಆರೋಪಿಸಿರುವ ಮಾದಿಗ ಸಮಾಜದ ಮುಖಂಡರು, ವರ್ಗಾವಣೆ ಆದೇಶವನ್ನು ತಕ್ಷಣ ಹಿಂಪಡೆಯದಿದ್ದರೆ ತಾಲೂಕು ಮಟ್ಟದಲ್ಲಿ…

ಮುಂದೆ ಓದಿ →
ದೇವದುರ್ಗ ರಾಯಚೂರು ದೇವದುರ್ಗ

ಅ.10ರಂದು ಶ್ರೀ ಸಚ್ಚಿದಾನಂದ ಶಿವಯೋಗಿಗಳ ಮಹಾರಥೋತ್ಸವ

ಸದ್ಗುರು ಸಮರ್ಥ ಕಲಿಯುಗದ ಕಲ್ಪವೃಕ್ಷ ಶ್ರೀ ಸಚ್ಚಿದಾನಂದ ಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ಅ.10ರಂದು ಶ್ರೀಮಠದಲ್ಲಿ ಮಹಾರಥೋತ್ಸವ ವಿಜೃಂಭಣೆಯಿಂದ ಜರುಗಲಿದೆ ಎಂದು ಪುರಸಭೆ ಮಾಜಿ ಅಧ್ಯಕ್ಷ ಶರಣಗೌಡ ಬಕ್ರಿ ಗೌರಂಪೇಟ ತಿಳಿಸಿದರು.

ಮುಂದೆ ಓದಿ →
ಸಿಂಧನೂರು ರಾಯಚೂರು ಸಿಂಧನೂರು

ದೊಡ್ಡ ಹಳ್ಳದ ಬಫರ್ ಝೋನ್‌ನಲ್ಲಿ ವಾಣಿಜ್ಯ ಮಳಿಗೆ ನಿರ್ಮಾಣ ಆರೋಪ; ನಗರಸಭೆ ವಿರುದ್ಧ ಪ್ರಶ್ನೆ

ಸಿಂಧನೂರು: ನಗರದ ದೊಡ್ಡ ಹಳ್ಳದ ದಂಡೆಯ ಬಫರ್ ಝೋನ್ ವ್ಯಾಪ್ತಿಯಲ್ಲಿ ನಗರಸಭೆಯಿಂದ ಕಟ್ಟಡ ನಿರ್ಮಾಣಕ್ಕೆ ಅನುಮತಿ ಪಡೆಯದೆ ಎರಡು ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ನಗರಸಭೆ ಅಧಿಕಾರಿಗಳ ಕಾರ್ಯವೈಖರಿ ಕುರಿತು ಸಾರ್ವಜನಿಕ ವಲಯದಲ್ಲಿ ಪ್ರಶ್ನೆಗಳು ಎದ್ದಿವೆ.

ಮುಂದೆ ಓದಿ →
ಸಿಂಧನೂರು ರಾಯಚೂರು ಸಿಂಧನೂರು

ರಾಜಧನ ಪಾವತಿಸದೆ ಅಕ್ರಮ ಮರಳು ಸಂಗ್ರಹ-ಮಾರಾಟ ಆರೋಪ: ಹನುಮೇಶ್ ಕೆ.

ಸಿಂಧನೂರು: ನಗರದಲ್ಲಿ ರಾಜಧನ ಪಾವತಿಸದೆ ಅಕ್ರಮವಾಗಿ ಮರಳು ಸಂಗ್ರಹಿಸಿ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಸಂಬಂಧಪಟ್ಟ ಇಲಾಖೆಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಹನುಮೇಶ್ ಕೆ. ಒತ್ತಾಯಿಸಿದ್ದಾರೆ.

ಮುಂದೆ ಓದಿ →
ದೇವದುರ್ಗ ರಾಯಚೂರು ದೇವದುರ್ಗ

ನಿರುದ್ಯೋಗ ನಿವಾರಣೆಯಲ್ಲಿ ಯುವಶಕ್ತಿಯ ಪಾತ್ರ ನಿರ್ಣಾಯಕ: ಶಂಭು ಸೋಮನಾಥ ಶಿವಾಚಾರ್ಯ ಮಹಾಸ್ವಾಮೀಜಿ

ಗಬ್ಬೂರು: ಯುವಜನರು ಕೇವಲ ಉದ್ಯೋಗ ಹುಡುಕುವ ಮನೋಭಾವಕ್ಕೆ ಸೀಮಿತವಾಗದೆ, ಕೌಶಲ್ಯಾಭಿವೃದ್ಧಿ ಹಾಗೂ ಸ್ವಾವಲಂಬನೆಯ ಮೂಲಕ ಉದ್ಯೋಗ ಸೃಷ್ಟಿಸುವತ್ತ ಹೆಜ್ಜೆ ಇಡಬೇಕು.

ಮುಂದೆ ಓದಿ →
ಲಿಂಗಸುಗೂರು ರಾಯಚೂರು ಲಿಂಗಸುಗೂರು

ಹಿರಿಯ ನಾಗರಿಕರು ಸಮಾಜದ ಅನುಭವದ ಸಂಪತ್ತು: ನ್ಯಾ. ಉಂಡಿ ಮಂಜುಳಾ ಶಿವಪ್ಪ

ಲಿಂಗಸುಗೂರು: ಹಿರಿಯ ನಾಗರಿಕರು ಕೇವಲ ಕುಟುಂಬದ ಹಿರಿಯರಲ್ಲ, ತಮ್ಮ ಅನುಭವ ಮತ್ತು ಜ್ಞಾನದಿಂದ ಸಮಾಜಕ್ಕೆ ದಿಕ್ಕು ತೋರಿಸುವ ಬೆನ್ನೆಲುಬಾಗಿದ್ದಾರೆ ಎಂದು ಹಿರಿಯ ಶ್ರೇಣಿ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಧೀಶೆ ಉಂಡಿ ಮಂಜುಳಾ ಶಿವಪ್ಪ ಹೇಳಿದರು.

ಮುಂದೆ ಓದಿ →
ಲಿಂಗಸುಗೂರು ರಾಯಚೂರು ಲಿಂಗಸುಗೂರು

ಅ.11ರಿಂದ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಭದ್ರಕಾಳಿ ನವರಾತ್ರೋತ್ಸವ

ಲಿಂಗಸುಗೂರು: ಪಟ್ಟಣದ 17ನೇ ವಾರ್ಡ್‌ನಲ್ಲಿರುವ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ನವರಾತ್ರೋತ್ಸವ ಹಾಗೂ ವಿಜಯದಶಮಿ ಹಬ್ಬದ ಅಂಗವಾಗಿ ಅ.11ರಿಂದ 19ರವರೆಗೆ ಭಗವತಿ ಭದ್ರಕಾಳಿಗೆ ಒಂಬತ್ತು ದಿನಗಳ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಮುಂದೆ ಓದಿ →
ರಾಯಚೂರು ರಾಯಚೂರು

ಸಿದ್ದು ಹೂಗಾರ್‌ಗೆ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಸ್ಥಾನ: ಡಾ. ಶಿವರಾಜ್ ಪಾಟೀಲ ಅಭಿನಂದನೆ

ರಾಯಚೂರು, ಅ.7: ಭಾರತೀಯ ಜನತಾ ಪಕ್ಷದ ರಾಯಚೂರು ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷರಾಗಿ ಸಿದ್ದು ಹೂಗಾರ್ ಅವರನ್ನು ನೇಮಕ ಮಾಡಲಾಗಿದ್ದು, ಅವರ ನೂತನ ಜವಾಬ್ದಾರಿಗೆ ರಾಯಚೂರು ನಗರ ಶಾಸಕ ಡಾ. ಶಿವರಾಜ್ ಪಾಟೀಲ ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದರು.

ಮುಂದೆ ಓದಿ →
ಲಿಂಗಸುಗೂರು ರಾಯಚೂರು ಲಿಂಗಸುಗೂರು

ಮಳೆಯ ಕೊರತೆ, ಹೆಚ್ಚಿದ ಬಿಸಿಲು: ಹಟ್ಟಿ ಪಟ್ಟಣದಲ್ಲಿ ನೀರಿನ ಸಂಕಷ್ಟ

ಹಟ್ಟಿ ಚಿನ್ನದ ಗಣಿ: ಹಟ್ಟಿ ಪಟ್ಟಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆಯ ಕೊರತೆ ಮತ್ತು ಹೆಚ್ಚುತ್ತಿರುವ ಬಿಸಿಲಿನ ತಾಪಮಾನದಿಂದ ಬರದ ಆತಂಕ ಗಂಭೀರವಾಗಿದ್ದು, ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ಮುಂದೆ ಓದಿ →
ರಾಯಚೂರು ರಾಯಚೂರು

ಸೇವಾ ಜ್ಯೋತಿ ಯಾತ್ರೆಯಲ್ಲಿ ಅನಾವರಣಗೊಂಡ ಬಿಜೆಪಿ ಸಂಘಟನಾ ಬಲ

ರಾಯಚೂರು, ಅ.7: ಗುಜರಾತ್ ಮುಖ್ಯಮಂತ್ರಿ ಹಾಗೂ ದೇಶದ ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿ ಅವರು ಆಡಳಿತದ ಜವಾಬ್ದಾರಿ ಹೊತ್ತು 25 ವರ್ಷಗಳನ್ನು ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಜಿಲ್ಲಾ ಘಟಕ ಬುಧವಾರ ನಗರದಲ್ಲಿ ಆಯೋಜಿಸಿದ್ದ ‘ಸೇವಾ ಜ್ಯೋತಿ’ ಕಾರ್ಯಕ್ರಮವು ಪಕ್ಷದ ಕಾರ್ಯಕರ್ತರ ಬೃಹತ್ ಸಮಾಗಮಕ್ಕೆ ಸಾಕ್ಷಿಯಾಯಿತು.

ಮುಂದೆ ಓದಿ →
ರಾಯಚೂರು ರಾಯಚೂರು

ಆಯುರ್ವೇದ ಚಿಕಿತ್ಸೆಯಿಂದ ಉತ್ತಮ ಆರೋಗ್ಯ ಸಾಧ್ಯ: ಕೇಶವ ರೆಡ್ಡಿ

ರಾಯಚೂರು, ಅ.7: ಭಾರತೀಯ ಪರಂಪರೆಯ ಆಯುರ್ವೇದ ಚಿಕಿತ್ಸಾ ಪದ್ಧತಿ ಆರೋಗ್ಯ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದು, ಜನರಿಗೆ ಗುಣಮಟ್ಟದ ಚಿಕಿತ್ಸೆ ಮತ್ತು ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಪೂರ್ಣಿಮಾ ಆಯುರ್ವೇದಿಕ್ ಮೆಡಿಕಲ್ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವನ್ನು ಆರಂಭಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ…

ಮುಂದೆ ಓದಿ →
ರಾಯಚೂರು ರಾಯಚೂರು

ಅ.16ರಂದು ಐಜಿ ಪೆಟ್ರೋಕೆಮಿಕಲ್ಸ್ ಎದುರು ಪ್ರತಿಭಟನೆ, ರಸ್ತೆ ತಡೆ: ಜಾವೀದ್ ಖಾನ್

ರಾಯಚೂರು: ಹೆಗ್ಗಸನಹಳ್ಳಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಐಜಿ ಪೆಟ್ರೋಕೆಮಿಕಲ್ಸ್ ಲಿಮಿಟೆಡ್‌ನ ಕೈಗಾರಿಕಾ ಚಟುವಟಿಕೆಗಳಿಗೆ ಸಂಬಂಧಿಸಿದ ಪರವಾನಿಗೆ, ಜಮೀನು ಬಳಕೆ, ಪರಿಸರ ಹಾಗೂ ಕಾರ್ಮಿಕರ ಬಾಕಿ ಸೌಲಭ್ಯಗಳ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಅ.16ರಂದು ಕಂಪನಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ರಸ್ತೆ ತಡೆ…

ಮುಂದೆ ಓದಿ →
ರಾಯಚೂರು ರಾಯಚೂರು

ಬಸ್ ನಿಲ್ದಾಣದ ಶೌಚಾಲಯ ಅವ್ಯವಸ್ಥೆ; ತುರ್ತು ಕ್ರಮಕ್ಕೆ ಆಗ್ರಹ

ರಾಯಚೂರು: ತಾಲೂಕಿನ ಪ್ರಮುಖ ಹೋಬಳಿ ಕೇಂದ್ರವಾದ ಗಿಲ್ಲೆಸೂಗೂರು ಬಸ್ ನಿಲ್ದಾಣದಲ್ಲಿರುವ ಶೌಚಾಲಯ ಮೂಲಸೌಕರ್ಯಗಳ ಕೊರತೆಯಿಂದ ಬಳಕೆಗೆ ಬಾರದ ಸ್ಥಿತಿಯಲ್ಲಿದ್ದು, ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಮುಂದೆ ಓದಿ →
ರಾಯಚೂರು ರಾಯಚೂರು

ಸಫಾಯಿ ಕರ್ಮಚಾರಿಗಳ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಕ್ರಮ: ಹರದೀಪ್ ಸಿಂಗ್ ಗಿಲ್

ರಾಯಚೂರು: ಭಾರತ ಸರ್ಕಾರದ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಹರದೀಪ್ ಸಿಂಗ್ ಗಿಲ್ ಅವರು ರಾಯಚೂರು ನಗರಕ್ಕೆ ಭೇಟಿ ನೀಡಿ, ಸಫಾಯಿ ಕರ್ಮಚಾರಿಗಳು ಹಾಗೂ ಪೌರಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ನೇರವಾಗಿ ಮಾಹಿತಿ ಪಡೆದುಕೊಂಡರು.

ಮುಂದೆ ಓದಿ →
ರಾಯಚೂರು ರಾಯಚೂರು

12 ಮಾರಕ ರೋಗಗಳ ತಡೆಗೆ ಮಕ್ಕಳಿಗೆ ವಯಸ್ಸಿಗೆ ತಕ್ಕ ಲಸಿಕೆ ಕಡ್ಡಾಯ: ಡಾ. ಗುಂಡಮ್ಮ

ರಾಯಚೂರು: ಬಾಲ್ಯದಲ್ಲಿ ಕಾಣಿಸಿಕೊಳ್ಳುವ 12 ಮಾರಕ ರೋಗಗಳಿಂದ ಮಕ್ಕಳನ್ನು ರಕ್ಷಿಸಲು ಹುಟ್ಟಿನಿಂದ ಒಂದು ವರ್ಷದೊಳಗೆ ವಯಸ್ಸಿಗೆ ಅನುಗುಣವಾಗಿ ಎಲ್ಲ ಲಸಿಕೆಗಳನ್ನು ತಪ್ಪದೆ ಹಾಕಿಸಬೇಕು ಎಂದು ಸಿಯಾತಲಾಬ್ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಗುಂಡಮ್ಮ ಪಾಲಕರಿಗೆ ಮನವಿ ಮಾಡಿದರು.

ಮುಂದೆ ಓದಿ →
ರಾಯಚೂರು ರಾಯಚೂರು

ಆನೆಕಾಲು ರೋಗ ಪತ್ತೆಗೆ ರಾತ್ರಿವೇಳೆ ರಕ್ತಲೇಪನ ಪರೀಕ್ಷೆಗೆ ಸಹಕರಿಸಿ: ಡಾ. ಸಂಗಮೇಶ್

ಕಲ್ಲೂರು, ಅ.6: ಸೊಳ್ಳೆಗಳ ಮೂಲಕ ಹರಡುವ ಆನೆಕಾಲು ರೋಗವನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ ನಿಯಂತ್ರಿಸಲು ಆರೋಗ್ಯ ಇಲಾಖೆ ನಡೆಸುತ್ತಿರುವ ರಾತ್ರಿವೇಳೆಯ ರಕ್ತಲೇಪನ ಪರೀಕ್ಷೆಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಕಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಸಂಗಮೇಶ್ ಮನವಿ ಮಾಡಿದರು.

ಮುಂದೆ ಓದಿ →
ಮಾನ್ವಿ ರಾಯಚೂರು ಮಾನ್ವಿ

ಅ.11ರಿಂದ ಕರೇಗುಡ್ಡ ಶ್ರೀ ಮಹಾಂತೇಶ್ವರ ಮಠದಲ್ಲಿ ಶ್ರೀದೇವಿ ಪುರಾಣ

ಮಾನ್ವಿ: ತಾಲೂಕಿನ ಕರೇಗುಡ್ಡ ಗ್ರಾಮದ ಶ್ರೀ ಮಹಾಂತೇಶ್ವರ ಮಠದಲ್ಲಿ ದಸರಾ ಮಹೋತ್ಸವದ ಅಂಗವಾಗಿ ಅ.11ರಿಂದ ಶ್ರೀದೇವಿ ಪುರಾಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಮಠದ ಶ್ರೀ ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ತಿಳಿಸಿದ್ದಾರೆ.

ಮುಂದೆ ಓದಿ →
ಮಾನ್ವಿ ರಾಯಚೂರು ಮಾನ್ವಿ

ಮುಖ್ಯ ಚುನಾವಣಾ ಆಯುಕ್ತರ ವಜಾಗೆ ಆಗ್ರಹಿಸಿ ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಮನವಿ

ಮಾನ್ವಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಕುರಿತು ಉಂಟಾಗಿರುವ ಗಂಭೀರ ಅನುಮಾನಗಳು ಮತ್ತು ಆಕ್ಷೇಪಗಳ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ವಜಾಗೊಳಿಸಬೇಕು ಎಂದು ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಆಗ್ರಹಿಸಿದೆ.

ಮುಂದೆ ಓದಿ →
ರಾಯಚೂರು ರಾಯಚೂರು

ಮಡಿವಾಳ ಸಂಘದ ಜಿಲ್ಲಾಧ್ಯಕ್ಷರಾಗಿ ಯು. ಆಂಜನೇಯ ಆಯ್ಕೆ: ನಂಜಪ್ಪ ಸ್ಪಷ್ಟನೆ

ರಾಯಚೂರು: ಕರ್ನಾಟಕ ಮಡಿವಾಳ ಸಂಘದ ರಾಯಚೂರು ಜಿಲ್ಲಾಧ್ಯಕ್ಷರಾಗಿ ಯು. ಆಂಜನೇಯ ಅವರನ್ನು ಅಧಿಕೃತವಾಗಿ ಆಯ್ಕೆ ಮಾಡಲಾಗಿದೆ ಎಂದು ಮಡಿವಾಳ ಮಾಚಿದೇವ ನಿಗಮದ ಅಧ್ಯಕ್ಷ ಹಾಗೂ ಕರ್ನಾಟಕ ಮಡಿವಾಳ ಸಂಘದ ರಾಜ್ಯಾಧ್ಯಕ್ಷ ನಂಜಪ್ಪ ತಿಳಿಸಿದರು.

ಮುಂದೆ ಓದಿ →
ದೇವದುರ್ಗ ರಾಯಚೂರು ದೇವದುರ್ಗ

‘ಕರ್ನಾಟಕ ಧಮ್ಮ ಜನಜಾಗೃತಿ ಯಾತ್ರೆ–2026’ಕ್ಕೆ ಚಾಲನೆ

ದೇವದುರ್ಗ, ಅ.6: ಧಮ್ಮ, ಸಮಾನತೆ ಹಾಗೂ ಸಾಮಾಜಿಕ ಜಾಗೃತಿಯ ಸಂದೇಶವನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ‘ಕರ್ನಾಟಕ ಧಮ್ಮ ಜನಜಾಗೃತಿ ಯಾತ್ರೆ–2026’ಕ್ಕೆ ದೇವದುರ್ಗದಲ್ಲಿ ಚಾಲನೆ ನೀಡಲಾಯಿತು.

ಮುಂದೆ ಓದಿ →
ಮಾನ್ವಿ ರಾಯಚೂರು ಮಾನ್ವಿ

ವಿವಿಧತೆಯಲ್ಲಿ ಏಕತೆ ದೇಶದ ವೈಶಿಷ್ಟ್ಯ: ಡಾ. ಜೆ.ಎಲ್. ಈರಣ್ಣ

ಮಾನ್ವಿ: ದೇಶದ ವೈವಿಧ್ಯತೆಯನ್ನು ಗೌರವಿಸುವುದರೊಂದಿಗೆ ಏಕತೆ ಮತ್ತು ಸೌಹಾರ್ದದ ಮೌಲ್ಯಗಳನ್ನು ಯುವಜನರಲ್ಲಿ ಬೆಳೆಸುವುದು ಇಂದಿನ ಅಗತ್ಯವಾಗಿದೆ ಎಂದು ಬಾಷುಮಿಯಾ ಸಾಹುಕಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಜೆ.ಎಲ್. ಈರಣ್ಣ ಹೇಳಿದರು.

ಮುಂದೆ ಓದಿ →